ಮೇ 20 ರ ಸಾಧನ ಸಮಾವೇಶ ಯಶಸ್ವೀಗೊಳಿಸಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಮನವಿ

ವರದಿ : ವಿ.ಜಿ.ವೃಷಭೇಂದ್ರ ವಿಜಯನಗರ ಜಿಲ್ಲೆ : ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ , ಮೇ 20 ರಂದು ಜರುಗಲಿರುವ. ಸಾಧನಾ ಸಮಾವೇಶದಲ್ಲಿ ಕ್ಷೇತ್ರದ ಜನತೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗಿ , ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವೀಗೊಳಿಸಬೇಕೆಂದು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಕ್ಷೇತ್ರದ ಜನತೆಗೆ ಮನವಿ.

May 18, 2025 - 11:19
 0  28
ಮೇ 20 ರ ಸಾಧನ ಸಮಾವೇಶ ಯಶಸ್ವೀಗೊಳಿಸಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಮನವಿ
ಮೇ 20 ರ ಸಾಧನ ಸಮಾವೇಶ ಯಶಸ್ವೀಗೊಳಿಸಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಮನವಿ
ಮೇ 20 ರ ಸಾಧನ ಸಮಾವೇಶ ಯಶಸ್ವೀಗೊಳಿಸಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಮನವಿ

ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಕ್ಷೇತ್ರದ ಜನತೆಗೆ ಹಾಗೂ ಸರ್ಕಾರದ ಪ್ರಯೋಜನಗಳನ್ನು ಪಡೆದವರಿಗೆ. ಮತ್ತು ಕಾಂಗ್ರೇಸ್ ಪಕ್ಷದ ಮುಖಂಡರಿಗೆ , ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಅವರು ಮೇ 17ರಂದು ಪಟ್ಟಣದ ಪ್ರವಾಸಿ ಮಂದಿರಲ್ಲಿ , ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯ ಸರ್ಕಾರ ಅಧಿಕಾರದ ಗದ್ದುಗೆ ಏರಿ ಕಳೆದೆರೆಡು ವರ್ಷಗಳಲ್ಲಿ , ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಚಿಂತ ಮಂಥನ. ಮತ್ತು ಮನೆ ಮನೆಯ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು , ಸಮರ್ಪಕವಾಗಿ ತಲುಪಿಸಿರುವುದರ ಕುರಿತು , ಸರ್ಕಾರ ಹಾಗೂ ಸರ್ಕಾರದ ಪರವಾಗಿ ಇಲಾಖೆಗಳು , ಹಾಗೂ ಜನ ಪ್ರತಿನಿಧಿಗಳ ಪಾತ್ರ. ಕಳೆದೆರೆಡು ವರ್ಷಗಳಿಂದ ಜನರಿಗಾಗಿ ಸರ್ಕಾರ ಆಡಳಿತ ನಡೆಸುತ್ತಾ ಬಂದಿದ್ದು , ಈವರೆಗೆ ಸರ್ಕಾರ ಅಧಿಕಾರದಲ್ಲಿದ್ದು ನಡೆದು ಕೊಂಡು ಬಂದ ಹಾದಿಯನ್ನು. ಕೆಲ ಹೊತ್ತು ತಿರುಗಿ ನೋಡುವ ಮೂಲಕ , ಸಿಂಹಾವಲೋಕನ ಮಾಡುವ ಉದ್ಧೆಶದಿಂದ. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸರ್ಕಾರ , ಸಾಧನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ಎರೆಡು ವರ್ಷಗಳಲ್ಲಿ. ಅರ್ಹ ಪಲಾನುಭವಿಗಳು ಸರ್ಕಾರದಿಂದ ಪಡೆದಿರುವ ಪ್ರಯೋಜಗಳು, ಹಾಗೂ ಕಾರ್ಯಕ್ರಮದಲ್ಲಿ ಸರ್ಕಾರದಿಂದ ವಿವಿದ ಇಲಾಖೆಗಳಿಂದ ಅನುಕೂಲ ಪಡೆದವರೆಲ್ಲರೂ. ಎಲ್ಲಾ ಇಲಾಖೆಗಳ ಎಲ್ಲಾ ಹಂತದ ಅಧಿಕಾರಿಗಳು , ಇಲಾಖೆಗಳ ಸಿಬ್ಬಂದಿಯವರು. ಸರ್ವ ಜನಪ್ರತಿನಿಧಿಗಳು , ಪಕ್ಷದ ಮುಖಂಡರೆಲ್ಲರು ಹಾಗೂ ಎಲ್ಲಾ ಹಂತದ ಪ್ರತಿಯೋರ್ವ ಕಾರ್ಯಕರ್ತರು. ಸಮಾವೇಶದಲ್ಲಿ ಸಕ್ರೀಯವಾಗಿ ಪಾಲ್ಗೊಂಡು , ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು. ಅವರು ಕೋರಿದರು. 

