ಕೆಲವು ಪತ್ರಕರ್ತರೆಂದರೆ ಕೆಲ ಅಧಿಕಾರಿಗಳಿಗೇಕೆ ಭಯ
ತಾಲೂಕಿನ ಕೆಲವು ಅಧಿಕಾರಿ ಜನಪ್ರತಿನಿಧಿಗಳಿಗೆ ಕೆಲವೇ ಪತ್ರಕರ್ತರ ಮೇಲೆ ಪ್ರೀತಿ ,ಇನ್ನು ಕೆಲವು ಪತ್ರಕರ್ತರೆಂದರೆ ಅದ್ಯಾಕೋ ತಾತ್ಸಾರ.
ಮಸ್ಕಿ ತಾಲೂಕಿನಲ್ಲಿ ನಡೆಯುವ ಸಾಮಾನ್ಯ ಸಭೆ,ಸಂತೆ ಹರಾಜು,ಬಡ್ಜೆಟ್ ಪೂರ್ವ ಬಾವಿ ಸಭೆ,ವಾರ್ಡಗಳ ಕಾಮಗಾರಿಗಳ ಟೆಂಡರ್ ಜಾಹಿರಾತು,ವಾರ್ಡ್ ಗಳಲ್ಲಿ ಯೋಜನೆಗಳ ಅನುಷ್ಠಾನ,ಮುಂತಾದ ಕಾರ್ಯಕ್ರಮಗಳ ವಿಷಯವನ್ನು ಕೇವಲ ಕೆಲವೇ ಪತ್ರ ಕರ್ತರಿಗೆ ತಪ್ಪದೆ ಮುಟ್ಟಿಸಿ ಬಿಡುತ್ತಾರೆ, ಆದರೆ ಉಳಿದ ಪತ್ರ ಕರ್ತರಿಗೆ ಅದರ ಬಗ್ಗೆ ಮಾಹಿತಿ ನೀಡದೆ ಮಲತಾಯಿ ಧೋರಣೆ ಮಾಡುತ್ತಿರುವುದು,ಪತ್ರಿಕಾರಂಗದಲ್ಲಿ ಭೇದಮಾಡಿ ತಮ್ಮ ಕೆಲಸಮಾಡಿಕೊಳ್ಳುವ ತಂತ್ರವಾಗಿದೆಯೇ? ಎಂಬ ಅನುಮಾನ ಕೆಲ ಪತ್ರಕರನ್ನು ಕಾಡುತ್ತಿದೆ.
ಕೆಲವೇ ಪತ್ರಕರ್ತರಿಗಷ್ಟೆ ಆಹ್ವಾನ ಏಕೆ?ಅಥವಾ ಅವರ ಪಾಲಿಗೆ ಅವರಷ್ಠೆ ಪತ್ರಕರ್ತರೆ? ಉಳಿದವರು ಪತ್ರ ಕರ್ತರಲ್ಲವೇ? ಅವರ ಪಾಲಿಗೆ ಉತ್ತಮ ಪತ್ರಕರ್ತರಾಗಿ ಕಾಣಲು ಇರಬೇಕಾದ ಅರ್ಹತೆಗಳೇನು?
ಊರಿನಲ್ಲಿ ಪತ್ರಕರ್ತರು ಎಷ್ಟು ಜನರಿದ್ದಾರೆ ಎಂಬ ವಿಷಯ ಗೊತ್ತಿಲ್ಲವೇ? ಪತ್ರಕರ್ತರ ಬಗ್ಗೆಯೇ ಗೊತ್ತಿಲ್ಲ ಎನ್ನುವುದಾದರೆ ಊರಿನ ಸಮಸ್ಯಗಳ ಬಗ್ಗೆ ತಿಳಿಯುವುದ್ಯಾವಾಗ? ಸುಧಾರಣೆ ಮಾಡುವುದು ಯಾವಾಗ?
