ವಿಧ್ಯಾರ್ಥಿಗಳಿಗೆ ಕಾನೂನು ಮತ್ತು ಪೋಲಿಸ್ ಇಲಾಖೆಯ ಕರ್ತವ್ಯಗಳ ಮಾಹಿತಿ

ಮಸ್ಕಿ ಪೊಲೀಸ್ ಠಾಣೆಗೆ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ  ಮತ್ತು ಹೆಡ್ ಹೆಲ್ಡ್ ಹೈ ಫೌಂಡೇಶನ್ ಮಸ್ಕಿ ಸಂಸ್ಥೆಯ ವಿದ್ಯಾರ್ಥಿಗಳ ಭೇಟಿ.

Oct 15, 2025 - 21:20
 0  68
ವಿಧ್ಯಾರ್ಥಿಗಳಿಗೆ ಕಾನೂನು ಮತ್ತು ಪೋಲಿಸ್ ಇಲಾಖೆಯ ಕರ್ತವ್ಯಗಳ ಮಾಹಿತಿ
ಮಸ್ಕಿ ಪೊಲೀಸ್ ಠಾಣೆ
ವಿಧ್ಯಾರ್ಥಿಗಳಿಗೆ ಕಾನೂನು ಮತ್ತು ಪೋಲಿಸ್ ಇಲಾಖೆಯ ಕರ್ತವ್ಯಗಳ ಮಾಹಿತಿ

ಮಸ್ಕಿ ಪೊಲೀಸ್ ಠಾಣೆಯಲ್ಲಿ ವಿಧ್ಯಾರ್ಥಿಗಳಿಗೆ ಕಾನೂನು ಮತ್ತು ಪೋಲಿಸ್ ಇಲಾಖೆಯ ಕರ್ತವ್ಯಗಳ ಬಗ್ಗೆ  ಮಾಹಿತಿಯನ್ನ ನೀಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಮಸ್ಕಿ ಠಾಣೆಯ ಪಿ.ಎಸ್.ಐ ಶ್ರೀ ರಂಗಯ್ಯ .ಕೆ ಅವರು ಸಮಾಜದಲ್ಲಿ ನಡೆಯುವ ಅಪರಾಧಗಳು ಸಂಖ್ಯೆ ಕಡಿಮೆ ಮಾಡಲು ಹಾಗೂ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಆಗಲಿರುಳುವೆನ್ನದೆ ತಮ್ಮ ಕುಟುಂಬದವರಿಂದ ದೂರವಿದ್ದು ಸಾರ್ವಜನಿಕ ಸೇವೆಗೆ ಸಿದ್ದರಿರುತ್ತಾರೆ. ಪೊಲೀಸರನ್ನು ಕಂಡರೆ ಭಯಪಡದೆ ತಮ್ಮ ಕಷ್ಟಗಳನ್ನು ದೂರಿನ ಮುಖಾಂತರ ಠಾಣೆಗೆ ಬಂದು ತಿಳಿಸಿದಾಗ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪೊಲೀಸರು ನೆರವಾಗುತ್ತಾರೆ. ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ ಇಟ್ಟುಕೊಂಡು ಎಲ್ಲೇ ಅಪರಾಧಗಳು ನಡೆದರು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಸ್ಥಳಕ್ಕೆ ದಾವಿಸುತ್ತಾರೆ ಎಂದು ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ಹಲವು ಕಾನೂನುಗಳ ಬಗ್ಗೆ ಮಾಹಿತಿ ಜೊತೆಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನ ನೀಡಿ ಅದರ ಜೊತೆಗೆ ಪೊಲೀಸ್ ಇಲಾಖೆ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಯಮನೂರ ಕನ್ನಾರಿ ಅವರು ಮಾತನಾಡಿ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು, ಮತ್ತು ಮಸ್ಕಿ ಠಾಣೆಯ ಪಿ.ಎಸ್.ಐ ಆಗಿರುವ ಶ್ರೀ ರಂಗಯ್ಯ ಕೆ ಮತ್ತು ಶ್ರೀ ಬೀಮ್ ದಾಸ್ ಸರ್ ಅವರಿಗೆ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.

ಸಂಸ್ಥೆಯ ಟ್ರೈನರ್ ಆಗಿರುವಂತ ಗಂಗಾಧರ್, ಚಂದ್ರಶೇಖರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

What's Your Reaction?

like

dislike

love

funny

angry

sad

wow