ಶ್ರೀ ಮಲ್ಲಿಕಾರ್ಜುನ ಮಹಾರಥೋತ್ಸವ ನಿಮಿತ್ಯ ಮುಂಜಾಗ್ರತ ಕ್ರಮಗಳು ವಹಿಸಿ:ಸುರೇಶ ಹರಸೂರು
ಮಲ್ಲಿಕಾರ್ಜುನ ಜಾತ್ರೆ ಅಂಗವಾಗಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ಸಭೆ ಜರುಗಿತು.
ಮಸ್ಕಿ, ಜ 28: ಪಟ್ಟಣದ ಪುರಸಭೆಯ ಅಧ್ಯಕ್ಷ ಸುರೇಶ ಹರಸೂರು ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಭೆ ನೆಡೆಸಿ ಪುರಸಭೆ ಮುಖ್ಯ ಅಧಿಕಾರಿ ನರಸ ರೆಡ್ಡಿ, ಪುರಸಭೆಯ ಉಪಾಧ್ಯಕ್ಷೆ ಗೀತಮ್ಮ ಶಿವರಾಜರವರು, ಪುರಸಭೆ ಸಾಯಿ ಸಮಿತಿ ಅಧ್ಯಕ್ಷ ಚೇತನ್ ಪಾಟೀಲ್ ನೇತೃತ್ವದ ಪುರಸಭೆ ಸದಸ್ಯರ ಜೊತೆ ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಂಡುರು.
ದಿನಾಂಕ: 01.02.2026 ರಂದು ಜರುಗುವ ಪಟ್ಟಣದ ಆರಾಧ್ಯ ದೈವನಾದ ಶ್ರೀ ಮಸ್ಕಿ ಮಲ್ಲಿಕಾರ್ಜುನಸ್ವಾಮಿಯ ಮಹಾರಥೋತ್ಸವ ನಿಮಿತ್ಯ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆ, .ತೇರ ಬಜಾರ ಸ್ವಚ್ಚತೆ, ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿಗಳನ್ನು ತೆರವುಮಾಡಿ ಸುಗಮ `ಸಂಚಾರಕ್ಕೆ ರಸ್ತೆ ದುರಸ್ತೆ, ಶೌಚಾಲಯ ವ್ಯವಸ್ಥೆಯನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಿದರು.
ಫೆ 2 ರ ಬೇಸಿಗೆಯಲ್ಲಿ ಮಸ್ಕಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತ ಕ್ರಮವಾಗಿ ಪಟ್ಟಣಕ್ಕೆ 5 ದಿನಕ್ಕೊಮ್ಮೆ ಕೆರೆಯ ನೀರು ಸರಬರಾಜು ಮಾಡುವುದು, ದಿನಬಳಕೆಗಾಗಿ ಬೋರವೆಲ್ ನೀರು ಒದಗಿಸುವುದು, ಅವಶ್ಯವಿರುವ ಕಡೆ ಹೆಚ್ಚಿನ ಬೋರವೆಲ್ ಕೊರೆಯಿಸುವುದು, ಅತೀ ಅವಶ್ಯವಿದ್ದಲ್ಲಿ ಟ್ಯಾಂಕರ್ ನೀರು ಸರಬರಾಜಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳುವುದು, ಆರ್.ಓ ಪ್ಲಾಂಟ್‌ಗಳನ್ನು ತುರ್ತಾಗಿ ದುರಸ್ತಿಪಡಿಸಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ತೀರ್ಮಾನಿಸಲಾಯಿತು.
ಅಧ್ಯಕ್ಷರ ಅಪ್ಪಣೆ ಮೇರೆಗೆ ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಜಮೀನು ಸರ್ವೆ ನಂ 104/2/12, 13/9, 11/5, 19/1/9, 19/1/11 ರಲ್ಲಿ ಬಿನ್‌ಶೇ ಹೊಂದಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ತಾಂತ್ರಿಕ ಅನುಮೋದನೆಗೊಂಡ ವಿನ್ಯಾಸಗಳಿಗೆ ಕ.ಪು.ಕಾಯ್ದೆ 1964 ರ ಕಲಂ 170 ರಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಮತ್ತು ವಿವಿಧ ವಾರ್ಡಗಳ ಸದಸ್ಯರ ಮನವಿಗಳನ್ನು ಪರಿಶೀಲಿಸಿ ಸದಸ್ಯರ ಕೋರಿಕೆಯಂತೆ ವಾರ್ಡಗಳಲ್ಲಿನ ಸಮಸ್ಯೆಗಳಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಧ್ಯತೆಯ ಮೇರೆಗೆ ಮತ್ತು ಅನುದಾನದ ಲಭ್ಯತೆಯ ಮೇರೆಗೆ ಕ್ರಮವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
What's Your Reaction?



