ಅಕ್ರಮವಾಗಿ ಸಾಗಟ ಮಾಡುತ್ತಿದ್ದ 2 ಲಕ್ಷ ಎಪ್ಪತ್ತು ಸಾವಿರ ಮೌಲ್ಯದ 138 ಕ್ಷಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ
ಖಚಿತ ಮಾಹಿತಿ ಮೇರೆಗೆ ಲಿಂಗಸ್ಗೂರು ಫುಡ್ ಇನ್ಸ್ಪೆಕ್ಟರ್ ಅಬ್ದುಲ್ ರೌಫ್ ಮತ್ತು ಮಸ್ಕಿ ಪಿಎಸ್ಐ ಮುದ್ದು ರಂಗಸ್ವಾಮಿ ನೇತೃತ್ವದಲ್ಲಿ ದಾಳಿ
ಮಸ್ಕಿ ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ಮಸ್ಕಿ ಕವಿತಾಳ ಕ್ರಾಸ್ ಹತ್ತಿರ ತಮಿಳುನಾಡು ನೆರೆ ರಾಜ್ಯ ಕ್ಕೆ ಪಡಿತರ ಚೀಟಿಯ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಹಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಲಿಂಗಸ್ಗೂರು ಫುಡ್ ಇನ್ಸ್ಪೆಕ್ಟರ್ ಅಬ್ದುಲ್ ರೌಫ್ ನೇತೃತ್ವದ ತಂಡ ಹಾಗೂ ಮಸ್ಕಿ ಪಿಎಸ್ಐ ಮುದ್ದು ರಂಗಸ್ವಾಮಿ ಪೊಲೀಸ್ ರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 138 ಕ್ವಿಂಟಾಲ್ 2 ಲಕ್ಷ ಎಪ್ಪತ್ತು ಸಾವಿರ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಮಸ್ಕಿ-ಕವಿತಾಳ ರಸ್ತೆಯ ಕವಿತಾಳ ಕ್ರಾಸ್ ಹತ್ತಿರ ಲೈಲ್ಯಾಂಡ್ ಲಾರಿ ವಾಹನದ TN-88 B-2689 ನಂಬರಿನ ವಾಹನಡಲ್ಲಿ ಪಡಿತರ ಚೀಟಿಯನ್ನು ಹೊಂದಿದ ಪಡಿತರ ಚೀಟಿದಾರರಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಪಡಿತರ ಚೀಟಿದಾರರಿಂದ ನೇರವಾಗಿ ಪ್ರತಿ ಸೇರಿಗೆ ರೂ.10/-ರಂತೆ ಬೆಲೆ ನೀಡಿ ಖರೀದಿ ಮಾಡಿ, ತಮ್ಮ ಸ್ವಂತ ಲಾಭಕ್ಕಾಗಿ ಸಾಗಾಣೆಕೆ ನೆರೆ ರಾಜ್ಯ ಕ್ಕೆ ಸಾಗಾಟ ಮಾಡುತ್ತಿರುವ ವೇಳೆ
ವಾಹನವನ್ನು ಅಕ್ಕಿ ಸಮೇತ ವಶಕ್ಕೆ ಪಡೆದು ಆರೋಪಿ ಗುರುರಾಜ ಶೆಟ್ಟಿ ಇವರು ತಿಳಿಸಿದಂತೆ ಮಸ್ಕಿಯ ನಾಗರಾಜ ಗುಬ್ಬಿ ತಂದೆ ಪಾಂಡಪ್ಪ ಹಾಗೂ ಮಂಜುನಾಥ ತಂದೆ ಬಸವರಾಜ ಸಾಃಮಸ್ಕಿ ರವರ ಮೇಲೆ 54/2025 ಕಲಂ ಅವಶ್ಯಕ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ 3 &
7 ಅವಶ್ಯಕ ಕಾಯ್ದೆ ಅಡಿಯಲ್ಲಿ ಮತ್ತು ಕರ್ನಾಟಕ ಅವಶ್ಯಕ ವಸ್ತುಗಳ ಪಿಡಿಎಸ್ ನಿಯಂತ್ರಾಣಾದೇಶ-2016 ರ ಅಡಿಯಲ್ಲಿ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಸ್ಕಿ ಪೊಲೀಸ್ ತನಿಖಾಧಿಕಾರಿಯಾದ ಪಿಎಸ್ಐ ಭೀಮದಾಸ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?






