ಸಿಂಧನೂರಿನಲ್ಲಿ ಜನರೊಂದಿಗೆ ಜನತಾದಳ ಸಮಾವೇಶ.!
ಜೆಡಿಎಸ್ ಪಕ್ಷದ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನ
ವರದಿ:ಬಸವರಾಜ ಬುಕ್ಕನಹಟ್ಟಿ, ಸಿಂಧನೂರು
ಸಿಂಧನೂರು : ಜೂನ್ 26 ರಂದು ನಗರದ ಯಲಮಂಚಾಲೆ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಜೆಡಿಎಸ್ ಯುವ ಘಟಕ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಡಿಎಸ್ ಪಕ್ಷದಿಂದ ನಡೆಯುತ್ತಿರುವ ಜನರೊಂದಿಗೆ ಜನತಾದಳ ಸಂಘಟನಾ ರಾಜ್ಯ ಪ್ರವಾಸ ಹಾಗೂ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು ರಾಯಚೂರು ಸಿಂಧನೂರು ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಜೆಡಿಎಸ್ ವರಿಷ್ಠರು ಕಾರ್ಯಕರ್ತರು ಪಕ್ಷ ಬಲಪಡಿಸಿ ಜನರ ಧ್ವನಿಯಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಪೂರ್ಣಾವಧಿ ಅಧಿಕಾರ ನೀಡಿದರೆ ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನಾನು ಸಿಂಧನೂರು ತಾಲೂಕಿಗೆ ಕೋಟಿ ಕೋಟಿ ಅನುದಾನ ತಂದು ಹಳ್ಳಿಗಲ್ಲಿ ರಸ್ತೆ- ಚರಂಡಿ ನಗರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ರಂಗಮಂದಿರ ಇನ್ನು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಆಗುವಂತಹ ಕೆಲಸ ಮಾಡಿದ್ದರೂ ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಯಾಕೆ ಸೋಲಿಸಿದ್ದಾರೆ ಅನ್ನುವುದು ಇನ್ನುವರೆಗೂ ಯಕ್ಷಪ್ರಶ್ನೆಯಾಗಿದೆ ಎಂದು ನೋವು ತೋಡಿಕೊಂಡರು
ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಪ್ರಸ್ತವಿಕ ಮಾತನಾಡಿದರು ಸುಮಿತ್ ತಡಕಲ್ ಕಾರ್ಯಕ್ರಮ ನಿರೂಪಿಸಿದರು
ಈ ಸಂದರ್ಭದಲ್ಲಿ. ಮಾಜಿ ಸಚಿವ ವೆಂಕಟರಾವ್ ನಾಡಗೌಡ. ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ್. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್. ಹಗರಿಬೊಮ್ಮನಹಳ್ಳಿ ಶಾಸಕ ಹೇಮಚಂದ್ರ ನಾಯಕ್. ಮಹಿಳಾ ಘಟಕ ರಾಜ್ಯಾಧ್ಯಕ್ಷೆ ರೇಷ್ಮಾ ರಾಮೇಗೌಡ. ಸರಸ್ವತಿ ಪಾಟೀಲ್. ಸಿಬಿ. ಚಂದ್ರಶೇಖರ್. ಅಂಗವಿಕಲರ ಸಂಘದ ರಾಜ್ಯ ಘಟಕ ಅಧ್ಯಕ್ಷ ದೇವೇಂದ್ರ ಗೌಡ. ಧರ್ಮನ ಗೌಡ ಮಲ್ಕಾಪುರ. ಸಿದ್ದು ಬಂಡಿ. ಮರಳು ಸಿದ್ದಯ್ಯ ಗೊರೆಬಾಳ. ಮಾಂತೇಶ್ ಪಾಟೀಲ್. ನರಸಯ್ಯ ನಾಯಕ್. ಅಲ್ಲಮಪ್ರಭು ಪೂಜಾರ್. ಚಂದ್ರಶೇಖರ್ ಮೈಲಾರಿ. ಜಿ. ಸತ್ಯನಾರಾಯಣ. ಲಕ್ಷ್ಮಿಪತಿ. ಶಿವಶಂಕರ್ ವಕೀಲರು ಇನ್ನು ಅನೇಕರಿದ್ದರು
What's Your Reaction?






