ನ್ಯಾಯಾಲಯ ಆದೇಶದ ಹಿನ್ನೆಲೆ ಬದಲಾದ ಕೇಂದ್ರ ಸಚಿವರ ಕಾರ್ಯಕ್ರಮದ ಸ್ಥಳ
ತುರುವೇಕೆರೆ: ಕೆಲವು ತಿಂಗಳ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶ ಇಂದು ಕೇಂದ್ರ ಸರ್ಕಾರದ ಸಚಿವರ ಸರ್ಕಾರಿ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದೆ.

ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ತುರುವೇಕೆರೆ ಕ್ಷೇತ್ರ ಭೇಟಿ ಹಾಗೂ ಕ್ಷೇತ್ರದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಶೇಷಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯನ್ನು ಇದೇ ತಿಂಗಳ 14 ರಂದು ಪಟ್ಟಣದ ಗುರುಭವನ ಆವರಣದಲ್ಲಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಭಾವಚಿತ್ರಗಳನ್ನು ಒಳಗೊಂಡ ಕೆಲವು ಫ್ಲೆಕ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಸ್ಥಳ ಬದಲಾವಣೆಯೊಂದಿಗೆ ಅದೇ ಫ್ಲೆಕ್ಸ್ ಗಳು ಸಾಮಾಜಿಕ ಜಾಲತಾಣ ವಾಟ್ಸಪ್ ಅಲ್ಲಿ ಬಂದವು. ಸ್ಥಳ ಬದಲಾವಣೆಗೆ ಕಾರಣ ನ್ಯಾಯಾಲಯದ ಆದೇಶ ಎಂಬುದು. ಏನಿತ್ತು ನ್ಯಾಯಾಲಯದ ಆದೇಶ ಎನ್ನುವುದಾದರೆ ವಾಸ್ತವವಾಗಿ ಕೆ.ಹಿರಣ್ಣಯ್ಯ ರಂಗಮಂದಿರ ಆವರಣ ಅಥವಾ ಗುರುಭವನದ ಆವರಣ ಪಟ್ಟಣದ ಶತಮಾನದ ಶಾಲೆಯಾದ ಸರ್ಕಾರಿ ಬಾಲಕರ ಪಾಠಶಾಲೆಯದ್ದಾಗಿದೆ. ಈ ಶಾಲೆಯ ಆವರಣದಲ್ಲಿ ಶಾಲೆಯ ಕಾರ್ಯಕ್ರಮ ಹೊರತುಪಡಿಸಿ ಮತ್ತೆ ಯಾವ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಕೆಲವು ತಿಂಗಳ ಹಿಂದೆ ನ್ಯಾಯಾಲಯ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ತುರುವೇಕೆರೆ ಕ್ಷೇತ್ರ ಭೇಟಿ ಹಾಗೂ ಕ್ಷೇತ್ರದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಶೇಷಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯ ಸ್ಥಳ ಗುರುಭವನದಿಂದ ಪಟ್ಟಣದ ವೈ.ಟಿ.ರಸ್ತೆಯಲ್ಲಿ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆಸಲಾಗುತ್ತಿದೆ.
What's Your Reaction?






