ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ತಾಲೂಕಿನ ರೈತರ ಅಭಿವೃದ್ಧಿಗೆ ಅಡಿಗಲ್ಲು-ಶಾಸಕ ಡಾ"ಎನ್.ಟಿ ಶ್ರೀನಿವಾಸ್.
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಿಂದ ಸುಮಾರು 5 ಕಿಲೋಮೀಟರ್ ಅಂತರದಲ್ಲಿರುವ, ಗುಂಡಿನ ಹೊಳೆ ಭೀಜೋತ್ಪಾದನೆ ಕೇಂದ್ರದಲ್ಲಿ. ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸರ್ಕಾರ ಅಸ್ಥು ಎಂದಿದೆ, ಸಂಬಂಧಿಸಿದಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು. ಸರ್ಕಾರ ಹಾಗೂ ಕೃಷಿ ಇಲಾಖೆಯ ಪರವಾಗಿ, ಶಾಸಕರಿಗೆ ಮಂಜೂರಾತಿ ಪ್ರತಿ ನೀಡಿದ್ದಾರೆ. ಈ ಕುರಿತು ಶಾಸಕರು ಇತ್ತೀಚೆಗೆ ಸುದ್ದಿ ಗೋಷ್ಠಿ ಮೂಲಕ ಸ್ಪಷ್ಟಪಡಿಸಿದ್ದಾರೆ,
ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ತಾಲೂಕಿನ ರೈತರ ಅಭಿವೃದ್ಧಿಗೆ ಅಡಿಗಲ್ಲು-ಶಾಸಕ ಡಾ"ಎನ್.ಟಿ ಶ್ರೀನಿವಾಸ್.
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಿಂದ ಸುಮಾರು 5 ಕಿಲೋಮೀಟರ್ ಅಂತರದಲ್ಲಿರುವ, ಗುಂಡಿನ ಹೊಳೆ ಭೀಜೋತ್ಪಾದನೆ ಕೇಂದ್ರದಲ್ಲಿ. ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸರ್ಕಾರ ಅಸ್ಥು ಎಂದಿದೆ, ಸಂಬಂಧಿಸಿದಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು. ಸರ್ಕಾರ ಹಾಗೂ ಕೃಷಿ ಇಲಾಖೆಯ ಪರವಾಗಿ, ಶಾಸಕರಿಗೆ ಮಂಜೂರಾತಿ ಪ್ರತಿ ನೀಡಿದ್ದಾರೆ. ಈ ಕುರಿತು
ಶಾಸಕರು ಇತ್ತೀಚೆಗೆ ಸುದ್ದಿ ಗೋಷ್ಠಿ ಮೂಲಕ ಸ್ಪಷ್ಟಪಡಿಸಿದ್ದಾರೆ,
ಅವರು ಇಲಾಖಾಧಿಕಾರಿಗಳು ಹಾಗೂ ತಜ್ಞರ ತಂಡದೊಂದಿಗೆ, ಬೀಜೋತ್ಪನ್ನ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಅವರು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು, ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಭೂಮಿಯ ಗುಣಮಟ್ಟವನ್ನು ಸುಧಾರಿಸಲು. ಅಂತರ್ಜಲ ನೀರಿನ ಮಟ್ಟವನ್ನು ಹೆಚ್ಚಿಸುವಲ್ಲಿ, ಅಗತ್ಯ ವೈಜ್ಞಾನಿಕ ತಳಹದಿಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ಕೃಷಿಕರು ವೈಜ್ಞಾನಿಕ ತಿಳುವಳಿಕೆ ಹೊಂದಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆದು ಸ್ಚಾವಲಂಭಿಗಳಾಗಬೇಕಿದೆ. ಈ ಸದುದ್ದೇಶದಿಂದ ದೂರದೃಷ್ಟಿ ಇಟ್ಟುಕೊಂಡು, ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದರು.
ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದುಗಲ್, ಸಹಾಯಕ ಕೃಷಿ ನಿರ್ದೇಶಕರಾದ ವಾಮದೇವ, ಕೃಷಿ ವಿಜ್ಞಾನಿಗಳಾದ ಮಂಜುನಾಥ ಬಾನು ವಳ್ಳಿ , ಶ್ರೀಮತಿ ಸುನಿತಮ್ಮ, ಹಾಗೂ ಇತರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದರು.
ಪಟ್ಟಣ ಪಂಚಾಯತಿ ಸದಸ್ಯರಾದ ಪೂರ್ಯಾ ನಾಯ್ಕ, ಮುಖಂಡರಾದ ಉದಯ ಜನ್ನು, ಮಲ್ಲಿಕಾರ್ಜುನ ಗೌಡ, ಬಾಸ್ಕರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
✍️ ವರದಿ :ವಿ.ಜಿ.ವೃಷಭೇಂದ್ರ.
What's Your Reaction?