ಸಿದ್ದರಾಮಯ್ಯ - ಡಿಕೆಶಿ 'ಬ್ರೇಕ್ ಫಸ್ಟ್ ಮೀಟಿಂಗ್'; ಹೈಕಮಾಂಡ್ ಸೂಚನೆ ಮೇರೆಗೆ ಮಹತ್ವದ ಸಭೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ಸಂದರ್ಭದಲ್ಲೇ ನ. 29ರಂದು ಬೆಳಗ್ಗೆ 9.30ರ ಸುಮಾರಿಗೆ ಡಿಕೆಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಒಂದು ಮೂಲದ ಪ್ರಕಾರ, ಈ ಭೇಟಿಯು ಹೈಕಮಾಂಡ್ ಸೂಚನೆಯಂತೆ ಏರ್ಪಾಟಾಗಿದೆ. ಹಾಗಾಗಿ, ಇದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಯ ಬಿಸಿ ತಾರಕಕ್ಕೇರಿರುವ ನಡುವೆಯೇ, ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ನ. 29ರ ಬೆಳಗ್ಗೆ ಸುಮಾರು 9.30ರ ಹೊತ್ತಿಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನ. 29ರ ಬೆಳಗ್ಗೆ ತಾವು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪರೋಕ್ಷವಾಗಿ ಒಪ್ಪಿದ್ದಾರ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಸಲಿಗೆ, ಕಾಂಗ್ರೆಸ್ ಹೈಕಮಾಂಡ್ ನಿಂದಲೇ ಇಂಥದ್ದೊಂದು ಸೂಚನೆ ಬಂದಿದೆ. ಈಗ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಸಮಸ್ಯೆಯನ್ನು ನೀವಿಬ್ಬರೇ ಕುಳಿತು ಬಗೆಹರಿಸಿಕೊಳ್ಳಿ. ಪರಸ್ಪರ ಭೇಟಿಯಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ ಎಂದು ಖುದ್ದು ಹೈಕಮಾಂಡ್ ನಾಯಕರೇ ಸೂಚಿಸಿದ್ದು ಆ ಹಿನ್ನೆಲೆಯಲ್ಲಿ ನ. 29ರಂದು ಬೆಳಗ್ಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆಯಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಅಸಲಿಗೆ, ನ. 28ರಂದು ಸಂಜೆ ಡಿಕೆಶಿ ಅವರು ದೆಹಲಿಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಅವರು ಏಕಾಏಕಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಆಗಲೇ ಇದರ ಹಿಂದೆ ಏನೋ ಕಾರಣ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದರು. ಅದಾಗಿ, ಸುಮಾರು 1 ಗಂಟೆ ಕಳೆಯುಷ್ಟರಲ್ಲಿ ಸಿಎಂ ಮನೆಯಲ್ಲಿ ಬ್ರೇಕ್ ಫಸ್ಟ್ ಮೀಟಿಂಗ್ ಏರ್ಪಾಟಾಗಿರುವ ವಿಚಾರ ಬೆಳಕಿಗೆ ಬಂತು
ನಿಲುವು ಬದಲಿಲ್ಲ - ಸಿಎಂ?
ಇದೇ ವೇಳೆ, ಸಿದ್ದರಾಮಯ್ಯನವರು ಸಿಎಂ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈವರೆಗೂ ತಾವು ಹೊಂದಿರುವ ನಿಲುವನ್ನು ಬದಲಾಯಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆಂದು ಕೆಲವು ಮೂಲಗಳು ತಿಳಿಸಿದ್ದಾರೆ. ನ. 29ರ ಬೆಳಗ್ಗೆ ನಡೆಯಲಿರುವ ಡಿಕೆಶಿ - ಸಿದ್ದರಾಮಯ್ಯನವರ ನಡುವಿ ಉಪಾಹಾರದ ವೇಳೆ ಪವರ್ ಶೇರಿಂಗ್ ವಿಚಾರ ಚರ್ಚೆಯಾದರೆ, ಆ ಸಂದರ್ಭದಲ್ಲಿ ತಮ್ಮ ಈವರೆಗಿನ ನಿಲುವನ್ನೇ ಪುನರುಚ್ಛರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆನ್ನಲಾಗಿದೆ.
ಹೆಚ್ಚುತ್ತಿರುವ ಕಾವು
2023ರಲ್ಲಿ ಅಧಿಕಾರಕ್ಕೆ ಬಂದಾದ ನಂತರ ಎರಡೂ ವರ್ಷಗಳಾದ ನಂತರ, ಸಿಎಂ ಪಟ್ಟವನ್ನು ಈ ಮೊದಲೇ ಮಾತನಾಡಿದಂತೆ (?) ಡಿಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂದು ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಅದಕ್ಕೆ ಕಾಂಗ್ರೆಸ್ಸಿನಲ್ಲಿರುವ ಡಿಕೆಶಿಯವರ ಆಪ್ತ ಶಾಸಕರು ಕೂಡ ಬೆಂಬಲ ವ್ಯಕ್ತಪಡಿಸಿ ದೆಹಲಿ ಪರೇಡ್ ನಡೆಸಿ ಬಂದಿದ್ದಾರೆ. ಈಗ ಇದೇ ಕೂಗಿಗೆ ಒಕ್ಕಲಿಗರ ಸಂಘ ಹಾಗೂ ಕೆಲವು ಮಠಾಧೀಶರು ದನಿಗೂಡಿಸಿದ್ದಾರೆ.
