ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ ||ನ್ಯಾಯಾದೀಶೆ ಸರಸ್ವತಿ ಹೆಚ್
ಮಸ್ಕಿ, ಜ 26: ಪಟ್ಟಣದ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌ಸಿ. ನ್ಯಾಯಾಲಯ ದಲ್ಲಿ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನ್ಯಾಯಾದೀಶೆ ಸರಸ್ವತಿ ಹೆಚ್ ನೆರವೇರಿಸಿದರು. ಮೊದಲಿಗೆ ಪಿಎಸ್ಐ ಭೀಮ್ ದಾಸ್ ನೇತೃತ್ವದ ತಂಡ ಕನ್ನಡದಲ್ಲಿ ಕವಾಯತ್ತು ನಡೆಸಿ ರಾಷ್ಟ್ರ ಧ್ವಜಕ್ಕೆ ಗೌರವ ನಮನ ಸಲ್ಲಿಸಿದರು.
ಧ್ವಜಾರೋಹಣ ನೆರವೇರಿಸಿ ನ್ಯಾಯವಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತ ಜಾತ್ಯಾತೀತ ರಾಷ್ಟ್ರ. ಭಾರತದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸುವ ಹಕ್ಕುಗಳು, ಹೀಗೆ ಇಷ್ಟೆಲ್ಲ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಭಾರತದಲ್ಲಿ 1950 ರ ಜನವರಿ 26 ರಂದು ಜಾರಿಗೆ ಬಂದ ಬೃಹತ್ ಸಂವಿಧಾನ ಜಾರಿಗೆ ಬಂತು ಆದ್ದರಿಂದ ಪ್ರತಿ ವರ್ಷವು ಸಹ ಈ ದಿನವನ್ನು ಭಾರತೀಯ ಪ್ರಜೆಗಳು ಎಲ್ಲೇ ಇದ್ದರೂ ಸಹ ನೆನೆಯಬೇಕಾಗಿದೆ. ಹಾಗೆಯೇ ಆಚರಣೆ ಮಾಡಬೇಕಿದೆ. ಕಾನೂನಾತ್ಮಕವಾಗಿ ಈ ದಿನವನ್ನು ರಾಷ್ಟ್ರದೆಲ್ಲೆಡೆ ರಕ್ಷಣಾ ಪಡೆಗಳು ಪರೇಡ್ ಮಾಡುವ ಮೂಲಕ, ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ.
ಪಡೆದ ಸ್ವಾತಂತ್ರ್ಯವನ್ನು ಅನವರತ ಕಾಪಾಡಿಕೊಂಡು ಹೋಗಿ ಜಾಗತಿಕ ಮಟ್ಟದಲ್ಲಿ ತನ್ನದೇಯಾದ ಸ್ಥಾನ ಪಡೆಯಲು ಒಂದು ಸುಸಜ್ಜಿತವಾದ ಸಂವಿಧಾನದ ಅವಶ್ಯಕತೆಯಿತ್ತು.
ಆಗ ಸಂವಿಧಾನ ರಚನಾಸಮಿತಿಯ ಸದಸ್ಯರು ಡಾಕ್ಟರ್,ಬಿ,ಆರ್,ಅಂಬೇಡ್ಕರರ ಮುಂದಾಳತ್ವದಲ್ಲಿ ಸಕಲರಿಗೂ ಸಮಾನತೆಯನ್ನು ನೀಡುವ ಸಂವಿಧಾನ ರಚನೆಯಾಗಿ ಈ ದಿನದಂದು ಜಾರಿಗೆ ತರಲಾಗಿದೆ ಪ್ರಪಂಚದಲ್ಲಿಯೇ ವಿಶೇಷವಾದ ಸಂವಿಧಾನವಾಗಿದೆ,ಅದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ
ಮಸ್ಕಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಹೆಚ್ ವೀರಭದ್ರಪ್ಪ, ಹಿರಿಯ ವಕೀಲರಾದ ಈಶಪ್ಪ ದೇಸಾಯಿ, ರಾಮಣ್ಣ ನಾಯಕ್, ಪ್ರಧಾನ ಕಾರ್ಯದರ್ಶಿಯಾದ, ಮಲ್ಲಪ್ಪ ನಾಗರಬೆಂಚಿ, ಉಪಾಧ್ಯಕ್ಷರಾದ ಅಮರೇಗೌಡ, ನಿರುಪಾದೆಪ್ಪ ಗುಡಿಹಾಳ, ಮೆಹಬೂಬ್ ಭಗವಾನ್, ಗವಿಸಿದ್ದಪ್ಪ ಸೌಕಾರ್ ಸೇರಿದಂತೆ ಅನೇಕವಾದಿಗಳು ಉಪಸ್ಥಿತರಿದ್ದರು.
What's Your Reaction?



