ಅಖಿಲ ಭಾರತ ಕಾರ್ಮಿಕ ಮುಷ್ಕರವನ್ನು ಯಶಸ್ವಿಗೊಳಿಸಿ ಎಐಸಿಸಿಟಿಯು ಕರೆ

ಮಸ್ಕಿ ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಮಸ್ಕಿ ಎಐಸಿಸಿಟಿಯು ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಎಐಸಿಸಿಟಿಯು ಸಂಘಟನೆ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರಪತ್ರ ಹಂಚಿ ಪ್ರಚಾರಾಂದೋಲನ ನಡೆಸಿದರು.

Jan 28, 2026 - 06:21
Jan 28, 2026 - 06:22
 0  18
ಅಖಿಲ ಭಾರತ ಕಾರ್ಮಿಕ ಮುಷ್ಕರವನ್ನು ಯಶಸ್ವಿಗೊಳಿಸಿ ಎಐಸಿಸಿಟಿಯು ಕರೆ
ವರದಿ✍️,,,ಎಸ್ ನಜೀರ್

ಕೇಂದ್ರ ಸರ್ಕಾರ ಜಾರಿಗೆ ತಂದ 4 ಕಾರ್ಮಿಕ ಸಂಹಿತೆಗಳನ್ನು ಕೊಡಲೇ ವಾಪಸ್‌ ಪಡೆಯಬೇಕು ! ಹಾಗು

ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿಸಿ ವಿರೋಧಿಸಿ (ವಿಬಿ-ಗ್ರಾಮ್‌ಜಿ 2025)  ಸೇರಿದಂತೆ ಅನೇಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ದತಿಗೆ ಒತ್ತಾಯಿಸಿ, ಫೆಬ್ರವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ದುಡಿಯುವ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಅಜೀಜ್ ಜಾಗೀರ್ದಾರ್ ಕರೆ ನೀಡಿದರು. 

ಮಸ್ಕಿ ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಮಸ್ಕಿ ಎಐಸಿಸಿಟಿಯು ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಎಐಸಿಸಿಟಿಯು ಸಂಘಟನೆ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರಪತ್ರ ಹಂಚಿ ಪ್ರಚಾರಾಂದೋಲನ ನಡೆಸಿದರು. 

ದುಡಿಯುವ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನುಗಳನ್ನು ಜಾರಿ ಮಾಡದೆ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ಕಾನೂನು ಜಾರಿ ಮಾಡಿ ದುಡಿಯುವ ವರ್ಗಗಳ ಜನರನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಈ ಕಾನೂನುಗಳ ರದ್ದತಿಗಾಗಿ ಫೆಬ್ರವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ.

ಈ ಬೇಡಿಕೆಗಳಷ್ಟೇ ಅಲ್ಲದೆ ನೂತನಕೇಂದ್ರ ಸರ್ಕಾರ ಜಾರಿಗೆ ತಂದ 4 ಕಾರ್ಮಿಕ ಸಂಹಿತೆಗಳನ್ನು ಕೊಡಲೇ ವಾಪಸ್‌ ಪಡೆಯಬೇಕು,ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿಸಿ ವಿರೋಧಿಸಿ (ವಿಬಿ-ಗ್ರಾಮ್‌ಜಿ 2025), ಶಿಕ್ಷಣ ನೀತಿ, ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ, ಕೆಲಸದ ಅವಧಿ 12ಗಂಟೆಗೆ ವಿಸ್ತರಣೆ ಸೇರಿ ವಿವಿಧ ಆದೇಶಗಳನ್ನು ಧಿಕ್ಕರಿಸಿ ದೇಶದ ಎಲ್ಲ ಭಾಗಗಳಲ್ಲಿ ಮುಷ್ಕರ ನಡೆಸಲಾಗುತ್ತಿದೆ. ಮಸ್ಕಿ ತಾಲೂಕಿನ ಅತ್ಯಂತ ಕೂಡ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ದುಡಿಯುವ ವರ್ಗದವರು ಭಾಗವಹಿಸುವ ಮೂಲಕ ಮುಷ್ಕರ ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಹನಮಂತಪ್ಪ  ವೆಂಕಟಾಪುರ್ ಲಿಂಗನಗೌಡ, ಹನುಮಂತ ನಾಯಕ್, ಮಹೆಬೂಬ್   ಏಕೋಬ, ನವೀನ್, ಫರೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow