ಸಂಸದರಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸಸಿಕಾಂತ್  ಸೆಂತಿಲ್ : ಸಂವಾದ ಕಾರ್ಯಕ್ರಮಕ್ಕೆ ಯುವಕರು,  ಜಾತ್ಯತೀತ, ಜನಪರ ಒಡನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಬ್ದುಲ್ ಗನಿ ಸಾಬ್ ಮಸ್ಕಿ ಕರೆ.

ರಾಯಚೂರು | ಮಾಜಿ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದರು ಸಸಿಕಾಂತ್ ಸೆಂತಿಲ್ ಅವರು ರಾಯಚೂರು ಜಿಲ್ಲೆಗೆ ಅಕ್ಟೋಬರ್ 26 ರಂದು ಆಗಮಿಸುತ್ತಿದ್ದಾರೆ ಎಂದು ಹಿರಿಯ ಹೋರಾಟಗಾರ ಅಬ್ದುಲ್ ಗನಿ ಸಾಬ್ ಮಸ್ಕಿ ಅವರು ತಿಳಿಸಿದರು. ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಈ ದಿನ. ಕಾಮ್ ಮಾಧ್ಯಮ ವತಿಯಿಂದ ಆಯೋಜಿಸಲಾದ ಈ ದಿನ ಸಂವಾದ ಕಾರ್ಯಕ್ರಮಕ್ಕೆ  ಮುಖ್ಯ ಭಾಷಣಕಾರರಾಗಿ  ಆಗಮಿಸುತ್ತಿದ್ದಾರೆ  ಎಂದರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು , ಅಲ್ಪಾವಧಿಯಲ್ಲಿಯೇ ಅತ್ಯಂತ ಕರ್ತವ್ಯ ಪ್ರಜ್ಞೆ ಮರೆದಿದ್ದಾರೆ ,ದಕ್ಷ ಅಧಿಕಾರಿ ಹಾಗೂ ಜನ ಸಾಮಾನ್ಯರ ನಡುವೆ ಹೆಸರು ಮಾಡಿರುತ್ತಾರೆ. ಸಸಿಕಾಂತ್ ಸೆಂಥಿಲ್‌ರವರು ಸರ್ಕಾರಿ ಸೇವೆಯಲ್ಲಿ ಅಲ್ಲಿ ರಾಜೀನಾಮೆ ನೀಡಿ ನಂತರ ವಿವಿಧ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತ ,ಸಂಸದರಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ " ಈದಿನ.ಕಾಮ್ ಮಾಧ್ಯಮ ಎರಡು ವರ್ಷದ ನಡೆದು ಬಂದ ಹಾದಿಯ ಬಗ್ಗೆ ತಿಳಿಸುವುದು ಹಾಗೂ ಈದಿನ ಮಾಧ್ಯಮ ಹಾಗೂ ವಿವಿಧ ಜನಪರ ಸಂಘಟನೆಗಳು ಸೇರಿ ಸೆಂಥಿಲ್ ಅವರ ಜೊತೆ " ಜನಪ್ರಿಯ ಜಿಲ್ಲಾಧಿಕಾರಿ ಸಂಸದರಾಗಿದ್ದು ಏಕೆ? ಭಾರತವೆಂಬ ಪರಿಕಲ್ಪನೆ ಉಳಿಸಲು ಹೇಗೆ ಸಾಧ್ಯ? ಎಂಬ ವಿಷಯಗಳ ಕುರಿತು ಸಂವಾದವನ್ನು ಏರ್ಪಡಿಸಿದೆ ಎಂದರು. ಜಿಲ್ಲೆಯ ದಲಿತ ಪರ ಸಂಘಟನೆಗಳು , ಪ್ರಗತಿ ಪರ ಸಂಘಟನೆಗಳು, ಯುವಕರು,  ಜಾತ್ಯತೀತ ಮತ್ತು ಜನಪರ ಒಡನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

 - 
Oct 24, 2024 - 20:37
 0  85
ಸಂಸದರಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸಸಿಕಾಂತ್  ಸೆಂತಿಲ್ : ಸಂವಾದ  ಕಾರ್ಯಕ್ರಮಕ್ಕೆ  ಯುವಕರು,  ಜಾತ್ಯತೀತ, ಜನಪರ ಒಡನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಬ್ದುಲ್ ಗನಿ ಸಾಬ್ ಮಸ್ಕಿ  ಕರೆ.
ರಾಯಚೂರು | ಮಾಜಿ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದರು ಸಸಿಕಾಂತ್ ಸೆಂತಿಲ್ ಅವರು ರಾಯಚೂರು ಜಿಲ್ಲೆಗೆ ಅಕ್ಟೋಬರ್ 26 ರಂದು ಆಗಮಿಸುತ್ತಿದ್ದಾರೆ ಎಂದು ಹಿರಿಯ ಹೋರಾಟಗಾರ ಅಬ್ದುಲ್ ಗನಿ ಸಾಬ್ ಮಸ್ಕಿ ಅವರು ತಿಳಿಸಿದರು.
ಸಂಸದರಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸಸಿಕಾಂತ್  ಸೆಂತಿಲ್ : ಸಂವಾದ  ಕಾರ್ಯಕ್ರಮಕ್ಕೆ  ಯುವಕರು,  ಜಾತ್ಯತೀತ, ಜನಪರ ಒಡನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಬ್ದುಲ್ ಗನಿ ಸಾಬ್ ಮಸ್ಕಿ  ಕರೆ.

What's Your Reaction?

like

dislike

love

funny

angry

sad

wow