ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಮೂಲಭೂತ ಹಕ್ಕು ಮತ್ತು ಕರ್ತವ್ಯ ಕಾನೂನು ಅರಿವು-ನೆರವು ಕಾರ್ಯಕ್ರಮ

Aug 23, 2025 - 19:48
Aug 24, 2025 - 09:11
 0  19

ಮಸ್ಕಿ : ಆಗಸ್ಟ್ 22 ಶುಕ್ರವಾರ  ಭ್ರಮರಾಂಬ  ದೇವಸ್ಥಾನದ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಿಂಧನೂರು ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಅರಿವು ನೆರು ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶ್ರೀಮತಿ ರೂಪಾ, ಸಿ,ವಗ್ಗಾ, ಮಸ್ಕಿ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ಯಾಧೀಶರು ಕಾರ್ಯಕ್ರಮ  ಉದ್ಘಾಟಿಸಿ  ಮಾತನಾಡಿದರು. 

  ಕಾರ್ಯಕ್ರಮದ ಅಧ್ಯಕ್ಷತೆ ಎಚ್ ವೀರಭದ್ರಪ್ಪ ವಕೀಲ ಸಂಘದ ಅಧ್ಯಕ್ಷರು ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ, ಅಧ್ಯಕ್ಷತೆ ವಹೀಸಿದ್ದರೆ, ಅತಿಥಿಗಳಾಗಿ ಮಾರುತಿ ಕಲ್ಲೂರು ಸಹಾಯಕ ಸರ್ಕಾರಿ ಅಭಿಯೋಜಕರು, ಸಿಂಧನೂರ್, ಅಮರೇಗೌಡ ಸಂಜೆ ವಕೀಲರು ಉಪಾಧ್ಯಕ್ಷರು ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ, ಡಾಕ್ಟರ್ ಬಸಲಿಂಗಪ್ಪ ದಿವಟರ್, ಮಲ್ಲಪ್ಪ ನಾಗರಬೆಂಚಿ ವಕೀಲರು ಕಾರ್ಯದರ್ಶಿಗಳು ತಾಲೂಕು ನ್ಯಾಯವಾದಿಗಳ ಸಂಘ ಮಸ್ಕಿ, ಶಿವರಾಜ್ ಕನ್ನೂರು ಸಹಾಯಕ ಕಾರ್ಯದರ್ಶಿಗಳು ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ, ರಾಮಣ್ಣ ವಕೀಲರು ಬಳಗಾನೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಹಿರಿಯ ವಕೀಲರು ಈಶಪ್ಪ ದೇಸಾಯಿ ಉಪನ್ಯಾಸಕರಾಗಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿಷಯವಾಗಿ ಮಾತನಾಡಿದರೆ ಡಿ ರಾಮಣ್ಣ ಹಿರಿಯ ವಕೀಲರು ಶಾಶ್ವತ ಲೋಕದಲತ್ಗಾಗಿ 30 ದಿನಗಳ ವಿಶೇಷ ಶಾಲೆಯ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಸ್ಕಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ ಎಸ್ ಐ ಭೀಮ್ ದಾಸ್, ನ್ಯಾಯವಾದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಾರ್ವಜನಿಕರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow