ರೈತ ಸ್ನೇಹಿ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ : ಭತ್ತದ ಬೆಳೆ ವೀಕ್ಷಣೆ, ರೈತರಿಗೆ ಪರಿಹಾರ ಕೊಡಿಸಲು ಭರವಸೆ.
ಮಸ್ಕಿ : ಬಳಗಾನೂರು ಮತ್ತು ಲಕ್ಷ್ಮಿ ಕ್ಯಾಂಪ್, ಗೌಡನ್ ಬಾವಿ, ಬೆಳಗೆನೂರ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಗಳಿಗೆ ನಿನ್ನೆ ಸಂಜೆ 5:00ಗೆ ಮಳೆ ಮತ್ತು ಗಾಳಿಯಿಂದ ರೈತರು ಬೆಳೆದಿರುವ ಭತ್ತ ಪೈರು ಸಂಪೂರ್ಣವಾಗಿ ನೆಲಸಮ ವಾಗಿ ನಷ್ಟದ ಅಂಚಿನಲ್ಲಿ ಇರುವ ರೈತರ ಗದ್ದೆಗಳಿಗೆ ರೈತ ಸ್ನೇಹಿ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಭೇಟಿ ನೀಡಿ ಭತ್ತದ ಬೆಳೆ ವೀಕ್ಷಣೆ ಮಾಡಿ ರೈತರಿಗೆ ಪರಿಹಾರ ಕೊಡಿಸಲು ಭರವಸೆ ನೀಡಿದರು.
ರೈತರ ಸಮುಖದಲ್ಲಿ ಮಸ್ಕಿ ತಹಸೀಲ್ದಾರ್ ಹಾಗೂ R I, VA ಗಳಿಗೆ ಫೋನ್ ಮುಖಾಂತರ ಸಂಪರ್ಕ ಮಾಡಿ ನೂರಾರು ಎಕರೆ ರೈತರ ಭತ ಗಾಳಿ ಮತ್ತು ಮಳೆಯಿಂದ ರೈತರು ಸಂಕಷ್ಟದಲ್ಲಿ ಬೆಳೆದ ಭತ್ತದ ಪೈರು ನೆಲಸಮವಾಗಿ ನಷ್ಟದ ಅಂಚಿನಲ್ಲಿ ಇರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರಿಯಾಗಿ ಸರ್ವೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳನ್ನು ಫೋನ್ ಸಂಭಾಷಣೆಯ ಮುಖಾಂತರ ಸಮಾಲೋಚನೆ ನಡೆಸಿದರು.
ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ, ಪಕ್ಷದ ಮುಖಂಡರಾದ ಶೇಖರಪ್ಪ ಮೇಟಿ , ಸಂತೋಷ್ ಅಂಬ್ಲಿ ಗೋವಿಂದ ರೆಡ್ಡಿ ಗೌಡನಬಾವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವಿಕುಮಾರ್ , ಅಮರೇಶ್ ಗೌಡನಬಾವಿ ಬಸಪ್ಪ ಬಿಜೆಪಿ ರಾಘವೇಂದ್ರ ಗುತ್ತೇದಾರ್ ಮುದುಕಪ್ಪ ಹಳ್ಳಿ , ತಿಕ್ಕಯ್ಯ, ರಾಜಶೇಖರ್ ವೀರೇಶ್ ಸ್ವಾಮಿ,ಗಣೇಶ ಡಿಶ್ ಬಸವರಾಜ್ ನಾಯಕ್, ರೈತರು, ಪಕ್ಷದ ಮುಖಂಡರು ಕಾರ್ಯಕರ್ತರು ವೀಕ್ಷಣೆಯಲ್ಲಿ ಭಾಗಿಯಾಗಿದ್ದರು.
What's Your Reaction?