ಕಾನೂನಿನ ತಿಳುವಳಿಕೆಯ ಕೊರತೆಯಿಂದ ದುರ್ಬಲರು ನ್ಯಾಯವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ನ್ಯಾಯಮೂರ್ತಿ  ಅಚ್ಚಪ್ಪ ದೊಡ್ಡ ಬಸವರಾಜ್    ಸಿವಿಲ್ ನ್ಯಾಯಾಧೀಶರು.

ಅಪರ ಸಿವಿಲ್ ನ್ಯಾಯಾಧೀಶರು ಅಚಪ್ಪ ದೊಡ್ಡಬಸವರಾಜ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಾನೂನಿನ ಮಹತ್ವವನ್ನು ಅರಿತು ಅದನ್ನು ಅನುಸರಿಸುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಗೌರವಾನ್ವಿತರಾಗಿ ಬದುಕಬೇಕು. ಕಾನೂನಿನ ಉಲ್ಲಂಗನೆ ಯಾರಿಂದಾದರೂ ಅದಕ್ಕೆ ತಕ್ಕ ಶಾಸ್ತಿ ಇದ್ದೇ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನೇಳಿದರು.

Nov 30, -0001 - 00:00
 0  25
ಕಾನೂನಿನ ತಿಳುವಳಿಕೆಯ ಕೊರತೆಯಿಂದ ದುರ್ಬಲರು ನ್ಯಾಯವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ನ್ಯಾಯಮೂರ್ತಿ  ಅಚ್ಚಪ್ಪ ದೊಡ್ಡ ಬಸವರಾಜ್    ಸಿವಿಲ್ ನ್ಯಾಯಾಧೀಶರು.

ಮಸ್ಕಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕ ಕಾನಾನು ನೆರವು ಸಮಿತಿ ಸಿಂಧನೂರು.

ತಾಲೂಕು ನ್ಯಾಯವಾದಿಗಳ ಸಂಘ ಮಸ್ಕಿ,ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಮಸ್ಕಿ

ಇವರ ಸಂಯುಕ್ತಾಶ್ರಯದಲ್ಲಿ 'ಕಾನೂನು ಸೇವಾ ದಿನ ಮತ್ತು ಮಕ್ಕಳ ದಿನಾಚರಣೆ ನಿಮಿತ್ಯವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಮಸ್ಕಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಈಶಪ್ಪ ದೇಸಾಯಿ.

ಮುಖ್ಯ ಅತಿಥಿಗಳಾದ ಮಸ್ಕಿ ತಹಸಿಲ್ದಾರರಾಗಿರುವ ಡಾ,ಮಲ್ಲಪ್ಪ ಯರಗೋಳ್,ಹಿರಿಯ ನ್ಯಾಯವಾದಿಗಳಾಗಿರುವ ಡಿ ರಾಮಣ್ಣ ನಾಯಕ,ಸಿಂಧನೂರಿನ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಮಾರುತಿ ಕಲ್ಲೂರು,

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಂಗಪ್ಪ,ಉಪನ್ಯಾಸಕರಾದ ಮಹಾಂತೇಶ ಮಸ್ಕಿ,ಶ್ರೀಮತಿ ಈರಮ್ಮ ಹಿರೇಮಠ,ರಂಗಯ್ಯ ಶೆಟ್ಟಿ,

ಪುರಸಭೆಯ ಮುಖ್ಯಾಧಿಕಾರಿಗಳಾಗಿರುವ ನರಸರಡ್ಡಿ,

ಮಸ್ಕಿ ವೃತ್ತ ನಿರೀಕ್ಷಕರಾದ ಬಾಲಚಂದ್ರ ಡಿ,ಲಕ್ಕಂ,ಮಸ್ಕಿ ಆರಕ್ಷಕ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಮುದ್ದು ರಂಗಸ್ವಾಮಿ ವೇಧಿಕೆಯ ಮೇಲಿದ್ದ

ಕಾರ್ಯಕ್ರಮವನ್ನು

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಿಂಧನೂರಿನ ಅಧ್ಯಕ್ಷರಾಗಿರುವ ಶ್ರೀ ಲಕ್ಷ್ಮಿಕಾಂತ ಜೆ ಮಿಸ್ಕಿನ್ ಉದ್ಘಾಟಿಸಿದರು.

ನಂತರ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿಗಳಾದ ಬಿ ನಿರುಪಾದೆಪ್ಪ ಗುಡಿಹಾಳರವರು ರಾಷ್ಟ್ರೀಯ ಕಾನೂನು ಸೇವಾ ದಿನ ಮತ್ತು ಮಕ್ಕಳ ದಿನಾಚರಣೆಯ ಕುರಿತು ಸುದೀರ್ಘವಾಗಿ ಮಾತನಾಡಿ ನಮ್ಮ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ,ಯಾವೊಬ್ಬ ಪ್ರಜೆಗೂ ಅನ್ಯಾಯವಾಗಲು ಬಿಡುವುದಿಇಲ್ಲ.

ನೀವು ಸರಿಯಾಗಿ ಕಾನೂನುಗಳನ್ನು ಅರಿತು ಅನುಸರಿಸಿದರೆ ನಿಮ್ಮ ಪರ ಸಂವಿಧಾನ ನ್ಯಾಯಾಲಯ ನಾವು ಸದಾಕಾಲ ಇದ್ದೇ ಇರುತ್ತೇವೆ. 

ಮಕ್ಕಳ ದಿನಾಚರಣೆಯ ಈ ಸುದಿನದಂದು ಕಾನೂನಿನ ಬಗ್ಗೆ ಉಪನ್ಯಾಸ ನೀಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದದ್ದಾಗಿದೆ.

ನೀವು ನ್ಯಾಯದ ದಾರಿಯಲ್ಲಿ ನಡೆಯುತ್ತಿದ್ದರೆ ನೀವು ಯಾರಿಗೂ ಹೆದರುವ ಪ್ರಮೆಯವೇ ಇಲ್ಲ ನಿಮ್ಮೊಂದಿಗೆ ಕಾನೂನಿದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡರೆ ಸಾಕು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ರಂಗಯ್ಯ ಶ್ರೇಷ್ಠಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿ ಸದಸ್ಯರುಗಳು,ಕಾಲೇಜಿನ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿ ವರ್ಗದವರಿದ್ದರು.

What's Your Reaction?

like

dislike

love

funny

angry

sad

wow