ಅಭಿವೃದ್ಧಿಯ ಹೆಸರಲ್ಲಿ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಟ್ಟ ಪಟ್ಟಣ ಪಂಚಾಯಿತಿ ಆಡಳಿತ
ಬಳಗಾನೂರು ಪಟ್ಟಣ ಪಂಚಾಯ್ತಿಯ ಕಥೆಯೂ ಅದರಂತಾಗಿದೆ. ಪಟ್ಟಣದ ಸಂತೆಬಜಾರದಿಂದ ಹಾದುಹೋಗುವ ಮಸ್ಕಿ ಬಳಗಾನೂರು ಮುಖ್ಯರಸ್ತೆಯ ಪಕ್ಕದಲ್ಲಿ ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ಬಡ ಬೀದಿಬದಿ ವ್ಯಾಪಾರಿಗಳು ಸಣ್ಣ ಸಣ್ಣ ಕ್ಷೌರದ,ಇಸ್ತ್ರಿ,ಟೇಲರ್,ಪಾದರಕ್ಷೆ ಹೊಲಿಯುವ,ವಾಹನಗಳ ಬಿಡಿಭಾಗಗಳನ್ನು ಮಾರುವ ಅಂಗಡಿಗಳನ್ನು ನಿರ್ಮಿಸಿಕೊಂಡು ದೈನಂದಿನ ಜೀವನವನ್ನು ಸಾಗಿಸುತ್ತಾ ಬಂದಿದ್ದರು.
ಹೌದು ಪ್ರಿಯ ವೀಕ್ಷಕರೇ
ಕೂಸು ಹುಟ್ಟುವ ಮುನ್ನ ಕುಲಾಯಿಹೊಲಿಸಿದಂತಾಯ್ತು ಬಳಗಾನೂರು ಪಟ್ಟಣಪಂಚಾಯ್ತಿ ಕಥೆ!ಅದುಕೊಂಡ ಕೆಲಸ ಇನ್ನೂ ಆಗಿರದಿದ್ದರೂ ಅದಕ್ಕೆ ಬೇಕಾದ ತಯಾರಿಯನ್ನು ಅವಸರವಸರವಾಗಿ ಮಾಡಲು ಮುಂದಾದರೆ ಹಳ್ಳಿಕಡೆ ಯಾಕಂಗ ಅವಸ್ರ ಮಾಡ್ತಿ ಕೂಸು ಹುಟ್ಟಾಕಿಂತ ಮುಂಚೆ ಕುಲಾಯಿ ಯಾಕ ಹೊಲಸ್ತಿ ಎಂಬ ಗಾದೆ ಮಾತಿದೆ.
ಆದರೆ ಪಟ್ಟಣಪಂಚಾಯ್ತಿಯ ಅಧಿಕಾರಿಗಳು ನೂತನ ಬಸ್ ನಿಲ್ದಾಣ ನಿರ್ಮಿಸುವ ನೆಪವೊಡ್ಡಿ ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಆದೇಶಿಸಿ ಅವರನ್ನು ಬೀದಿಪಾಲು ಮಾಡಿದರು.
ಈಗ ಒಂದುವರ್ಷ ಕಳೆಯುತ್ತಿದ್ದರೂ ಮಳಿಗೆಗಳನ್ನು ನಿರ್ಮಿಸಿಲ್ಲ.ಅವರಿದ್ದ ಅಂಗಡಿಗಳಿಗೆ ಮಾಸಿಕ ಬಾಡಿಗೆಯನ್ನು ಬೇಕಾದರೆ ನೀಡುತ್ತೇವೆಂದು ಅಂಗಲಾಚಿದರೂ ಕೇಳದೆ ಒಕ್ಕಲೆಬ್ಬಿಸಿದ್ದಾರೆ. ಈಗ ನಾವು ಬಡವರು ಏನುಮಾಡಬೇಕು? ನಮಗೊಂದು ಸೂರು ನೀಡಿ,ಕಾಯಕ ಮಾಡಲು ಅಂಗಡಿಗಳನ್ನು ನೀಡಿ ಎಂದು ಸಂತ್ರಸ್ತರು ಮಾಧ್ಯಮದ ಮೂಲಕ ಆಗ್ರಹಿಸುತ್ತಿದ್ದಾರೆ.
ತೆರವುಗೊಳಿಸಿದ ತಕ್ಷಣ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನಿಗದಿಮಾಡಿದ್ದರೆ ಪಟ್ಟಣಪಂಚಾಯ್ತಿಗೆ ಆದಾಯವಾದರೂ ಬರುತ್ತಿತ್ತು ಆ ವ್ಯಾಪಾರಸ್ತರಿಗೆ ಜೀವನಮಾಡಲು ಮತ್ತೆ ಅವಕಾಶವಾದರೂ ಸಿಗುತ್ತಿತ್ತು. ಈಗ ಅದಾವುದೂ ಇಲ್ಲದೆ ಜಾಗ ಕಾಲಿಬಿದ್ದಿದೆ.ಅಲ್ಲಿ ವಾಹನಗಳು,ಬಂಡಿಗಳು ನಿಲ್ಲಿಸುವ ನಿಲ್ದಾಣವಾಗಿ ರೂಪಗೊಂಡಿದೆ.
ಮಳಿಗೆ ನಿರ್ಮಾಣ ತಡವಿದ್ದರೆ ತರಾತುರಿಯಲ್ಲಿ ಬಡವರನ್ನು ಒಕ್ಕಲೆಬ್ಬಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಅಂಗಡಿಗಳನ್ನು ಕಳೆದುಕೊಂಡ ಹುಸೇನಪ್ಪ,ನಿರುಪಾದಿ ಮಡಿವಾಳರ್,ರಾಮಮ್ಮ ಮಡಿವಾಳರ್,ಮತ್ತು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈಗಲಾದರೂ ಪಟ್ಟಣಪಂಚಾಯ್ತಿಯ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದರೆ ಮತ್ತೆ ಅವರು ಬದುಕನ್ನು ಕಟ್ಟಿಕೊಳ್ಳಬಹುದು.
What's Your Reaction?



