ಬಾಬಾ ಸಾಹೇಬರ   135 ನೇ ಜಯಂತಿ, ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ

ಮಸ್ಕಿ : ಭಾರತದಲ್ಲಿ ಜಾತಿ ವ್ಯವಸ್ಥೆ ಮೂರು ಕಾಲಕ್ಕೂ ಅಸ್ಪೃಶ್ಯರಿಗೆ ಶಾಪವಾಗಿದೆ ಆದ್ದರಿಂದಲೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ನಿರ್ಮೂಲನೆಗಾಗಿ ಹೋರಾಡಿದರು ಎಂದು ಆರ್ ಮಾನಸಯ್ಯ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

Apr 15, 2026 - 08:33
 0  28
ಬಾಬಾ ಸಾಹೇಬರ   135 ನೇ ಜಯಂತಿ, ಭಾವಚಿತ್ರದೊಂದಿಗೆ  ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ
ವರದಿ ✍️ಎಸ್ ನಜೀರ್

ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ

ತಾಲ್ಲೂಕ ಆಡಳಿತ,ತಾಲ್ಲೂಕ ಪಂಚಾಯಿತಿ,ಪುರಸಭೆ,ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತರ್ಜಾತಿ ಮದುವೆಗಳನ್ನು ಸಂಘಟಿಸುವುದು,ಸಹಪಂತಿ ಭೋಜನಾ ಕೂಟಗಳನ್ನು ಏರ್ಪಡಿಸುವುದು,ದಲಿತ ಹಾಗೂ ಹಿಂದುಳಿದ ವರ್ಗಗಳ ಪಾಲಿನ ಭೂ ಸಂಪತ್ತನ್ನು ಹೋರಾಡಿ ವಶಪಡಿಸಿಕೊಳ್ಳುವುದು,ಕುಲಕಸುಬುಗಳನ್ನು ಕಡ್ಡಾಯವಾಗಿ ನಿಲ್ಲಿಸುವುದು,ಕುಲಸೂಚಕ ಹೆಸರುಗಳನ್ನು ಅಳಿಸಿ ಹಾಕುವುದು,ಜಾತಿ ಸಂಘಟನೆಗಳನ್ನು ನಿಷೇಧಿಸುವುದು,ಹಾಗೂ ಅನುಷ್ಠಾನಕ್ಕೆ ತರಲು ಹೋರಾಟ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೂ ಮುನ್ನ

ಡಾ.ಬಾಬು ಜಗಜೀವನ್ ರಾಮ್

ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅವರುಗಳ ಭಾವಚಿತ್ರಕ್ಕೆ ಶಾಸಕ  ಆರ್.ಬಸನಗೌಡ ತುರ್ವಿಹಾಳ ರವರು ಮಾಲಾರ್ಪಣೆ ಮಾಡಿ ಮೆರವಣಿಗೆ ಚಾಲನೆ ನೀಡಿದ ನಂತರ ಹಲವಾರು ಕಲಾತಂಡ ಮೆರವಣಿಯೊಂದಿಗೆ ಜೈ ಕಾರದ  ಘೋಷಣಗಳೊಂದಿಗೆ

ಭಾವಚಿತ್ರ ಮೆರವಣಿಗೆಯು

ಭ್ರಮಾರಂಭ ದೇವಸ್ಥಾನಕ್ಕೆ ತಲುಪಿತು.

ಇನ್ನೂ ಈ ಇಬ್ಬರು ಮಹಾನ್ ನಾಯಕರುಗಳ ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಪಟ್ಟಣದ ಗಾಂಧಿನಗರದಿಂದ ಬಸವೇಶ್ವರ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಎರಡು ಬದಿಗಳ ವಿದ್ಯುತ್ ದೀಪಗಳಿಗೆ ನೀಲಿ ಬಣ್ಣದ ಬಾವುಟ ಹಾಗೂ ಬಂಟಿಂಗ್ಸ್ ಗಳನ್ನು ಪುರಸಭೆ ಸಿಬ್ಬಂದಿಗಳು ಕಟ್ಟಿ ಪಟ್ಟಣವನ್ನು ಮದುವಣಗಿತ್ತಿಯಂತೆ ನೀಲಿಮಯವಾಗಿ ಸಿಂಗಾರಗೊಳಿಸಿದ್ದು ಸಾರ್ವಜನಿಕರಿಗೆ ಆಕರ್ಷಿಸುವಂತೆ ಮಾಡಿದೆ.

ಈ ವೇಳೆ ತಹಶೀಲ್ದಾರ್ ಡಾ.ಮಂಜುನಾಥ ಭೋಗವತಿ,ಸಿಪಿಐ ಆರ್.ವೈ.ಜಲಗೇರಿ,ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಇಓ ಅಮರೇಶ ಯಾದವ್,ಪುರಸಭೆ ಅಧಿಕಾರಿ ನರಸರಡ್ಡಿ,ಪುರಸಭೆ ಅಧ್ಯಕ್ಷ ಸುರೇಶ ಹರಸೂರು,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು,ದಲಿತ ಮುಖಂಡರಾದ ಎಚ್.ಬಿ.ಮುರಾರಿ,ದಾನಪ್ಪ ನೀಲೋಗಲ್,ದೊಡ್ಡಪ್ಪ ಮುರಾರಿ,ಮಲ್ಲಯ್ಯ ಬಳ್ಳಾ,ಹನುಮಂತಪ್ಪ ವೆಂಕಟಾಪೂರು,ಮೈಬುಸಾಬ್ ಮುದ್ದಾಪುರ,ಮಲ್ಲಿಕಾರ್ಜುನ ಯದ್ದಲದಿನ್ನಿ,ಹನುಮಂತಪ್ಪ ಮುದ್ದಾಪುರ,ಕಾಸಿಮಪ್ಪ ಡಿ.ಮುರಾರಿ,ನಾಗಭೂಷಣ,ಅಡವಿಭಾವಿತಾಂಡದ

ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಶಿಕ್ಷಕರಾದ ವಿಶ್ವನಾಥ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow