ತುರುವಿಹಾಳ ಪಪಂ ಉಪಚುನಾವಣೆ: ಬಿಜೆಪಿ ಭರ್ಜರಿ ಗೆಲುವು: ಶಾಸಕರ ಸ್ವಂತ ಊರಲ್ಲೇ ಕಾಂಗ್ರೆಸ್ಥೆ ಮುಖಭಂಗ - ಮಸ್ಕಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ

ಹೌದು ಪ್ರಿಯ ವೀಕ್ಷಕರೆ ಮಸ್ಕಿ ವಿಧಾನಸಭಾ ಕ್ಷೇತ್ರದ ತುರುವಿಹಾಳ ಪಟ್ಟಣ ಪಂಚಾಯಿತಿಯ 4ನೇ ವಾರ್ಡಿನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದು, ಇದು ಸ್ಥಳೀಯ ಶಾಸಕರಾದ ಬಸನಗೌಡ ತುರುವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಚುನಾವಣೆ ಆಗಿತ್ತು.

Dec 25, 2025 - 08:31
 0  50
ತುರುವಿಹಾಳ ಪಪಂ ಉಪಚುನಾವಣೆ: ಬಿಜೆಪಿ ಭರ್ಜರಿ ಗೆಲುವು: ಶಾಸಕರ ಸ್ವಂತ ಊರಲ್ಲೇ ಕಾಂಗ್ರೆಸ್ಥೆ ಮುಖಭಂಗ - ಮಸ್ಕಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ
ವರದಿ : HS nagalikar
ತುರುವಿಹಾಳ ಪಪಂ ಉಪಚುನಾವಣೆ: ಬಿಜೆಪಿ ಭರ್ಜರಿ ಗೆಲುವು: ಶಾಸಕರ ಸ್ವಂತ ಊರಲ್ಲೇ ಕಾಂಗ್ರೆಸ್ಥೆ ಮುಖಭಂಗ - ಮಸ್ಕಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ

ಶಾಸಕರ ಸ್ವಂತ ತವರೂರಲ್ಲೇ ಕಾಂಗ್ರೆಸ್ ಭಾರಿ ಹಿನ್ನಡೆ ಎದುರಾಗಿದ್ದು, ಈ ಫಲಿತಾಂಶ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 4ನೇ ವಾರ್ಡಿನಲಿ ಒಟ್ಟು 912 ಮತದಾರರು ಇದ್ದು, 735 ಮಂದಿ ಮತದಾನ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ ಅವರು 376 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 354 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಕಡಿಮೆ ಅಂತರದಾದರೂ, ರಾಜಕೀಯವಾಗಿ ಇದು ಕಾಂಗ್ರೆಸ್ ಹಾಗೂ ಸ್ಥಳೀಯ ಶಾಸಕರಿಗೆ ದೊಡ್ಡ ಮುಖಭಂಗವೆನ್ನಲಾಗಿದೆ.

ಈ ಉಪಚುನಾವಣೆಯ ಫಲಿತಾಂಶದಿಂದ, ಹಣಬಲ ಹಾಗೂ ಅಧಿಕಾರದ ಬಲವನ್ನು ಲೆಕ್ಕಿಸದೆ ಮತದಾರರು ಸ್ಪಷ್ಟ ತೀರ್ಮಾನ ನೀಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಿಜೆಪಿ ಪರವಾದ ಈ ಗೆಲುವು, 2028ರ ಮಸ್ಕಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ತುರುವಿಹಾಳ ಪಟ್ಟಣದಲ್ಲಿ ಈ ಫಲಿತಾಂಶದ ನಂತರ ಮಸ್ಕಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗುವ ಸೂಚನೆಗಳು ಗೋಚರಿಸುತ್ತಿವೆ. ಮತದಾರರು ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತವೆಂದು ಭವಿಷ್ಯ ನುಡಿಯುತ್ತಿದ್ದಾರೆ.

What's Your Reaction?

like

dislike

love

funny

angry

sad

wow