ನುಡಿದಂತೆ ನಡೆದ ಸರ್ಕಾರಕ್ಕೆ ಈಗ ಎರಡು ವರ್ಷ ಗತಿಸಿದ್ದು , ಮೇ 20ರಂದು ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಾಧನ ಸಮಾವೇಶ ಜರುಗಲಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಪಲಾನುಭವಿಗಳಿಗೆ , ಸಿ.ಎಂ. ಸಿದ್ಧರಾಮಯ್ಯ ರವರು ಹಕ್ಕು ಪತ್ರವಿತರಿಸಲಿದ್ದಾರೆ. ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಸೇರಿದಂತೆ , ಸಂಪೂರ್ಣ ಮಂತ್ರಿಮಂಡಲದ ಮಂತ್ರಿಯವರೆಲ್ಲರೂ ಉಪಸ್ಥಿತರಿರುತ್ತಾರೆ. ಆಗಮಿಸುವವರಿಗೆ ಅಗತ್ಯವಾಗಿ ಸಾರಿಗೆ ಬಸ್ ವ್ಯವಸ್ಥೆ ವ್ಯವಸ್ಥೆ ಮಾಡಿದ್ದು , ಜನರನ್ನು ಅತ್ಯಂತ ಸುರಕ್ಷಿತವಾಗಿ ಕರೆದೊಯ್ಯುಲಾಗುವುದು. ಎಲ್ಲರಿಗೂ ಊಟೋಪಚಾರ ವ್ಯವಸ್ಥೆ ಮಾಡಲಾಗುರುತ್ತದೆ , ಭಾಗವಹಿಸುವವರೆಲ್ಲರನ್ನೂ ಸುರಕ್ಷಿತವಾಗಿ ಕರೆದೊಯ್ಯುದು ಮರಳಿ ಕರೆತರುವ ನಿಟ್ಟಿನಲ್ಲಿ. ತಹಶಿಲ್ದಾರರ ನೇತೃತ್ವದಲ್ಲಿ , ತಾ.ಪಂ ಇಒ ಒಳಗೊಂಡಂತೆ. ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡ , ನಿಯೋಜಿಸಿದಂತೆ ಅಗತ್ಯ ಜವಾಬ್ದಾರಿಗಳನ್ನು ನಿರ್ವಹಿಸಲಿದೆ ಎಂದರು. ಕ್ಷೇತ್ರದ ಅಸಂಖ್ಯಾತ ಸಾರ್ವಜನಿಕರು ಸಮಾವೇಶದಲ್ಲಿ ಭಾಗಿಯಾಗಿ , ಸಮಾವೇಶವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಅವರು ಈ ಮೂಲಕ ಜನತೆಯಲ್ಲಿ ಮನವಿ ಮಾಡಿದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ಕ್ಷೇತ್ರಕ್ಕೆ , ಒಟ್ಟು 276ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಅಗತ್ಯವಿದ್ದಲ್ಲಿ ಹೆಚ್ಚುವರಿ ಬಸ್ ಗಳನ್ನು , ಒದಗಿಸಿಕೊಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಹಶಿಲ್ದಾರರಾದ ವಿ.ಕೆ.ನೇತ್ರಾವತಿರವರು, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ. ನರಸಪ್ಪ, ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ , ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ. ಸೇರಿದಂತೆ ಕಾಂಗ್ರೇಸ್ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ವಿ.ಜಿ.ವೃಷಭೇಂದ್ರ.

What's Your Reaction?

like

dislike

love

funny

angry

sad

wow