ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ : ಬಳಗಾನೂರು ಗ್ರಾಮ,ಪಂ,ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಗಂಭೀರ ಆರೋಪ

ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ  ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕ್ರಮಕೆ ಆಗ್ರಹ

Aug 21, 2025 - 06:58
Aug 21, 2025 - 07:00
 0  155
ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ : ಬಳಗಾನೂರು ಗ್ರಾಮ,ಪಂ,ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಗಂಭೀರ ಆರೋಪ

ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಅನುದಾನದ ಕಾಮಗಾರಿ ಅಲ್ಪಸಂಖ್ಯಾತರು ಇಲ್ಲದ  ಏನ್ ಎ ಲೇಔಟ್ ನಲ್ಲಿ  ಕಾಮಗಾರಿ ಮುಗಿಸಿ  ಪ್ರಭಾವಿ ರಾಜಕಾರಣಿ, ಅಧಿಕಾರಿ ಹಾಗೂ ಗುತ್ತಿಗೆದಾರರು ಸೇರಿಕೊಂಡು ಒಂದು ಕೋಟಿ ರೂಪಾಯಿ ಗುಳುಂ ಮಾದಿದ್ದಾರೆ. ಎಂದು ಗ್ರಾಮ ಪಂ.ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಗಂಭೀರ ಆರೋಪ ಮಾಡಿದರು.

ಮಸ್ಕಿ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಕರೆದಿದ್ದ ಸುದ್ಧಿ ಗೋಷ್ಠಿಯಲ್ಲಿ ಅವರು ಮಾತನಾಡಿ

2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಮೂಲ ಸೌಲಭ್ಯಗಳಿಗಾಗಿ 1 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ಆದರೆ ಸರ್ಕಾರದ

ಆದೇಶದಲ್ಲಿ ಅಲ್ಪ ಸಂಖ್ಯಾತರ ಕುಟುಂಬಗಳು ಹೆಚ್ಚಾಗಿ ಇರುವ ಕಾಲೋನಿಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಸರ್ಕಾರದಿಂದ ನಿರ್ದೇಶನ ಇದೆ.

ಆದರೆ ಸ್ಥಳೀಯ ಶಾಸಕರು ಬಳಗಾನೂರು ಗ್ರಾಮದಲ್ಲಿ ಅಲ್ಪ ಸಂಖ್ಯಾತರ ಕುಟುಂಭಗಳು ಅಧಿಕವಾಗಿರುವ ಕಾಲೋನಿಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರು ಎರಡು ಅಥವಾ ಮೂರು ಮನೆ ಇರುವ ಸ್ಥಳವನ್ನು ಗುರುತಿಸಿ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ  ಮೀಸಲಿರುವ ಅನುದಾನವನ್ನು  ಸರಕಾರಕ್ಕೆ ಶಿಫಾರಸ್ಸು ಪತ್ರ ನೀಡಿ ಶಾಸಕರು (ಎನ್.ಎ) `ಆಗಿರುವ ಸ್ಥಳವನ್ನು ಗುರುತಿಸಿ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿ

 2ರಿಂದ 3 ಮನೆಗಳಿರುವ ಕಡೆ ಈ ಅನುದಾನ ಬಳಕೆ ಮಾಡಲು ತರಾತುರಿ ಮಾಡಿ, ಮನೋಸೋಇಚ್ಛೆ ಕಾಮಗಾರಿ ನಡೆಸಿ ಹಣ ಜೇಬಿಗಿಳಿಸಿ ಕೊಂಡಿದ್ದಾರೆ ಎಂದು

ಆರೋಪಿ ಸಿದ್ಧಾರೆ.

ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಬೆಂಗಳೂರು ಇವರಿಗೆ ದೂರನ್ನು ಕೂಡ ಸಲ್ಲಿಸಿ ಅಲ್ಪಸಂಖ್ಯಾತರ ಅನುದಾನ

ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ  ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು  ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ (ಎನ್.ಎ) ಆದೇಶ ಮಾಡುವ ಕಾಲಕ್ಕೆ ತಮ್ಮ ಆದೇಶದಲ್ಲಿ (9) ನಿಬಂಧನೆಗಳ ಪ್ರಕಾರ ಭೂ ಮಾಲೀಕರು ಮೂಲಭೂತ ಸೌಲಭ್ಯಗಳಾದ ಚರಂಡಿ,ರಸ್ತೆ,ನೀರು,ವಿದ್ಯುತ್‌ ಸಂಪರ್ಕ ಮಾಡಿ ಪ್ಲಾಟ್ ಖರೀದಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದೂ ಹಾಗೂ ಇದರ ಎಲ್ಲಾ ಹೊಣೆಗಾರಿಕೆ ಭೂಮಾಲೀಕರ ಜವಾಬ್ದಾರಿ ಇರುತ್ತದೆಂದೂ ಆದೇಶದಲ್ಲಿದೆ.

ಆದರೂ ಸಹಿತ ಶಾಸಕರು ಹಾಗೂ ಅವರ ಆಪ್ತ  ಸಹಾಯಕ ಶರಣೇಗೌಡ  ಎನ್.ಎ ಲೇಔಟ್ ನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದು.ಹಣ ದೋಚುವ ತಂತ್ರ ವಾಗಿದೆ. ಎಂಬುದು ಸ್ಪಷ್ಟವಾಗಿದೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು ನಿಜವಾದ ಫಲಾನುಭವಿಗಳಿಗೆ ವಂಚಿಸಿ NA ಲೇಔಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ತಮ್ಮ ಹಗೇ ತನವನ್ನು ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ . 

What's Your Reaction?

like

dislike

love

funny

angry

sad

wow