ಒಕ್ಕಲಿಗರು ಕೂಡ ಹಿಂದುಳಿದ ಸಮುದಾಯದವರೇ' - ಡಿಕೆ ಶಿವಕುಮಾರ್
ಅಂಗನವಾಡಿ ಕಾರ್ಯಕರ್ತೆಯರನ್ನು ಶ್ಲಾಘಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು" ಎಂದು ಬಣ್ಣಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು ಎಂದು ಅವರು ಹೊಗಳಿದರು. ಇದೇ ಸಂದರ್ಭದಲ್ಲಿ ಅವರು, ಒಕ್ಕಲಿಗ ಸಮುದಾಯದವರೂ ಹಿಂದುಳಿದ ವರ್ಗದವರೇ ಎಂದು ಹೇಳಿಕೆ ನೀಡಿದ್ದಾರೆ.
ಡಿಕೆಶಿಗೆ ಕೊಡಲಾಗಿತ್ತಾ 'ಅರ್ಧ ಅವಧಿ ಸಿಎಂ' ಮಾತು
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಕುರಿತು ಚರ್ಚೆ ಜೋರಾಗಿದೆ. ಎರಡುವರೆ ವರ್ಷದ ಬಳಿಕ ಸಿಎಂ ಸ್ಥಾನ ಹಸ್ತಾಂತರದ ಮಾತು ಕೇಳಿಬರುತ್ತಿದ್ದು, ಡಿಕೆಶಿ ಅವರು 'ಕೊಟ್ಟ ಮಾತಿನ ಪಾಠ'ದ ಮೊರೆ ಹೋಗಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಯಶಸ್ಸಿನ ಪೋಸ್ಟ್‌ಗಳನ್ನು ಹಂಚಿಕೊಂಡು 'ಕೊಟ್ಟ ಮಾತಿನಂತೆ ನಡೆದಿದ್ದೇವೆ' ಎಂದು ತಿರುಗೇಟು ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಎರಡು ಬಣಗಳ ಮಧ್ಯೆ 50-50 ಸೂತ್ರದ ಚರ್ಚೆಯೂ ತೀವ್ರವಾಗಿದ್ದು, ಇದಕ್ಕೆ ಉತ್ತರ ನೀಡಬೇಕಾದ ಹೈಕಮಾಂಡ್ ನಾಯಕರು ಸೈಲೆಂಟ್ ಆಗಿರುವುದು ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಸಿಎಂ ಸ್ಥಾನಕ್ಕೆ ಹಕ್ಕು ಪ್ರತಿಪಾದಿಸಲು ಡಿಕೆಶಿಯಿಂದ ಪ್ರಮುಖ 5 ಅಸ್ತ್ರಗಳ ಬಳಕೆ!
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರು ಹೈಕಮಾಂಡ್ ಮುಂದೆ ತಮ್ಮ ಹಕ್ಕನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರು ಪಕ್ಷ ನಿಷ್ಠೆ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ, 2023ರ ಚುನಾವಣಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ, ಅಧಿಕಾರ ಹಂಚಿಕೆ ಒಪ್ಪಂದ ಮತ್ತು ಒಕ್ಕಲಿಗ ಸಮುದಾಯಕ್ಕೆ ಮನ್ನಣೆ ನೀಡುವಂತಹ ಅಂಶಗಳನ್ನು ಮುಂದಿಟ್ಟು ವಾದ ಮಂಡಿಸುತ್ತಿದ್ದಾರೆ. ಅಲ್ಲದೆ, ತಾವು ಹೈಕಮಾಂಡ್‌ನ ಎಲ್ಲಾ ಸೂಚನೆಗಳನ್ನು ನಿಷ್ಠೆಯಿಂದ ಪಾಲಿಸಿರುವುದಾಗಿ ತಿಳಿಸಿದ್ದಾರೆ.
ಸಹೋದರನ ಪರ ಅಖಾಡಕ್ಕೆ ಇಳಿಯಲು ಹೊರಟ ಡಿಕೆ ಸುರೇಶ್!
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸೂಚನೆಗೂ ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ಪರೋಕ್ಷವಾಗಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಹೈಕಮಾಂಡ್ ಸಭೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಡಿ.ಕೆ. ಶಿವಕುಮಾರ್ ಅವರ ಪರವಾಗಿ ಸಹೋದರ ಡಿ.ಕೆ. ಸುರೇಶ್ ಅವರು ದೆಹಲಿಗೆ ತೆರಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ಶೀಘ್ರದಲ್ಲೇ ದೆಹಲಿಯಿಂದ ಬುಲಾವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ
What's Your Reaction?



