15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಬ್ರಷ್ಟಚಾರ.! ದಲಿತ ಸಂರಕ್ಷ ಸಮಿತಿ ಗಂಭೀರ ಆರೋಪ.
ಮಸ್ಕಿ ಕಾರ್ಯನಿರ್ವಾಹಕ ಅಧಿಕಾರಿಕಾರಿಗಳ ತಾಲೂಕ ಪಂಚಾಯತ ಅಧಿಕಾರಿಗಳಿಗೆ ಜಿಲ್ಲಾ ದಲಿತ ಸಂರಕ್ಷ ಸಮಿತಿ ಮನವಿ ಸಲ್ಲಿಸಿ, 15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಬ್ರಷ್ಟಚಾರ.! ಮಾಡಿದ್ದಾರೆ ಎಂದು ಆರೋಪಿಸಿ ಪಂಚಾಯತ ಅಭೀವೃದ್ಧಿ ಅಧಿಕಾರಿಗಳ ಮೇಲೆ ತನೀಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಹಾಗೂ ಜಿಲ್ಲಾ ಮತ್ತು ತಾಲೂಕು ದಲಿತ ಸಂರಕ್ಷ ಸಮಿತಿ ಸಂಘಟನೆ ವತಿಯಿಂದ ದಿನಾಂಕ 05/11/2024 ರಂದು ಅನಿರ್ಧಿಷ್ಟ ಧರಣಿ ಸತ್ಯಗ್ರಹ ಹಮ್ಮಿಕೊಳ್ಳುವು ದಾಗಿ ಮನವಿ ಸಲ್ಲಿಸಿದರು.ಮಸ್ಕಿ ತಾಲೂಕ ಪಂಚಾಯತ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳಾದ 1) ಅಂಕುಶದೊಡ್ಡಿ 2) ಪಾಮನಕಲ್ಲೂರು 3) ಸಂತೆಕೆಲ್ಲೂರು 4) ಮಟ್ಟೂರು 5) ತಲೇಖಾನ 6) ಮಾರಲದಿನ್ನಿ 7)ಮೆದಿಕಿನಾಳ 8) ಅಡವಿಬಾವಿ (ಮಸ್ಕಿ) ಇನ್ನಿತರ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಿ ಅಭೀವೃದ್ಧಿ ಅಧಿಕಾರಿಗಳು ಮನಸೋ ಇಚ್ಚೆ 15 ನೇ ಹಣಕಾಸು, ತೆರಿಗೆ ಸಂಗ್ರಹ, ನರೇಗಾ ಯೋಜನೆಯ ಅನುಧಾನದಲ್ಲಿ ಬಾರಿ ಬ್ರಷ್ಟಾಚಾರ ಮಾಡಿರುವ ತಾಲೂಕ ಪಂಚಾಯತಿ ನರೇಗಾ ಅಧಿಕಾರಿಯಾದ ಶಿವಾನಂದ ರೆಡ್ಡಿ ಯವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಬ್ರಷ್ಟಚಾರ ಮಾಡಲು ಕುಮ್ಮಕ್ಕು ನೀಡಿದ್ದು ಇವರಿಂದಲೆ ಬಾರಿ ಬ್ರಷ್ಟಚಾರ ನಡೆದಿರುತ್ತದೆ ಕಾರಣ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತ್ತು ಮಾಡಲು ಒತ್ತಾಯಿಸುತ್ತೇವೆ. ಹಾಗೂ ಈಗಾಗಲೆ ಪಾಮನಕಲ್ಲೂರು ತಲೇಖಾನ, ಮಟ್ಟೂರು ಮತ್ತು ಸಂತೆಕೆಲ್ಲೂರು ಗ್ರಾಮ ಪಂಚಾಯತಿಗಳ ಮೇಲೆ ದೂರು ನೀಡಿದ್ದು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಎಂದು ಸಮಿತಿಯು ಮನವೀಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಸಂರಕ್ಷ ಸಮಿತಿ ಜೆಲ್ಲಾ ಅಧ್ಯಕ್ಷ ಬಾಲಾಸ್ವಾಮಿ ಜಿನ್ನಾಪುರ್, ಕಲ್ಬುರ್ಗಿ ವಿಭಾಗೀಯ ಸಂಚಾಲಕರು ಮೊನೇಶ ಬಳಗನೂರು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಸ್. ನಜೀರ್ ಮಸ್ಕಿ, ಸಿದ್ದಪ್ಪ ಹೂವಿನಬಾವಿ, ಮೊಹ್ಮದ್ ಶೇಡ್ಮಿ,ಮರೀಸ್ವಾಮಿ ಬೆನಕನಾಳ್,ಅಂರೇಶ್ ಡಬೇರಮಡುಗು ಸೇರಿತ್ತೆ ಇತರರು ಉಪಸ್ಥಿತರಿದ್ದರು.
What's Your Reaction?