22 ವರ್ಷಗಳೇ ಗತಿಸಿದರೂ ನಿವೇಶನ ಭಾಗ್ಯ ಸಿಗದ ನಿವೇಶನ ವಂಚಿತ ಫಲಾನುಭವಿಗಳಿಗೆ ನಿವೇಶನ ನೀಡಿ: ಮಲ್ಲಿಕ್ ಮುರಾರಿ ಆಗ್ರಹ
ಮಸ್ಕಿ 15 ಸೋಮವಾರ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ ಎನ್.ಮೂರ್ತಿ ಸ್ಥಾಪಿತ ಸಂಘಟನೆಯು ಹಕ್ಕು ಪತ್ರ ವಿತರಿಸಿ 22 ವರ್ಷಗಳೇ ಗತಿಸಿದರೂ ನಿವೇಶನ ಭಾಗ್ಯ ಸಿಗದ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜಸಿಂಗ್ ಸೋಲಂಕಿ ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಲಿಂಗಸುಗೂರು 150ಎ ಮುಖ್ಯ ರಸ್ತೆಯಲ್ಲಿನ ಸರ್ವೆ ನಂ 32 ರಲ್ಲಿ 6 ಎಕರೆ ಜಮೀನಿನಲ್ಲಿ 2003-2004 ನೇ ಸಾಲಿನಲ್ಲಿ 151 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ, ಪಟ್ಟಣ ಪಂಚಾಯತ ಸಂದರ್ಭದಲ್ಲಿ ನಿವೇಶನ ಸಹಿತ 151 ಮನೆಗಳ ಪೈಕಿ 2001-2002 ನೇ ಸಾಲಿನ ನವಗ್ರಾಮ ಯೋಜನೆಯಲ್ಲಿ 50 ಮತ್ತು ಎ.ಸಿ.ಎ ಯೋಜನೆಯಲ್ಲಿ 100 ಮನೆಗಳು ಮಂಜುರಾಗಿದ್ದವು, ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ಅವೈಜ್ಞಾನಿಕ ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳಿಲ್ಲದೆ ನಿರ್ಮಾಣವಾದ ನಿವೇಶನ ವಾಸಕ್ಕೆ ಯೋಗ್ಯವಿಲ್ಲದಂತಾಗಿ ( ಪಾಳು ಬಿದ್ದ )ಬೀಳು ಬಿದ್ದ ನಿವೇಶನಗಳಲ್ಲಿ ಅನುಮಾನಸ್ಪದಸಾವು' ಅನೈತಿಕ ಚಟುವಟಿಕೆಗಳ ತಾಣವಾಗಿ, ನಿರ್ಮಾಣವಾಗಿದ್ದವು. ಅಂದು ಲೋಕೋಪಯೋಗಿ ಇಲಾಖೆ, ಸಹಾಯಕ ಆಯುಕ್ತರ ಧೃಡೀಕರಣ ಪಡೆದು ಸದರಿ ಮನೆಗಳನ್ನು ಪುರಸಭೆ ವತಿಯಿಂದ ನೆಲಸಮಮಾಡಲಾಯಿತ್ತು.ಆದರೇ ಜಮೀನನ್ನು ಅಕ್ಕ-ಪಕ್ಕ ಇರುವ ಜಮೀನು ಮಾಲೀಕರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ ಎನ್.ಮೂರ್ತಿ ಸ್ಥಾಪಿತ ನಗರ ಘಟಕ ಮಸ್ಕಿ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕ್ ಮುರಾರಿ, ನಾಗಭೂಷಣ ಬಾರಿಕೇರ,ಮಲ್ಲಯ್ಯ ಮುರಾರಿ,ರವಿಮಡಿವಾಳ, ಮರಿಸ್ವಾಮಿ ಹಸಮಕಲ್ ಸೇರಿದಂತೆ ಫಲಾನುಭವಿಗಳು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.
What's Your Reaction?






