ಚಿಕ್ಕ ವಯಸ್ಸಿನಲ್ಲೇ ದಾಖಲೆ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಆಯ್ಕೆ.
ಹುಮನಾಬಾದ್: ತಾಲೂಕಿನ ದುಬಲಗುಂಡಿ ಗ್ರಾಮದ ಸೈಯದ್ ಮೋಸಿನ ಅಲಿಯ ಸುಪುತ್ರ ಸಯ್ಯದ್ ತಯ್ಯಬ್ ಅಲಿ 2023ರ ಜ.1ರಂದು ಬಸವಕಲ್ಯಾಣದಲ್ಲಿ ಜನಿಸಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದವರು. 1ವರ್ಷ 10 ತಿಂಗಳ ವಯಸ್ಸಿನಲ್ಲಿ ತನ್ನ ಜ್ಞಾನ ತೋರಿಸುವ ಮೂಲಕ ಮಕ್ಕಳ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾನೆ. ಈತನ ಸಾಧನೆ ವಾರಗಳು ಕನ್ನಡ ಮತ್ತು ಅರಬಿ duwa ಗಳು ಹಾಗೂ ಹದೀಸ್ ಕೂಡ ಹೇಳ್ತಾನೆ , ಇಂಗ್ಲಿಷ್‌ನಲ್ಲಿ ತಿಂಗಳುಗಳ ಹೆಸರು ಹಂತ ಹಂತವಾಗಿ ಹೇಳಿತ್ತಾನೆ.
ಚಿತ್ರಗಳೊಂದಿಗೆ ವರ್ಣಮಾಲೆಗಳು, ತರಕಾರಿಗಳು, ಹಣ್ಣುಗಳು ಗುರುತಿಸುವುದು, ಸ್ವಾತಂತ್ರ್ಯ ಹೋರಾಟಗಾರ ಹೆಸರು ಹೇಳಿದರೆ ಭಾವಚಿತ್ರ ಗುರುತಿಸುವುದು, ಇಂಗ್ಲಿಷ್‌ನಲ್ಲಿ ದೇಹದ ಭಾಗಗಳು ಹೇಳಿದರೆ ಗುರುತಿಸುವನು, ಪ್ರಾಣಿಗಳನ್ನು ಗುರುತಿಸಿ ಪ್ರಾಣಿಗಳ ಹೆಸರು ಹೇಳಿದರೆ ಅವುಗಳ ಧ್ವನಿ ಮಿಮಿಕ್ರಿ ಮಾಡುತ್ತಾನೆ. ಈ ಪುಟಾಣಿಯ ಕೌಶಲವನ್ನು ಕಂಡು ಕೆಎಬಿಆರ್ (ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್) ಹೆಮ್ಮೆಯಿಂದ ಗೌರವಿಸಿದೆ. ಈ 1ವರ್ಷ 10 ತಿಂಗಳ ಮಗುವಿನ ಸಾಧನೆಯನ್ನು ಗುರುತಿಸಿ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಆಯ್ಕೆಮಾಡಿ ಪ್ರಮಾಣ ಪತ್ರ ಮೆಡಲ್, ಅವಾರ್ಡ್ ಐಡಿ ನೀಡಿ ಗೌರವಿಸಿದೆ.
What's Your Reaction?