ಜ್ಞಾನಯೋಗಿಗಳಾಗಿ ಸದಾಕಾಲ ಸಮಾನತೆಗಾಗಿ ಶ್ರಮಿಸುವ ಪ್ರಯತ್ನ ಮಾಡೋಣ. ಡಾ ,ಯಂಕಣ್ಣ.,
ಜ್ಞಾನಯೋಗಿಗಳಾಗಿ ಸಮಾನತೆಯನ್ನು ಸ್ಥಾಪಿಸಲು ಸದಾಕಾಲ ಶ್ರಮಿಸಿ ನಾವೂ ಬಾಬುಜಿರವರಂತಾಗೋಣ ಎಂದು ರಾಯಚೂರು ಸರಕಾರಿ ಪ್ರಥಮದರ್ಜೆ ಕಾಲೆರಜಿನ ಪ್ರಾಂಶುಪಾಲರಾಗಿರುವ ಡಾ,ಯಂಕಣ್ಣರವರು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಶನಿವಾರ ಬೆಳಿಗ್ಗೆ ರಾಯಚೂರಿನ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಸಿರುಕ್ರಾಂತಿಯ ಹರಿಕಾರ ಡಾ,ಬಾಬು ಜಗಜೀವನ್ ರಾಮ್ ರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಬರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರೊಂದಿಗೆ ಉಪ್ಪಿನ ಸತ್ಯಾಗ್ರಹ ಮಾಡಿ ಸಂವಿಧಾನ ರಚನಾಸಭೆಯ ಸದಸ್ಯರಾಗಿ,ಮದ್ಯಂತರ ಸರಕಾರದಲ್ಲಿ ಸಚಿವರಾಗಿ, ಸುಮಾರು ನಲವತ್ತು ವರ್ಷಗಳ ಕಾಲ ನಿರಂತರವಾಗಿ ಮಂತ್ರಿಯಾಗಿ ಸಂಸತ್ತಿನಲ್ಲಿ ಇದ್ದ ಭಾರತದ ಏಕೈಕ ವ್ಯಕ್ತಿಯೆಂದರೆ ಬಾಬೂಜಿರವರು ಎಂದರು. ನಂತರ ಮಾತನಾಡಿದ ಹಿರಿಯ ಪ್ರಾಧ್ಯಾಪಕ ಡಾ,ಪ್ರಾಣೇಶ ಕುಲಕರ್ಣಿ ಇವರು ಭಾರತದ ಉಪಪ್ರಧಾನಮಂತ್ರಿಗಳಾಗಿ,ಕಾರ್ಮಿಕ ಸಚಿವರಾಗಿ ಕೃಷಿಸಚಿವರಾಗಿ,ರಕ್ಷಣಾ ಸಚಿವರಾಗಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿ ಧೀನದಲಿತರ ಸಮಾನತೆಗಾಗಿ ಹಲವು ಕೆಲಸಗಳನ್ನು ಮಾಡಿ ಈಗ ಪ್ರಸಥಸ್ಮರಣೀರಾಗಿ ಉಳಿದಿದ್ದಾರೆ. ಅವರಂತೆ ನಾವಾಗಲು ಅವರ ಗುಣಗಳನ್ನು ನಾವೂ ಅಳವಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಾವಿತ್ರಿ ಕೆ,ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿಯಾದ ಫಮೀದ್ ಬೇಗ್ ಸೇರಿದಂತೆ ಭೋಧಕ ಮತ್ತು ಭೋದಕೇತರ ವರ್ಗದವರು, ವಿದ್ಯಾರ್ಥಿಗಳು ಇದ್ದರೂ. ವರದಿ:- ಸುರೇಶ ಬಳಗಾನೂರು.
What's Your Reaction?






