ಕೃಷಿ ಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.! ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಘಟನೆ
ಸ್ಥಳಕ್ಕೆ ದೌಡಾಯಿಸಿ ಮಳೆಯಲ್ಲೂ ಕರ್ತವ್ಯನಿಷ್ಠೆ ಮೆರೆದ ಅಥಣಿ ಪೊಲೀಸ್ ಇಲಾಖೆ
ಕೃಷಿ ಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.! ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಘಟನೆ
ಸ್ಥಳಕ್ಕೆ ದೌಡಾಯಿಸಿ ಮಳೆಯಲ್ಲೂ ಕರ್ತವ್ಯನಿಷ್ಠೆ ಮೆರೆದ ಅಥಣಿ ಪೊಲೀಸ್ ಇಲಾಖೆ
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ವ್ಯಾಪ್ತಿಯ ಸಂಬರಗಿ ಗ್ರಾಮದ ಹೊರವಲಯದ ದೀಪಕ್ ಪ್ರಭಾಕರ್ ದೇಶಪಾಂಡೆ ಇವರ ಕೃಷಿ ಹೊಂಡವೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇನ್ನೂ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ
ಸಂಬರಗಿ ಗ್ರಾಮದ ಕೃಷಿಹೊಂಡದಲ್ಲಿ ಸೋಮವಾರ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು,
ಮೃತನ ವಿಳಾಸ ಪತ್ತೆಯಾಗಿಲ್ಲ. ಸುಮಾರು 35 ರಿಂದ 40 ವರ್ಷ ವಯಸ್ಸಿನ, ಮೈ ಮೇಲೆ ಹಳದಿ ಬಣ್ಣದ ಪೂರ್ತಿ ತೋಳಿನ ಅಂಗಿ, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
ವ್ಯಕ್ತಿ 2-3 ದಿನದ ಹಿಂದೆ ನೀರಿನಲ್ಲಿ ಆಕಸ್ಮಿಕವಾಗಿ ಅಥವಾ ಬೇರೆ ಕಾರಣದಿಂದ ನೀರಿನಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
What's Your Reaction?