ನಕಲಿ ದಾಖಲೆ ಸೃಷ್ಟಿಸಿ ಉದ್ಯಾನದ ಜಾಗ ಮಾರಾಟ ಯತ್ನ ಆರೋಪ : ಮೂವರು ಅಧಿಕಾರಿಗಳು ಅಮಾನತು

ಲಿಂಗಸೂಗೂರು :ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಸೀಮಾದ ವಾರ್ಡ್ 8ರಲ್ಲಿರುವ ಲೇಔಟ್‌ನ ಉದ್ಯಾನವನದ ಜಾಗವನ್ನು ನಕಲಿ ದಾಖಲೆಗಳನ್ನು ತಯಾರಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಯತ್ನಿಸಿದ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಹುಲಿಗುಡ್ಡ ಸೀಮಾದ 10/1/1, 10/2/1, 10/1/13 209-32 ಎಕರೆ ಜಮೀನಿನ ಅನುಮೋದಿತ ವಿನ್ಯಾಸದಲ್ಲಿ ಉದ್ಯಾನವನ ಮತ್ತು ಬಯಲು ಜಾಗಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ 9 ಅನಧಿಕೃತ ನಿವೇಶನಗಳನ್ನು ಸೃಷ್ಟಿಸಿ ಮಾಡಿ ಹಾಗೂ ಸದರಿ ನಿವೇಶನಗಳಿಗೆ ನಮೂನೆ -3 (ಖಾತಾನಕಲು ) ನೀಡಲು ಶಿಫಾರಸ್ಸು ಮಾಡಿರುವುದು. ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಮತ್ತು ಕಂದಾಯ ಅಧಿಕಾರಿ ಅಶೋಕ ಹಾಗೂ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಖಯಾಜ್ ಅವರುಗಳನ್ನು ಕೂಡಲೇ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಅಮಾನತು ಅವಧಿಯಲ್ಲಿ ಸದರಿ ನೌಕರರು ಕರ್ನಾಟಕ ಸೇವಾ ನಿಯಮ 98 ರಂತೆ ನಿಯಮಾನುಸಾರ ಜೀವನಾಂಶ ಭತ್ಯೆಯಗೆ ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ನಿತೀನ್ ಆದೇಶಿಸಿದ್ದಾರೆ.
What's Your Reaction?






