ವಿಬಿ-ಜಿ ರಾಮ್ ಜಿ ಯೋಜನೆ ಕೇಂದ್ರ ಸರ್ಕಾರ ನಡೆ ಮಹಾತ್ಮ ಗಾಂಧೀಜಿಗೆ ಮಾಡಿದ ಅವಮಾನ:ಜಯಪ್ಪ ಮೆದಿಕಿನಾಳ
ಮಸ್ಕಿ :ಡಿ-31 ಮನರೇಗಾ ಯೋಜನೆಯ ಬದಲಿಗೆ, ವಿಬಿ-ಜಿ ರಾಮ್ ಜಿ ಯೋಜನೆ ಮಹಾತ್ಮ ಗಾಂಧೀಜಿಗೆ ಕೇಂದ್ರ ಸರ್ಕಾರ ಮಾಡಿದ ಅವಮಾನ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ನಗರ ಘಟಕ ಅಧ್ಯಕ್ಷ ಜಯಪ್ಪ ಮೆದಿಕಿನಾಳ ಮಸ್ಕಿಯ ಪತ್ರಿಕಾ ಭವನದಲ್ಲಿ ನಡೆದ ಸಿದ್ದಿಗೋಷ್ಠಿ ಯಲ್ಲಿ ಹೇಳಿದರು.
ಕಾಂಗ್ರೇಸ್ ನೇತೃತ್ವದ ಯು.ಪಿ.ಎ ಸರ್ಕಾರವು 2005 ರಲ್ಲಿ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರನ್ನು ಸೇರಿದಂತೆ ಕಾಯ್ದೆಯಲ್ಲಿನ ಹಲವು ಪ್ರಮುಖ ಅಂಶಗಳಿಗೆ ಬದಲಾವಣೆ ತರಲು ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಾಂಗ್ರೇಸ್ ಸರ್ಕಾರದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಾರಿಗೊಂಡ ಯೋಜನೆ ಇದಾಗಿತ್ತು. ಒಂದು ಕಡೆ ಬಡತನ ನಿರ್ಮೂಲನೆ ಮತ್ತು ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವ ನಿಟ್ಟಿನಲ್ಲಿ ರೂಪಿಸಿರುವ ಉದ್ಯೋಗ ಖಾತರಿ ಯೋಜನೆಗೆ ಮಹಾತ್ಮಗಾಂಧೀಜಿಯ ಹೆಸರು ತುಂಬಾ ಅರ್ಥಪೂರ್ಣವಾಗಿದೆ.
ಕಳೆದ 20 ವರ್ಷಗಳಿಂದ ದೇಶದ ಗ್ರಾಮೀಣ ಭಾಗದ ಬಡ ಜನರು ಮತ್ತು ಕೂಲಿ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕೆಲಸ ನೀಡುವ “ಮನರೇಗಾ” ಯೋಜನೆ ತುಂಬಾ ನೆರವಾಗಿದೆ ಆದರೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೇ ಕೇಂದ್ರ ಸರ್ಕಾರ ಏಕಾ-ಏಕಿ ಉದ್ಯೋಗ ಖಾತರಿ ಯೋಜನೆಗೆ ಇದ್ದ ಮಹಾತ್ಮಗಾಂಧೀಜಿಯ ಹೆಸರನ್ನು ಈ ಯೋಜನೆಯಿಂದ ಕೈ ಬಿಟ್ಟು ಅವರ ಜಾಗಕ್ಕೆ ರಾಮನನ್ನು ತಂದು ಕೂರಿಸಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಮಾಡಿದ್ದು ತಪ್ಪು ಮತ್ತು ಖಂಡನೆ.
ಈ ಹಿಂದೆ ಇದ್ದ ಕಾಯ್ದೆಯಲ್ಲಿ 365 ದಿನಗಳಲ್ಲಿ ಯಾವಾಗ ಬೇಕಾದರೂ ಕೆಲಸ ಮಾಡಬಹುದಾಗಿತ್ತು ಈಗ ವಿ-ಬಿ-ಜಿ ರಾಮ್ ಜೀ ಯೋಜನೆಯಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಿರುವ ಸಮಯದಲ್ಲಿ 60 ದಿನ ಈ ಯೋಜನೆಯಲ್ಲಿ ಉದ್ಯೋಗ ಕೇಳುವಂತಿಲ್ಲ, ಕೆಲಸ ಮಾಡುವಂತಿಲ್ಲ ಎಂಬ ಷರತ್ತನ್ನು ಜನ ವಿರೋಧಿ, ಕೂಲಿ ಕಾರ್ಮಿಕ ವಿರೋಧಿ ಯೋಜನೆ ಬಿ.ಜೆ.ಪಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.
ಯು.ಪಿ.ಎ ಕಾಂಗ್ರೇಸ್ ಅವಧಿಯಲ್ಲಿ ಜಾರಿಗೊಳಿಸಿದ ಜನಪ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಿಸುವುದಕ್ಕೆ ಯಾವ ಕಾರಣಗಳು ಇರಲಿಲ್ಲ. ಈ ಯೋಜನೆಯಲ್ಲಿ ಸರಳೀಕರಣಗೊಳಿಸಲಾಗಿದೆ ಮತ್ತು ಪರಿಣಾಮಕಾರಿಗೊಳಿಸಲಾಗಿದೆ ಎಂದು ಬಿ.ಜೆ.ಪಿ ಯವರು ಹೇಳುತ್ತಿದ್ದಾರೆ. ಈ ಹಿಂದೆ ಇದ್ದ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗ ನೀಡಲಾಗುತ್ತದೆಂದು ಸುಳ್ಳು ಹೇಳುತ್ತಿದೆ ಬಿ.ಜೆ.ಪಿ. ಪಕ್ಷ
ಸುಮಾರು 2 ದಶಕಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಗ್ಯಾರಂಟಿ ನೀಡಿದ್ದ “ನರೇಗಾ" ಯೋಜನೆಯನ್ನು ಜನ ವಿರೋಧಿ, ರೈತ ವಿರೋಧಿ, ಕೂಲಿ ಕಾರ್ಮಿಕ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ.
ಇದುವರೆಗೂ ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾಗಿದ್ದ ಈ ಯೋಜನೆಗೆ ಈಗ ಕೇಂದ್ರ ಸರ್ಕಾರ ಶೇ. 60% ರಷ್ಟು ಅನುದಾನವನ್ನು ನೀಡುತ್ತದೆ. ಅದರಂತೆ ರಾಜ್ಯ ಸರ್ಕಾರವು ಶೇ. 40% ರಷ್ಟು ಅನುದಾನವನ್ನು ನೀಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಯನ್ನು ಹಾಕಿದೆ ಈ ಬಿ.ಜೆ.ಪಿ ಕೇಂದ್ರ ಸರ್ಕಾರ, ಇದು ಖಂಡನೀಯ.
ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಯೋಜನೆಯು ಕಾಮಗಾರಿಗಳನ್ನು ಕೈಗೊಳ್ಳಲು ಪ್ರತ್ಯೇಕ ಗ್ರಾಮ ಸಭೆಯ ಮೂಲಕ ಕ್ರಿಯಾ ಯೋಜನೆಯಲ್ಲಿ ಏನು ಬೇಕು-ಏನು ಬೇಡ ಎಂದು ತೀರ್ಮಾನಿಸಲಾಗುತ್ತಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಯಾವ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು, ಎಲ್ಲಿ ಕೆಲಸ ನೀಡಬೇಕು & ಯಾವ ಕೆಲಸ ನೀಡಬೇಕು ಎಂದು ತೀರ್ಮಾನಿಸುವುದು ಕೇಂದ್ರ ಸರ್ಕಾರದ ತೀರ್ಮಾನವೇ ಅಂತಿಮ.ಕೇಂದ್ರ ಬ.ಜೆ.ಪಿ ಸರ್ಕಾರ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಅದಕ್ಕೆ ಬೇಕಾಗಿರುವುದು ಅಭಿವೃದ್ಧಿಯಲ್ಲ ಅದಕ್ಕೆ ಬೇಕಿರುವುದು ಕಾಂಗ್ರೇಸ್ ಸರ್ಕಾರ ಜಾರಿ ಮಾಡಿದ್ದ ಯೋಜನೆಯ ಹೆಸರು ಮತ್ತು ಇಲಾಖೆಯ ಹೆಸರುಗಳನ್ನು ಬದಲಾಯಿಸುವುದೇ ಕೇಂದ್ರ ಅಭಿವೃದ್ಧಿ ಎಂದು ತಿಳಿಯುತ್ತಿದೆ. ಅದಕ್ಕೆ ಉದಾ : ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಕೇಂದ್ರಿಯ ವಿದ್ಯಾಲಯವನ್ನು ಪಿಎಂಶ್ರೀ ಕೇಂದ್ರಿಯ ವಿದ್ಯಾಲಯ ಎಂದು ದೆಹಲಿಯ ರಾಜಪಥವನ್ನು ಕರ್ತವ್ಯಪಥ ಎಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಯನ್ನು ಭಾರತೀಯ ನ್ಯಾಯ ಸಂಹಿತಾ (ಬಿ.ಎನ್.ಎಸ್) ಎಂದು ಪ್ರಧಾನಮಂತ್ರಿ ಕಛೇರಿಗೆ ಸೇವಾ ತೀರ್ಥ ಎಂದು ಕೇಂದ್ರ ಸಚಿವಾಲಯಕ್ಕೆ ಕರ್ತವ್ಯ ಭವನ ಎಂದು ಈ ಮೊದಲಿದ್ದ ಹೆಸರುಗಳನ್ನು ಬದಲಿಸಿ ಮರುನಾಮಕರಣ ಮಾಡಿದ್ದೇ ಕೇಂದ್ರ ಬಿ.ಜೆ.ಪಿ ಯು ಇದೇ ನಮ್ಮ ಮಹಾನ್ ಸಾಧನೆ ಎಂದು ಬೀಗುತ್ತಿದೆ.
ಮಹಾತ್ಮಗಾಂಧಿ ಅವರನ್ನು ಕೊಂದವರಿಗೆ ಹೀರೊ ಪಟ್ಟ ಕಟ್ಟಿ ಪೂಜಿಸಿದಂತವರು ಇವರು ಈಗ ಮಹಾತ್ಮನನ್ನು ಇತಿಹಾಸದಿಂದಲೇ ತೆಗೆದು ಹಾಕಲು ಮುಂದಾಗಿದ್ದಾರೆ.
ಗಾಂಧಿಯ ಹೆಸರು ಬಿಟ್ಟು ಭಾರತವಿಲ್ಲ ಎನ್ನುವುದು ಸತ್ಯ.
ಈ ಯೋಜನೆಯಲ್ಲಿದ್ದ ಮಹಾತ್ಮಗಾಂಧಿಯ ಹೆಸರನ್ನು ತೆಗೆದು ಹೊಸದಾಗಿ ವಿಬಿ-ಜಿರಾಮ್ ಜೀ ಎಂದು ನಾಮಕರಣ ಮಾಡಿದ ಬಿ.ಜೆ.ಪಿ ಯ ನಡೆಯನ್ನು ದೇಶದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ರಾಮನನ್ನು ಪ್ರತಿಷ್ಠಾಪಿಸಲು ಗಾಂಧೀಜಿಗೆ ಗುರಿಯಿಡಬೇಕಿತ್ತೇ ಎಂದು ಸುದ್ದಿ ಗೋಷ್ಠಿ ಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಬಸಪ್ಪ ಗುಂಜಳ್ಳಿ, ಸೋಮನಾಥ ಮಾಟೂರು, ಆನಂದಪ್ಪ ನಂಜಲದಿನ್ನಿ, ಸುರೇಶ್ ಅಂತರಗಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು
What's Your Reaction?



