ಸತ್ಯ ಹೇಳುವವರು ಸಂಶೋಧನೆಗಿಳಿದಾಗ ಮಾತ್ರ ಸಂಶೋಧನಾ ಕ್ಷೇತ್ರಕ್ಕೆ ನ್ಯಾಯ ಸಿಗುತ್ತದೆ.ಡಾ,ಜಾಜಿ ದೇವೇಂದ್ರಪ್ಪ.

ಸತ್ಯ ಹೇಳುವವರು ಸಂಶೋಧನೆಗಿಳಿದಾಗ ಮಾತ್ರ ಸಂಶೋಧನಾ ಕ್ಷೇತ್ರಕ್ಕೆ ನ್ಯಾಯ ದೊರೆಯುತ್ತದೆ ಎಂದು ಸಿಂಧನೂರಿನ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಜಾಜಿ ದೇವೇಂದ್ರಪ್ಪ ಹೇಳಿದರು. ಅವರು ಪಟ್ಟಣದ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಬಹು ಶಿಸ್ತೀಯ ಸಂಶೋಧನಾ ಕಾರ್ಯಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಇತಿಹಾಸ ವಿಭಾಗದಲ್ಲಿ ಆಧಾರ ರಹಿತ ಮತ್ತು ಜಾತಿಗೆ ಸಂಬಂಧಿಸಿದ ಸಂಶೋಧನೆಗಳನ್ನು ಇತ್ತೀಚಿನ ದಿನಗಳಲ್ಲಿ ಯತೇಚ್ಚವಾಗಿ ಕಾಣುತ್ತಿದ್ದೇವೆ. ನಮ್ಮ ಅಂತರಾಳದ ನೋವನ್ನು ಸಂಶೋಧನೆಯಲ್ಲಿ ಕಾಣಿಸಬೇಕು ಸಂಶೋಧನೆಯಲ್ಲಿ ಜಾತಿ,ಧರ್ಮ, ಮತ್ತು ಪ್ರದೇಶ ಎಂಬ ಭೇದವಿಟ್ಟುಕೊಳ್ಳದೆ ಸಂಶೋಧನೆ ಮಾಡಬೇಕು.ಪ್ರಚಲಿತ ಇತಿಹಾಸ ಪುಸ್ತಕಗಳಲ್ಲಿ ಗೋಪುರ,ಅರಮನೆ ಕಟ್ಟಿಸಿದ ರಾಜರ ಹೆಸರುಗಳು ಇರುತ್ತವೆ,ಆದರೆ ಕಟ್ಟಿರುವವರ ಹೆಸರುಗಳಿರುವುದಿಲ್ಲ ಇದು ಹೇಗೆ ಸಂಶೋಧನೆಯಾಗುತ್ತದೆ? ಎಂದು ಹೇಳಿದರಲ್ಲದೆ ಅದನ್ನು ಸಹಿತ ಸಂಶೋಧನೆಯಲ್ಲಿ ಬರೆಯಬೇಕು ಅಂದಾಗ ಮಾತ್ರ ಸಂಶೋಧನೆಗೆ ಒಂದು ಅರ್ಥಬರುತ್ತದೆ ಎಂದರು. ಒಟ್ಟಾರೆಯಾಗಿ ಹೇಳುವುದಾದರೆ ಸಂಶೋಧನೆ ಎಂದರೆ ಅಲ್ಪ ವಿರಾಮದಿಂದ ಅರ್ಧವಿರಾಮದವರೆಗೆ,ಅರ್ಧ ವಿರಾಮದಿಂದ ಪೂರ್ಣ ವಿರಾಮದವರೆಗೆ, ಸಾಗುತ್ತದೆ.ಅಂದರೆ ಸಂಶೋಧನೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂಬ ಡಾ.ಎಂ.ಎಂ.ಕಲಬುರ್ಗಿಯವರ ಮಾತನ್ನು ಅವರು ಪುನರುಚ್ಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ,ಮಹಾಂತಗೌಡ ಪಾಟೀಲ್ ಸಂಶೋಧನೆಯೆಂದರೆ ಅದೊಂದು ಬಗೆಯ ಸತ್ಯಾನ್ವೇಷಣೆ,ಬಚ್ಚಿಟ್ಟ ಸತ್ಯವನ್ನು ಜಗತ್ತಿನ ಮುಂದೆ ಬಿಚ್ಚಿಡುವ ಎದೆಗಾರಿಕೆಯ ಕೆಲಸ. ಅಂತಹ ಎದೆಗಾರಿಕೆ ಯಾರಿಗಿರುತ್ತದೋ ಅಂತಹವರ ಸಂಶೋಧನೆಗಳು ಮಾತ್ರ ಸಮಾಜಕ್ಕೆ ದಾರಿದೀಪವಾಗಬಲ್ಲವು . ಸಂಶೋಧನೆಗೆ ನ್ಯಾಯಸಲ್ಲಿಸದ ಸಂಶೋಧಕ ಸುಳ್ಳಿನ ರಾಯಬಾರಿಯಾಗುತ್ತಾನೆಂದು ಮಾರ್ಮಿಕವಾಗಿ ನುಡಿಯುವ ಮೂಲಕ ನೈಜ ಸಂಶೋಧನೆಯ ಮಹತ್ವವನ್ನು ಸಾರಿದರು. ಈ ಕಾರ್ಯಕ್ರಮದ ವೇಧಿಕೆಯ ಮೇಲೆ ಕಾಲೇಜಿನ ವಿವಿದ ವಿಭಾಗಗಳ ಮುಖ್ಯಸ್ಥರು,ಉಪನ್ಯಾಸಕರು ಇದ್ದರು. ಈ ಕಾರ್ಯಕ್ರಮದಲ್ಲಿ ಸಕಲ ಅತಿಥಿ ಉಪನ್ಯಾಸಕರು ಸಹ ಮತ್ತು ಸಹಾಯಕ ಪ್ರಾಧ್ಯಾಪಕರು,ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದ ಹಾಗೂ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ,,,ಸುರೇಶ ಬಳಗಾನೂರು.

May 16, 2025 - 22:06
 0  55
ಸತ್ಯ ಹೇಳುವವರು ಸಂಶೋಧನೆಗಿಳಿದಾಗ ಮಾತ್ರ ಸಂಶೋಧನಾ ಕ್ಷೇತ್ರಕ್ಕೆ ನ್ಯಾಯ ಸಿಗುತ್ತದೆ.ಡಾ,ಜಾಜಿ ದೇವೇಂದ್ರಪ್ಪ.
ಸತ್ಯ ಹೇಳುವವರು ಸಂಶೋಧನೆಗಿಳಿದಾಗ ಮಾತ್ರ ಸಂಶೋಧನಾ ಕ್ಷೇತ್ರಕ್ಕೆ ನ್ಯಾಯ ಸಿಗುತ್ತದೆ.ಡಾ,ಜಾಜಿ ದೇವೇಂದ್ರಪ್ಪ.

What's Your Reaction?

like

dislike

love

funny

angry

sad

wow