ಅಥವಾ ಉಳಿದ ಪತ್ರಕರ್ತರು ಆ ಪತ್ರ ಕರ್ತರನ್ನು ಕರೆಯಬೇಡಿ ಎಂದು ಆದೇಶ ಮಾಡಿದ್ದಾರೆಯೇ? ಅಥವಾ ಮೇಲಾಧಿಕಾರಿಗಳು ಇಂತಹ ಪತ್ರಕರ್ತರನ್ನಷ್ಟೇ ಕರೆಯಿರಿ ಎಂದು ಪಟ್ಟಿ ಬಿಡುಗಡೆ ಮಾಡಿದ್ದಾರೆಯೇ?
ನಿಮಗೆ ಎಂತಹ ಪತ್ರಕರ್ತರು ಬೇಕು? ಇಲ್ಲದ್ದನ್ನು ಇದ್ದಹಾಗೆ,ಇದ್ದದ್ದನ್ನು ಇಲ್ಲದ ಹಾಗೆ ಬರೆಯಬೇಕೆ? ಅಥವಾ ನೀವು ಕಾಗೆ ಬೆಳ್ಳಗಿದೆ ಎಂದರೂ ಪ್ರಶ್ನಿಸದೆ ಸುದ್ದಿ ಮಾಡುವ ಪತ್ರಕರ್ತರಾಗಬೇಕೆ? ಗೌರವಾನ್ವಿತ ಅಧಿಕಾರಿಗಳೆ.
ಪತ್ರಕರ್ತರನ್ನು ಸಮಾನವಾಗಿ ನೋಡಿ ಸರ್, ಈ ಮಲತಾಯಿ ಧೋರಣೆ ತರವೇ? ಆಡಳಿತ ಪಾರದರ್ಶಕವಾಗಿದ್ದರೆ ಯಾವ ಪತ್ರಕರ್ತರು ಬಂದರೇನು ಭಯವೇಕೆ?
ಕೆಲ ಅಧಿಕಾರಿಗಳು ಕೆಲವೇ ಕೆಲವು ಪತ್ರ ಕರ್ತರಿಗೆ ಮಾಹಿತಿ ನೀಡಿ ಆಪ್ತತೆಯ ಪ್ರದರ್ಶನ ಮಾಡುತ್ತಾರೆ.
ಇದು ಸರಿಯಲ್ಲ ನೀವು ಎಲ್ಲ ವರದಿಗಾರರಿಗೂ ಮಾಹಿತಿ ನೀಡಿ ಆಹ್ವಾನ ಮಾಡಿ ಕೆಲವರು ಬರುತ್ತಾರೆ ಇನ್ನು ಕೆಲವರು ಬರುವುದಿಲ್ಲ, ಅದು ಅವರ ಸಮಸ್ಯ,ಆದರೆ ಅಧಿಕಾರಿಗಳು,ಶಾಸಕರ ಕಾರ್ಯಾಲಯದ ಸಿಬ್ಬಂಧಿ, ಪುರಸಭೆಯ ಮುಖ್ಯಾಧಿಕಾರಿಗಳು,ಕೆಲ ವರಧಿಗಾರರಿಗಷ್ಟೇ ಮಾಹಿತಿ ನೀಡುವ ಕೆಲಸಮಾಡಿದರೆ ಉಳಿದ ಪತ್ರಿಕೆಗಳಲ್ಲಿ ವರದಿ ಬರುವುದು ಬೇಡವೆ?
ನೀವಂದುಕೊಂಡಂತೆ ವರದಿ ಬರೆಯಬೇಕೆ? ಪತ್ರಿಕಾರಂಗವನ್ನು ನಿಮ್ಮ ಇಷ್ಟಕ್ಕಾಗಿ ಬಳಸಿ ಭೇಧಮಾಡಿ ಅದರ ಪಾವಿತ್ರ್ಯತೆ ಹಾಳು ಮಾಡಬೇಡಿ.
ಈ ವರದಿಯಿಂದಲಾದರೂ ತಾಲೂಕಿನ ಅಧಿಕಾರಿಗಳು,ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವರೋ ಅಥವಾ ನಾವು ಮಾಡಿದ್ದೇ ಸರಿ ಎಂದು ಮೊಂಡುವಾದ ಮಾಡುವರೋ ಕಾದು ನೋಡಬೇಕಿದೆ.
What's Your Reaction?



