ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ದಿನಾಂಕ:20-10-2024 ರಂದು ತೆಕ್ಕಲಕೋಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 2002-2003ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Nov 30, -0001 - 00:00
 0  233
ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ದಿನಾಂಕ:20-10-2024 ರಂದು ತೆಕ್ಕಲಕೋಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 2002-2003ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೊಟ್ರಬಸಪ್ಪ ಇವರು ವಹಿಸಿಕೊಂಡಿದ್ದರು. 

ವೇದಿಕೆಯ ಮೇಲಿದ್ದ ಗುರುವೃಂದವರಿಂದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ವಿದ್ಯಾ ಅಧಿದೇವತೆಯಾದ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ರವಿಕುಮಾರ ಬಡಿಗೇರ ಹಾಗೂ ಶ್ರೀಮತಿ ಸಿದ್ದಲಿಂಗಮ್ಮ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಮತಿ ರೇಖಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಶ್ರೀ ಅನಂತನಾಗ್ ಹಾಗೂ ಶ್ರೀಮತಿ ಜೈತುನ್ ಬಿ ರವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಶ್ರೀಮತಿ ರಾಧಾ ಉಪ ಪ್ರಾಚಾರ್ಯರು ಸ.ಪ.ಪೂ ಕಾಎಲೇಜು ತೆಕ್ಕಲಕೋಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀ ಮಲ್ಲಿಕಾರ್ಜುನ ಶೆಟ್ಟಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿ‌ ನುಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಗುರುವಂದನೆಯನ್ನು ಸ್ವೀಕರಿಸಿದ

ಶ್ರೀಯುತ ವೀರೇಶಪ್ಪ ನಿವೃತ್ತ ಪ್ರಾಚಾರ್ಯರು.

ಶ್ರೀಯುತ ಎಸ್.ಎಸ್. ಶಿವಕುಮಾರ ಬಳಿಗಾರ ನಿವೃತ್ತ ವಾಣಿಜ್ಯಶಾಸ್ತ್ರ ಉಪನ್ಯಾಸಕರು.

ಶ್ರೀಯುತ ಪಂಪನಗೌಡ ನಿವೃತ್ತ ಉಪ ಪ್ರಾಚಾರ್ಯರು 

ಶ್ರೀಯುತ ಚಂದ್ರಶೇಖರ ನಿವೃತ್ತ ಪ್ರಾಚಾರ್ಯರು.

ಶ್ರೀಯುತ ಚಂದ್ರಶೇಖರ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ಕಂಪ್ಲಿ.

ಶ್ರೀಯುತ ನಾಗರಾಜ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ಪರಶುರಾಂಪುರ.

ಶ್ರೀಯುತ ಗೋಪಾಲಕೃಷ್ಣ, ವಾಣಿಜ್ಯಶಾಸ್ತ್ರ ಉಪನ್ಯಾಸಕರು, ದೊಡ್ಡಬಾತಿ.

ಶ್ರೀಯುತ ವಿ.ಹರಿನಾಥ ಬಾಬು, ಉಪ ನಿರ್ದೇಶಕರು, ಜಿಲ್ಲಾ ಖಜಾನಾ ಇಲಾಖೆ, ಗದಗ.

ಶ್ರೀಮತಿ ಶರಣಮ್ಮ ಬಡ್ತಿ ಮುಖ್ಯೋಪಾಧ್ಯಾಯರು, ಸ.ಪ್ರೌ.ಶಾಲೆ, ಹೆರಕಲ್ಲು.

ಶ್ರೀಮತಿ ಭಾಗ್ಯಲಕ್ಷ್ಮೀ, ಬಡ್ತಿ ಮುಖ್ಯೋಪಾಧ್ಯಾಯರು, ಸಿರವಾರ.

ಶ್ರೀಯುತ ಮೌಲಾಲಿ ಸಮಾಜಶಾಸ್ತ್ರ ಉಪನ್ಯಾಸಕರು.

 ಎಲ್ಲಾ ಉಪನ್ಯಾಸಕರು ಕಾರ್ಯಕ್ರಮ ಆಯೋಜನೆ ಕುರಿತು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಹಳೇ ದಿನಗಳ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳು ಮುಂದಿನ‌ ದಿನಗಳಲ್ಲಿ ಇದೇ ರೀತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಇದರಿಂದ ಪ್ರೇರೆಪಣೆಗೊಂಡ ವಿದ್ಯಾರ್ಥಿಗಳು ತಾವು ಕಲಿತ ಶಾಲೆ , ಕಾಲೇಜು ಹಾಗೂ ಇನ್ನಿತರೆ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕೈ ಜೋಡಿಸುವೆವೆಂದು ಪ್ರತೀಜ್ಞೆ ಮಾಡಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಕೆ.ವೈ.ವೀರೇಶ ಇವರು ಬಡ ಮಕ್ಕಳ ಶಿಕ್ಷಣಕ್ಕೆ ಅಡೆತಡೆಯಿಲ್ಲದ ಸಹಾಯ ಮಾಡುತ್ತೇನೆ. ಸಮಾಜದಲ್ಲಿ ಶಿಕ್ಷಣ ವಂಚಿತ ಮಕ್ಕಳನ್ನು ನನಗೆ ನೀಡಿದರೆ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಛ ಭರಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು.

ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಪ್ರತೀ ತಿಂಗಳು ಇಂತಿಷ್ಟು ಹಣ ಸಂಗ್ರಹ ಮಾಡಿ ಸರಕಾರಿ ಶಾಲೆಗಳ ಸಬಲೀಕರಣ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಹಸ್ತ ನೀಡುತ್ತೇವೆಂದು ಸ್ವಯಂ ಪ್ರೇರಿತವಾಗಿ ಒಪ್ಪಿಗೆ ನೀಡಿದರು.

ಶ್ರೀಮತಿ ಖಾಜಾಬಿ ವಂದನಾರ್ಪಣೆ ಸಲ್ಲಿಸುವ ಮೂಲ

ಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು

What's Your Reaction?

like

dislike

love

funny

angry

sad

wow