ಇಂದು ಐತಿಹಾಸಿಕ ಮಸ್ಕಿ ಆರಾಧ್ಯ ದೈವ ಮಲ್ಲಿಕಾರ್ಜುನ ದೇವರ ರಥೋತ್ಸವ
ಮಸ್ಕಿ:ಫೆ 1, ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವರ ರಥೋತ್ಸವ ಫೆ.01ರಂದು ನಡೆಯಲಿದೆ ಎಂದು ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ ರವರು ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.
ಗುರು ಪರಂಪರೆಯ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಇಂದು ಸಂಜೆ 4.45ಕ್ಕೆ 5.10ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ರಥೋತ್ಸವದ ಅಂಗವಾಗಿ ಜನವರಿ.28 ರಿಂದ ಧ್ವಜಾರೋಹಣ, ಪಲ್ಲಕ್ಕಿ ಸೇವಾ ಕಳಸದ ಮೆರವಣಿಗೆ ಸೇರಿದಂತೆ ಅನೇಕ ವಿವಿಧ ಕಾರ್ಯಕ್ರಮ ಜರುಗಿದೆ.
ರಥೋತ್ಸವ ಹಿನ್ನೆಲೆಯಲ್ಲಿ ಇಂದು ಬೆಳ್ಳಗೆ
ಕಳಸಾರೋಹಣ ಕಾರ್ಯಕ್ರಮ ಹಾಗೂ ಸಂಜೆ 4.30 ರಿಂದ 5.10 ಕ್ಕೆ ಸಲ್ಲುವ ಅಮೃತ ಮಹೋತ್ಸವದಲ್ಲಿ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗುತ್ತದೆ.
ಮಸ್ಕಿ ಸೇರಿ ರಾಯಚೂರು ನೆರೆ ಜಿಲ್ಲೆಗಳ ಭಕ್ತರು ಭಾಗಿಯಾಗಲಿದ್ದಾರೆ.ಮಲ್ಲಯ್ಯನ ರಥವನ್ನು ವೀರಭದ್ರೇಶ್ವರ ದೇವಸ್ಥಾನದ ವರಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಿದ್ದಾರೆ. ದಿನಾಂಕ 2 ರಂದು ಪಲ್ಲಕ್ಕಿ ಸೇವೆ, ಹಾಗೂ 3 ರಂದು ಮಂಗಳವಾರ ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ.
ರಥೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
What's Your Reaction?



