ರಾಯಚೂರಿನ ಪ್ರಮುಖ ವೃತ್ತಗಳಲ್ಲಿ ನೆರಳಿನ ಮೇಲ್ಛಾವಣಿ ನಿರ್ಮಿಸಿ - ಶಿವಕುಮಾರ ಮ್ಯಾಗಳಮನಿ.

ತಾತ್ಕಾಲಿಕ ಮೇಲ್ಛಾವಣಿ ನಿರ್ಮಿಸಬೇಕು

Mar 29, 2025 - 10:53
 0  51
ರಾಯಚೂರಿನ ಪ್ರಮುಖ ವೃತ್ತಗಳಲ್ಲಿ ನೆರಳಿನ ಮೇಲ್ಛಾವಣಿ ನಿರ್ಮಿಸಿ - ಶಿವಕುಮಾರ ಮ್ಯಾಗಳಮನಿ.
ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವಕುಮಾರ ಮ್ಯಾಗಳಮನಿ

ರಾಯಚೂರು : ಮಾರ್ಚ್ ನಿಂದ ಆರಂಭವಾದ ಬೇಸಿಗೆ ಕಾಲದ ಬಿಸಿಲಿನಿಂದ ಜನತೆ ತತ್ತರಿಸುತ್ತಿದ್ದಾರೆ. ಈ ವರ್ಷ ಬೇಸಿಗೆಯ ಆರಂಭದ ದಿನಗಳಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು ಬಿಸಿಲು ರಾಯಚೂರಿನಲ್ಲಿ ದಾಖಲಾಗಿದೆ. ಬಿಸಿಲು ಮತ್ತು ಬಿಸಿ ಗಾಳಿಗೆ ಜನತೆ ಮನೆಯಿಂದ ಹೊರ ಬರಲು ಭಯ ಪಡುವಂತ ಮತ್ತು ಬದಂತ ಜನ ಸಾಕಷ್ಟು ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರಾಯಚೂರು ನಗರದಲ್ಲಿ ಸಂಚರಿಸುವ ಬೈಕ್ ಸವಾರರು, ತೆರೆದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಬೀಳುವ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತಾಗ ಬಿಸಿಲಿನ ತಾಪಕ್ಕೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಣ್ಣ ಮಕ್ಕಳು ಮತ್ತು ಹಿರಿಯ ನಾಗರಿಕರು, ಗರ್ಭಿಣಿ ಮಹಿಳೆಯರು, ರೋಗಿಗಳಿಗೆ ತೀವ್ರ ಸ್ವರೂಪದ ಸಮಸ್ಯೆ ಆಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚು ಇದೆ ಆದ್ದರಿಂದ ರಾಯಚೂರು ಮಹಾ ನಗರ ಪಾಲಿಕೆ ಮತ್ತು ಜಿಲ್ಲಾಡಳಿತ ರಾಯಚೂರಿನ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ ಮತ್ತು ಗಂಜ್ ವೃತ್ತ ಸೇರಿದಂತೆ ಅಗತ್ಯ ಇರುವ ಇತರೆಡೆಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ತಾತ್ಕಾಲಿಕ ಮೇಲ್ಛಾವಣಿ ನಿರ್ಮಿಸಬೇಕು ಮತ್ತು ಬಸ್ ನಿಲ್ದಾಣದ ಹೊರ ಭಾಗ, ಅಂಬೇಡ್ಕರ್ ವೃತ್ತ, ಕಲ್ಲಾನೆ ಹತ್ತಿರ ( ಸದರ್ ಬಜಾರ್ ), ಮಹಾ ನಗರ ಪಾಲಿಕೆ ಕಾರ್ಯಾಲಯದ ಮುಭಾಂಗ, ರೈಲ್ವೆ ನಿಲ್ದಾಣದ ಹತ್ತಿರ, ಚಂದ್ರಮೌಳೇಶ್ವರ ಸರ್ಕಲ್‌ ಸೇರಿದಂತೆ ಜನ ಸಂದಣಿ ಇರುವ ಪ್ರದೇಶಗಳನ್ನು ಗುರುತಿಸಿ ಶುದ್ದ ಕುಡಿಯುವ ನೀರಿನ ಆರವಟ್ಟಿಗೆಯನ್ನು ಇಡಬೇಕು ಮತ್ತು ಸಾರ್ವಜನಿಕರ ವಿಶ್ರಾಂತಿಗಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಹಾಗೂ ಬಿಸಿಲಿನ ತಾಪಮಾನ ಮತ್ತು ಬಿಸಿ ಗಾಳಿಯಿಂದ ಉಂಟಾಗುವ ಅನಾರೋಗ್ಯದ ಕುರಿತು ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಹಾ ನಗರ ಪಾಲಿಕೆ ಮತ್ತು ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆ ರಾಯಚೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಆಗತ್ಯ ಇರುವ ಇತರೆ ತಾಲೂಕು ಕೇಂದ್ರಗಳಲ್ಲಿ ಮಾಡಬೇಕೆಂದು ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವಕುಮಾರ ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

What's Your Reaction?

like

dislike

love

funny

angry

sad

wow