ಒಳ ಮೀಸಲಾತಿ ಕಿಚ್ಚು..! ಮಸ್ಕಿ ಸಂಪೂರ್ಣ ಬಂದ್..! ಯಶಸ್ವಿ..!

ಒಳ ಮೀಸಲಾತಿ ಬಂದ್ ಹಿನ್ನೆಲೆಯಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳ  ವಾಹನ  ಅಡಗಟ್ಟಿ  ಧಿಕ್ಕಾರ ಕೋಗಿ  ಆಕ್ರೋಶ ವ್ಯಕ್ತಪಡಿಸಿದ ಘಟನೆ  ನಡೆಯಿತು

Oct 5, 2024 - 09:19
Oct 5, 2024 - 18:43
 0  304

ಮಸ್ಕಿ : ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯಹೋರಾಟಗಾರರು ಬಂದ್ ಹಾಗೂ ಬೃಹತ್ ಪ್ರತಿಭಟನೆ ಮಾಡಿ ತಹಸಿಲ್ದಾರ್ ರವರ ಮೂಲಕ  ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ  ಒಳ ಮೀಸಲಾತಿ ಐಕ್ಯತೆ ಹೋರಾಟ ಸಮಿತಿಯ ಮುಖಂಡರು  ನ್ಯಾಯಾಲಯದ ತೀರ್ಪಿಗೆ ಮುನ್ನ ತಾವು ಹಾಗು ತಮ್ಮ ಪಕ್ಷವು ಚಿತ್ರದುರ್ಗದ ಲಕ್ಷಾಂತರ ಜನರ ಸಮಾವೇಶದಲ್ಲಿ ಘೋಷಿಸಿದಂತೆ ನುಡಿದಂತೆ ನಡೆ ಯುತ್ತೇವೆ ಎಂಬ ಭರವಸೆ ಈಗ ದಿನದಿನೇ ದೂರವಾಗುತ್ತಿದೆ. ಇದ ಅರ್ಥ ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನೊಂದ ಸಮುದಾ ಯಗಳ ಮಧ್ಯೆ ಪರ ವಿರೋಧದ ಪರಸ್ಪರ ವಾದ ವಿವಾದಗಳು ಹೆಚ್ಚಾಗಲಿ, ಈಗಾಗಲೇ ಆರಂಭವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಮುಗಿದು ಖಾಲಿಯಾಗಲಿ, ಮತ್ತೊಂದು ಹತ್ತು ಹದಿನೈದು ವರ್ಷಗಳ ವಿದ್ಯೆ ಉದ್ಯೋ ಗ ಪಡೆದ ಕೆಲ ಬಲಾಡ್ಯ ಸಮುದಯಗಳೇ ಮತ್ತಷ್ಟು ಬಲಾಡ್ಯರಾಗಲಿ, ಅವಕಾಶ ವಂಚಿತ ಬಹು ಸಂಖ್ಯಾತರು ಬರಿಗೈಲಿ ಪರದಾಡಲಿ ಎಂಬ ಮನಸ್ಥಿತಿಗೆ ತಾವು ಶರಣಾಗಿದ್ದೀರಿ ಎಂಬ ಆತಂಕವು ತಳ ಸಮುದಾಯ ಗಳಲ್ಲಿ ಹಾಸು ಹೊಕ್ಕಿದೆ. ಬಿಜೆಪಿ ಸರ್ಕಾರದ ಒಳ ಮೀಸಲಾತಿ ತಾರತಮ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿ ಜಾತ್ಯಾತೀತ ಮನೋಭಾವದ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲಿಸಿ ಸ್ಥಿರ
ಕಳೆದ ಇಪ್ಪತ್ತು ವರ್ಷಗಳ ಕಾಲ ಸರ್ವೋಚ್ಚನ್ಯಾಯಾಲಯದಲ್ಲಿ ನಡೆದ ಸುಧೀರ್ಘ ವಿಚಾರಣೆಯ ನಂತರವೇ ಸಾಮಾಜಿಕ ನ್ಯಾಯಕ್ಕೆ ಸ್ಪಷ್ಟ ಗೆಲುವು ದೊರೆತು ಎರಡು ತಿಂಗಳು ಗತಿಸಿದರೂ ತಾವುಗಳು ಮತ್ತೊಂ ದು ಸಮಿತಿಯ ನೇಮಕವೆಂಬ ಕಾಲಹರಣದ ಮತ್ತೊಂದು ಸುತ್ತಿನ ವಿಳಂಬಕ್ಕೆ ದಾರಿ ಮಾಡಿಕೊಡುತ್ತಿರು ವುದು ಯಾವ ಸೀಮೆಯ ನ್ಯಾಯ ಎನ್ನುವುದನ್ನು ಸಾರ್ವಜನಿಕವಾಗಿ ಪ್ರಕಟಿಸಿ , ಕಳೆದ ಮೂವತ್ತು ವರ್ಷಗಳಿಂದ ಆ ಯೋಗದ ರಚನೆ ಗಾಗಿ, ರಚನೆಯಾದ ಆಯೋ ಗದ ಅನುದಾನಕ್ಕಾಗಿ, ಅನುದಾನದ ನಂತ ರ ಆಯೋ ಗವು ನೀಡಿದ ವರದಿಯ ಶಿಫಾರಸ್ಸಿಗಾಗಿ ಇದೀಗ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಅನುಷ್ಟಾನಕ್ಕಾಗಿ ಎಷ್ಟು ತಲೆಮಾರುಗಳು ಬೀದಿಗೆ ಬಂತು ಹೋರಾಡ ಬೇಕು ಎನ್ನುವುದನ್ನು ತಾವುಗಳು ಖಾತರಿಪಡಿ ಸಿ ಎಂದು ಈ ಜನಾಂದೋಲನದ ಮೂ ಲಕ ಆಗ್ರಹ ಪಡಿಸುತ್ತೇವೆ ಎಂದರು.
ಪಟ್ಟಣದ ಗಾಂಧಿ ವೃತದಿಂದ   ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ವಿವಿದೆಡೆ ಸಂಚರಿಸಿ ನಂತರ ಅಶೋಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ  ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿದರು.

ವರದಿ: ಎಸ್ ನಜೀರ್ ಪಜಾ ಪ್ರತಿಧ್ವನಿ ಕನ್ನಡ ಸುದ್ದಿ ವಾಹಿನಿ maski

What's Your Reaction?

like

dislike

love

funny

angry

sad

wow