ಸಿರುಗುಪ್ಪ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ.
ಸಿರುಗುಪ್ಪ : ನಗರದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಮಕ್ಕಳ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು. ಜೊತೆಗೆ ಶಾಲೆಯ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ವನ್ನು ಪ್ರದರ್ಶಿಸಲಾಯಿತು. ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ನಂತರ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಇಸಾಕ್ ಮಾತನಾಡಿ ಮಕ್ಕಳಲ್ಲಿ ಇಂಥ ಅದ್ಭುತವಾದ ಪ್ರತಿಭೆ ಇರುವ ಮಕ್ಕಳು ರಾಜ್ಯ ಮತ್ತು ಅಂತರಾಷ್ಟ್ರೀಯದಲ್ಲಿ ಕೂಡ ಕಾಣಿಸಿಕೊಳ್ಳಬೇಕು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದರು ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮೋಹನ್. ಮುಖ್ಯ ಅತಿಥಿಗಳಾದ ಕೊಟ್ಟಿಗಿ ಮಲ್ಲಿಕಾರ್ಜುನ್ ಫಸ್ಟ್ ಕರ್ನಾಟಕ. ಗಾದಿಲಿಂಗಪ್ಪ. ಸಂಸ್ಥೆಯ ಅಧ್ಯಕ್ಷರಾದ ಎಸ್ ರೇಣುಕಾ. ಶಾಲೆಯ ಶಿಕ್ಷಕಿಯರು. ಪಾಲಕ ಪೋಷಕರು ಮುದ್ದು ಮಕ್ಕಳು ಉಪಸ್ಥಿತರಿದ್ದರು.
What's Your Reaction?