ಗಣರಾಜ್ಯೋತ್ಸವದ ಅಂಗವಾಗಿ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ
ಮಸ್ಕಿ,22ಜ:ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26 ರ ಸಂಜೆ ಆರುಗಂಟೆಗೆ ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ ಮಸ್ಕಿ ತಾಲೂಕಾಡಳಿತ ಮತ್ತು ತಾಲೂಕಾ ಪಂಚಾಯ್ತಿ ಮಸ್ಕಿ ಹಾಗೂ ಪುರಸಭೆ ಮಸ್ಕಿ ಯ ಸಹಯೋಗದಲ್ಲಿ ರಂಗಚೇತನ ಕಲಾ ತಂಡದಿಂದ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನವಾಗಲಿದೆ ಎಂದು ಸಾಹಿತಿಗಳೂ ಆದ ದಾನಪ್ಪ ಸಿ,ನಿಲೋಗಲ್ ಹೇಳಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ,ಸಾರ್ವಜನಿಕರು,ಯುವಜನ ವಿದ್ಯಾರ್ಥಿಗಳು,ಪ್ರಗತಿಪರ ಚಿಂತಕರು,ಜನಪ್ರತಿನಿಧಿ,ಅಧಿಕಾರಿಗಳು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಕದ ಸಾರವನ್ನು ಅರಿತು,ಜೀವನದಲ್ಲಿ ಅಳವಡಿಸಿಕೊಳ್ಳಲು ಸಂಘಟಕರು,ಹಿರಿಯ ಮುಖಂಡರು ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರಾದ ದೊಡ್ಡಪ್ಪ ಮುರಾರಿಯವರು ಮಸ್ಕಿಯ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಯಶಸ್ವಿಗೊಳಿಸಲು ಕರೆನೀಡಿದರು.
What's Your Reaction?



