ಗೃಹ ಸಚಿವ ಅಮಿತ್ ಶಾ ಸಚಿವ ಸ್ಥಾನಕೆ ರಾಜೀನಾಮೆ ನೀಡಿ ದೇಶದ ಜನರ ಮುಂದೆ ಕ್ಷಮೆ ಯಾಚಿಸಬೇಕು || ಬಾಲ ಸ್ವಾಮಿ ಜಿನಾಪುರ ಆಗ್ರಹ..!
ಮಸ್ಕಿ: ಡಿ ೨೦ ದಲಿತ ಸಂರಕ್ಷ ಸಮಿತಿ ಜಿಲ್ಲಾ ಸಮಿತಿಯು ಮಸ್ಕಿ ತಹಸಿಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ವಿರುದ್ಧ ಗಂಭೀರ ಆರೋಪ ಮಾಡಿ, ಅವರನ್ನು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಬಾಲಸ್ವಾಮಿ ಜಿನ್ನಾಪೂರ.ಜಿಲ್ಲಾದ್ಯಕ್ಷರು, ಚಳಿಗಾಲದ ಸಂಸತ್ ಅಧಿವೇಶನದಲ್ಲಿ, ಡಿಸೆಂಬರ್ 16, 2024ರಂದು, ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು 2 ದಿನಗಳ ಚರ್ಚೆಗೆ ಅವಕಾಶ ನೀಡಿದ ಸಂದರ್ಭ, ಅಮಿತ್ ಷಾ ರವರು ನೀಡಿದ ಹೇಳಿಕೆ ಪ್ರಚೋದನಕಾರಿ ಸ್ವರೂಪದ್ದಾಗಿದ್ದು, ದೇಶದ 130 ಕೋಟಿ ಜನರ ಭಾವನೆಗಳಿಗೆ ಆಘಾತ ಉಂಟುಮಾಡಿದೆ. ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅದೇ ದೇವರ ಹೆಸರನ್ನು ಜಪಿಸಿದರೆ ಏಳು ಜನ್ಮಗಳಲ್ಲಿ ಸ್ವರ್ಗ ಸಿಗುತ್ತಿತ್ತು, ಎಂದು ಹೇಳುವ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಅವರ ಸಾಂವಿಧಾನಿಕ ಕೊಡುಗೆಗೆ ಅಪಮಾನ ಮಾಡಿದ್ದಾರೆ. ಈ ಹೇಳಿಕೆಯಿಂದ ಅಂಬೇಡ್ಕರ್ ಹಾಗೂ ಸಂವಿಧಾನದ ಗೌರವಕ್ಕೆ ಹಾನಿಯಾಗಿದೆ ಶತ -ಶತಮಾನಗಳು ಕಳೆದರು ಶೋಷಿತ ವರ್ಗಗಳಿಗೆ ಯಾವದೇವರು ಕಾಪಾಡಲಿಲ್ಲಿ
ಮಹಾನ್ ಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯಲ್ಲಿ ಇಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಮತ್ತು ಶೋಷಿತ ಸಮುದಾಯಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ.
ಡಾಕ್ಟರ್. ಬಿ.ಆರ್.ಅಂಬೇಡ್ಕರ್ ಅವರೇ ನಮಗೇ ದೇವರು ಸಂವಿಧಾನದ ನಮ್ಮ ಗ್ರಂಥ ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಚಿವ ಸ್ಥಾನಕೆ ರಾಜೀನಾಮೆ ನೀಡಿ ದೇಶದ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ದಲಿತ ಸಂರಕ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ಬಾಲಸ್ವಾಮಿ ಜಿನ್ನಾಪೂರ.ಜಿಲ್ಲಾದ್ಯಕ್ಷರು,
ಮೌನೇಶ ಬಳಗಾನೂರ ಕಲ್ಬುರ್ಗಿ ಉಪಾಧ್ಯಕ್ಷರು, ಭೀಮರಾಯ ಬಳಗಾನೂರ, ಹಿರಿಯ ದಲಿತ ಮುಖಂಡರು,
ಶ್ರೀಕಾಂತ ಮುರಾರಿ ಮಸ್ಕಿ ಹಿರಿಯ ಮುಖಂಡರು,
ಮರಿಸ್ವಾಮಿ ತಾಲ್ಲೂಕ ಅಧ್ಯಕ್ಷರು ಮಸ್ಕಿ.
ಸಿದ್ದಪ್ಪ ಹೂವಿನಬಾವಿ ಜಿಲ್ಲಾ ಕಾರ್ಯಾದ್ಯಕ್ಷರು.
ಅಮರಪ್ಪ ಡಬ್ಬೇರಮಡುಗು ಜಿಲ್ಲಾ ಉಪಾಧ್ಯಕ್ಷರು,
ಚನ್ನಬಸವ ಕುಣೆಕೆಲ್ಲೂರ ಜಿಲ್ಲಾ ಸಂಘಟನೆ ಕಾರ್ಯದರ್ಶಿ,
ನಜೀರ್ ಸಾಬ್ ಮಸ್ಕಿ ಅಲ್ಪಸಂಖ್ಯಾತ ರ ಘಟಕ ಅಧ್ಯಕ್ಷರು ಮಸ್ಕಿ
ವಿಜಯಕುಮಾರ ಹರ್ವಾಪೂರ ಉಪಾಧ್ಯಕ್ಷರು ಮಸ್ಕಿ
ಶಿವಪ್ಪ ಸಂತೆಕೆಲ್ಲೂರ ಉಪಾಧ್ಯಕ್ಷರು ಮಸ್ಕಿ ಲಕ್ಷ್ಮಣ ಕಡುಬೂರ ಉಪಾಧ್ಯಕ್ಷರು ಮಸ್ಕಿ,
ವೆಂಕಟೇಶ ಮಸ್ಕಿ ನಗರ ಘಟಕ ಅಧ್ಯಕ್ಷರು,
ಕಂಟೇಶ ಬಸಾಪೂರ,
ರವಿ ತೋರಣದಿನ್ನಿ ಸಂಘಟನಾ ಕಾರ್ಯದರ್ಶಿ, ಆನಂದ ತೋರಣದಿನ್ನಿ , ರಾಘವೇಂದ್ರ ಕೊಡ್ಲಿ ವೆಂಕಟಾಪೂರ, ಮರಿಯಪ್ಪ ಬಳಗಾನೂರ, ಹನುಮೇಶ ನಾಯಕ ಹುಸ್ಕಿಹಾಳ,
ಜೋಕೆಪ್ಪ ಕಡುಬೂರ, ಯೂಸುಫ್ ಖಾನ್ ಮಸ್ಕಿ, ಮಹಮದ್ ಸೇಡ್ಮೀ ಮಸ್ಕಿ, ಹುಲಗಪ್ಪ ನಂಜಲದಿನ್ನಿ, ರಾಘು ದೀನಸಮುದ್ರ, ಮಲ್ಲಪ್ಪ ದೀನಸಮುದ್ರ, ಹುಲಗಪ್ಪ ಗವಿಗಟ್, ಬಸವರಾಜ ದೊಡ್ಮನಿ ಹಾಲಪೂರ, ಅಂಬ್ರೇಶ ಹುಸ್ಕಿಹಾಳ, ಸೇರಿದಂತೆ ಅನೇಕರು ಉಪ್ಥಿತರಿದ್ದರು.
What's Your Reaction?