ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ : ಡಾಕ್ಟರ್ ರಜಾಕ್ ಉಸ್ತಾದ್ ಆರೋಪ

ಭಾರತ ದೇಶದಲ್ಲಿ ಹೊರದೇಶದವರು ಬಂದು ತಮ್ಮ ಹೆಸರನ್ನು ನಮ್ಮ ದೇಶದ ಮತಪಟ್ಟಿಯಲ್ಲಿ ಸೇರಿಸುತ್ತಾರೆ ಎಂದರೆ ನಮ್ಮ ಕೇಂದ್ರ ಸರಕಾರ ಎಂತಹ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಸರಕಾರದ ನಡೆಯ ಬಗೆಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿಯಾದ ರಜಾಕ್ ಉಸ್ತಾದ ಚಾಟಿ ಬೀಸಿದರು.ಅವರು ಪಟ್ಟಣದಲ್ಲಿ ಬಯ್ಯಾಪುರ ಬಣ ಏರ್ಪಡಿಸಿದ ಮತಗಳ್ಳರೆ ಖುರ್ಚಿ ಬಿಡಿ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ದೇಶದ ನಾಗರೀಕರನ್ನು ಗುರುತಿಸುವುದು ಗೃಹ ಇಲಾಖೆಯ ಕೆಲಸವಾಗಿದೆ ಆದರೆ ಚುನಾವಣಾ ಆಯೋಗವು ಕೇಂದ್ರ ಸರಕಾರದ ಒಂದು ಭಾಗವೆಂಬಂತೆ ಕೆಲಸ ಮಾಡುತ್ತಿರುವುದು ದುರುದುಷ್ಟಕರವಾಗಿದೆ ಎಂದರು.

Oct 31, 2025 - 00:59
Oct 31, 2025 - 01:02
 0  19
ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ : ಡಾಕ್ಟರ್ ರಜಾಕ್ ಉಸ್ತಾದ್ ಆರೋಪ

ನಂತರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಪತ್ರಿಕೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು 

ರಾಯಚೂರು ಜಿಲ್ಲೆಯಲ್ಲಿ 2022ರಲ್ಲಿ ಸುಮಾರು 1ಲಕ್ಷದ24 ಸಾವಿರದ 746 ಮತಗಳನ್ನು ತೆಗೆದು ಹಾಕಲಾಗಿತ್ತು ಅದರಂತೆ ಲಿಂಗಸಗೂರು ಕ್ಷೇತ್ರದಲ್ಲಿಯು ಸುಮಾರು 7500 ಮತಗಳನ್ನು ತೆಗೆದುಹಾಕಲಾಗಿತ್ತು ಮತದಾರರು ಆಗಾಗ್ಗೆ ತಮ್ಮ ಹೆಸರು ಮತಪಟ್ಟಿಯಲ್ಲಿದೆಯಾ ಎನ್ನುವುದನ್ನು ಪರಿಶೀಲಿಸಬೇಕು ಇಲ್ಲವಾದರೆ ನಿಮ್ಮ ಹೆಸರು ತೆಗೆಯಲಾಗಿರುತ್ತದೆ ಅಥವ ದೂರದ ಮತಗಟ್ಟೆಗೆ ಹೋಗಿರುತ್ತದೆ ಮತಗಳ್ಳತನದ ಬಗೆಗೆ ಹಲವಾರು ಘಟನೆಗಳು ನಡೆದಿದ್ದು ಅದರ ಬಗೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಸಹಿಸಂಗ್ರಹದ ಹೋರಾಟ ರೂಪಿಸಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಭೂಪನಗೌಡ ಕರಡಕಲ್, ಬಸವರಾಜಗೌಡ ಗಣೇಕಲ್, ಗುಂಡಪ್ಪನಾಯಕ, ಶಶಿಧರ ಪಾಟೀಲ್, ಅನೀಸ್ ಪಾಷಾ, ಆದಪ್ಪ ಮನಗೂಳಿ, ನಾಗನಗೌಡ ತುರಡಗಿ, ಸೋಮಶೇಖರ ಐದನಾಳ ನಾಗವೇಣಿ ಚನ್ನಾರಡ್ಡಿ ಬಿರಾದಾರ, ಸೇರಿದಂತೆ ಹಿರಿಕಿರಿಯ ಮುಖಂಡರು ಇದ್ದರು.

What's Your Reaction?

like

dislike

love

funny

angry

sad

wow