ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿ

ಸಿಂಧನೂರು ಅ.28-ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು.

Oct 29, 2025 - 02:43
Oct 29, 2025 - 02:47
 0  11

ನಗರದಲ್ಲಿರುವ ಚನ್ನಮ್ಮ ಸರ್ಕಲ್ ವೃತ್ತದಿಂದ ಅಭಿಯಾನಕ್ಕೆ ಚಾಲನೆ ನೀಡಿ  ಸಿಂಧನೂರಿನ ಪ್ರಮುಖ ಬೀದಿಗಳಲ್ಲಿ   ಅಭಿಯಾನ ಮಾಡಿ ಜನ ಜಾಗೃತಿ,ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಸಮಿತಿ ರೈತ ಘಟಕ ಉಸ್ತುವಾರಿ ನಿರುಪಾದಿ ಗೋಮರ್ಸಿ  ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ  ಅವರು ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ ಕಾರ್ಪಣ್ಯಗಳಿಗೆ ನಮ್ಮನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ನೇರವಾಗಿ ಕಾರಣ ಅವರವರ ಸ್ವಾರ್ಥದ ಮತ್ತು ಕುಟುಂಬದ ರಾಜಕಾರಣದಲ್ಲಿ ತಾಲೂಕಿನ ಜನರನ್ನು ಮೂರ್ಖರನ್ನಾಗಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಜನಪರವಾದ ಆಡಳಿತ ನಡೆಸಬೇಕಾದ ಪಕ್ಷಗಳು ಜಾತಿ ರಾಜಕಾರಣ ಹಣಬಲದ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಹಾಗಾಗಿ ಪಕ್ಷವು ಯುವ ಪೀಳಿಗೆಯನ್ನು  ರಾಜಕೀಯ ರಂಗ ಕೇಳಿದ್ದು  ಸ್ವಚ್ಛ ರಾಜಕಾರಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು

ಕನ್ನಡ ನಾಡಿನ ನೆಲಜಲಗಡಿ ಭಾಷೆಯ ಉಳಿವಿಗಾಗಿ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವಿಕೆಗಾಗಿ ಒತ್ತಾಯಿಸಿ ಮುಂದಿನ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಸಮಾವೇಶ ಆಯೋಜಿಸಲಾಗುತ್ತಿದ್ದು ತಾಲೂಕಿನ ಸಮಸ್ತ ಕನ್ನಡಿಗರು  ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ನಂತರ ಬಸವ ಪ್ರಭು ಎಸ್ ಸಿ ಎಸ್ ಟಿ ಘಟಕ ರಾಜ್ಯ ಕಾರ್ಯದರ್ಶಿ  ಮಾತನಾಡಿದ ಅವರು ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ   ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಾಗೂ ಸ್ವಚ್ಛ ಪ್ರಮಾಣಿಕ ರಾಜಕಾರಣಕ್ಕಾಗಿ ಲಂಚ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ  ಕೆಆರ್‌ಎಸ್ ಪಕ್ಷದ ಅಭಿಯಾನವು  ಹೋಬಳಿ ಗ್ರಾಮ ಮಟ್ಟದಿಂದ  ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಮೂಲಕ ಈ ಅಭಿಯಾನವನ್ನು ಆರಂಭಿಸಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ  ಕೆ ಆರ್ ಎಸ್ ಪಕ್ಷದ ರಾಜ್ಯ ಘಟಕದ ಯುವ ಕಾರ್ಯದರ್ಶಿ  ದ್ಯಾವಣ್ಣ ಫುಲ್ ದಿನ್ನಿ, ಜಿಲ್ಲಾ ಉಪಾಧ್ಯಕ್ಷ ಸಮಿತಿಯ ಕೃಷ್ಣಪ್ಪ ಸುಕಾಲ್ ಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಜಯಕುಮಾರ್,

 ಕಾರ್ಯದರ್ಶಿ ವಿಶ್ವನಾಥ ನಾಯ್ಡು, ಸಿಂಧನೂರು ಉಸ್ತವಾರಿ  ಶರಣಪ್ಪ ಕವಿತಾಳ , ಮಸ್ಕಿ ತಾಲೂಕ ಅಧ್ಯಕ್ಷ  ಬಸವರಾಜ ಅಮಿನಗಡ, ಪ್ರಧಾನ ಕಾರ್ಯದರ್ಶಿ ಪಂಪಪತಿ, ಸಿಂಧನೂರು ತಾಲೂಕ ಅಧ್ಯಕ್ಷ ವೀರೇಶ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗೌಡ,

ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

What's Your Reaction?

like

dislike

love

funny

angry

sad

wow