ಮಸ್ಕಿ  ಕನ್ನಡ ರಾಜ್ಯೋತ್ಸವ ಸಂಭ್ರಮ l ಏಕೀಕರಣ ಹೋರಾಟಗಾರರ ತ್ಯಾಗ ಸ್ಮರಣೀಯ : ಡಾll. ಮಲ್ಲಪ್ಪ ಯರಗೋಳ.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಬಸವ ವೃತ್ತ, ಅಶೋಕ ವೃತ್ತದ ಬಳಿ   ಕನ್ನಡ ಪರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಿದರು. ಮಸ್ಕಿ ವಿವಿಡೆ ಕನ್ನಡ ರಾಜ್ಯೋತ್ಸವ ಅಂಗವಾಗಿ  ಕನ್ನಡ ಪರ  ಸಂಘಟನೆಗಳ ಅಧ್ಯಕ್ಷರು ಧ್ವಜಾರೋಹಣ  ಮಾಡಿದರು.

 - 
Nov 2, 2024 - 21:18
 0  13

ಮಸ್ಕಿ ತಾಲೂಕ್ ಆಡಳಿತ ಮತ್ತು ಪುರಸಭೆ ವತಿಯಿಂದ  ೬೯ನೇ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು  ಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದರು.  ನಗರದ ಕೇಂದ್ರ ಶಾಲೆಯ ಮೈದಾನದಲ್ಲಿ ಶುಕ್ರವಾರದಂದು  ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಸೀಲ್ದಾ‌ರ್ ಡಾ.ಮಲ್ಲಪ್ಪ ಯರಗೋಳ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಕರ್ನಾಟಕ ರಾಜ್ಯ ಹಲವು ವೈವಿಧ್ಯತೆಗಳ ತವರೂರಾಗಿದ್ದು. ಇಂತಹ ನಾಡಿನಲ್ಲಿ ಜನಸಿದ ನಾವುಗಳು ಧನ್ಯರಾಗಿದ್ದು, ಪರಭಾಷೆ ಮೋಹಕ್ಕೆ ಒಳಗಾಗದೆ ನಮ್ಮ ಕನ್ನಡ ನೆಲ, ಜಲ, ನಾಡು ನುಡಿಯ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಕಲ್ಯಾಣ ಕರ್ನಾಟಕ  ಏಕೀಕರಣ ಹೋರಾಟಗಾರರ ತ್ಯಾಗ ಸ್ಮರಣೀಯ. ಅದರಂತೆಯೇ ಕವಿ ಸಾಹಿತಿಗಳು ಕನ್ನಡ ಪರ ಸಂಘಟನೆಗಳ ಹೋರಾಟ ತ್ಯಾಗವು  ಅನನ್ಯ, ಮತ್ತು  ಮಹಾಂತೇಶ್ ಮಸ್ಕಿ ಅವರಿಗೆ ಜಿಲ್ಲಾಡಳಿತದಿಂದ  ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ  ನೀಡಿ ಜಿಲ್ಲಾಡಳಿತದಿಂದ ಅವರಿಗೆ ಸನ್ಮಾನಿಸುತ್ತಿರುವುದು ಮಸ್ಕಿ ಜನತೆಗೆ ಹೆಮ್ಮೆಯ ವಿಷಯವಾಗಿದೆ  ಎಂದರು. 

ನಂತರ ಶಾಸಕ ಆ‌ರ್. ಬಸನಗೌಡ ತುರುವಿಹಾಳ ಮಾತನಾಡಿ, ಕನ್ನಡ ರಾಜ್ಯೋತ್ಸವ ಒಂದು ಸಂಭ್ರಮದ ಹಬ್ಬ. ಕರ್ನಾಟಕ ಒಂದು ಸುಂದರ ಬೀಡು. ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರದ್ದೂ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಭುವನೇಶ್ವರಿ ಭಾವಚಿತ್ರ, ವಿವಿಧ ಲಿಂಗೈಕ್ಯ ಸ್ವಾಮೀಜಿಗಳ, ಚಿತ್ರನಟರ, ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಿಡಿದುಕೊಂಡು ನೃತ್ಯಗಳನ್ನು ಮಾಡಿದರು ಮತ್ತು ವಿವಿಧ ಕರ್ನಾಟಕ ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತವಾಗಿದೆ. ನಮ್ಮ ನಾಡು ನುಡಿ ಮತ್ತು ಕಲೆ ಸಂಸ್ಕೃತಿಯನ್ನು ಉಳಿಸಿ 

ಮಹನೀಯರ ವೇಷ ಭೂಷಣ ಧರಿಸಿದ್ದ ಮಕ್ಕಳು ನೋಡುಗರ ಕಣ್ಮನ ಸೆಳೆದರು.

ನಂತರ ಪಟ್ಟಣದ ಕೇಂದ್ರ ಶಾಲೆಯಿಂದ ಹಳೇ ಬಸ್ ನಿಲ್ದಾಣ, ಅಶೋಕ ವೃತ್ತ, ಖಲೀಲ್ ವೃತ್ತ, ದೈವದ ಕಟ್ಟೆ, ಕನಕದಾಸ ವೃತ್ತ ಮುಖಾಂತರ ಭ್ರಮರಾಂಬ ದೇವಿ ಕಲ್ಯಾಣ ಮಂಟಪದವರೆಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ, ಆ‌ರ್.ಬಸನಗೌಡ ತುರುವಿಹಾಳ ಶಾಸಕ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಸಿಪಿಐ ಬಾಲಚಂದ್ರ ಲಕ್ಕಂ, ತಾಪಂ ಇಒ ಅಮರೇಶ್ ಯಾದವ್, ನೀರಾವರಿ ಅಧಿಕಾರಿ ದಾವುದ್, ಕೆಕೆಆರ್‌ಟಿಸಿ ವ್ಯವಸ್ಥಾಪಕರು ಆದಪ್ಪ, ಎಇಇ ಅಮರೇಗೌಡ, ಕನ್ನಡ ಉಪನ್ಯಾಸಕ ಮಲ್ಲಯ್ಯ ಉದ್ದಾಳ ಮತ್ತಿತರರಿದ್ದರು.

What's Your Reaction?

like

dislike

love

funny

angry

sad

wow