ಬೀಡಾಡಿ ದನಗಳನ್ನು ಕೂಡಲೇ ಬೇರೆಡೆ ಸಾಗಿಸಿ ರೈತರ ಸಂಕಷ್ಟ ನಿವಾರಿಸಿ: ನಾಗರೆಡ್ಡಿಪ್ಪ ದೇವರಮನಿ
ಮಸ್ಕಿ, ಫೆ31: ರೈತ ಹಿತರಕ್ಷಣಾ ಹೋರಾಟ ಸಮಿತಿ ಮಸ್ಕಿತಾಲೂಕಿನ ಘಟಕ ತಾಲೂಕ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮವಿನ ಪತ್ರ ಸಲ್ಲಿಸಿದರು.
ಬುದ್ದಿನ್ನಿ ಎಸ್, ಸಾನಬಾಳ, ಹೂವಿನಭಾವಿ, ಮುದಬಾಳ, ಅಂಕುಶದೊಡ್ಡಿ, ಕಾಟಗಲ್, ವೆಂಕಟಾಪುರ ಮತ್ತು ಮಸ್ಕಿ ಸೀಮಾ ವ್ಯಾಪ್ತಿಯ ರೈತರ ಹೊಲಗಳಿಗೆ ಹಿಂಡು ಹಿಂಡಾಗಿ ನುಗ್ಗಿ, ಬೆಳೆ ತಿಂದು ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡುತ್ತಿರುವ ನೂರಾರು ಬೀಡಾಡಿ ದನಗಳನ್ನು ಕೂಡಲೇ ಬೇರೆಡೆ ಸಾಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಾಗರೆಡ್ಡಿಪ್ಪ ದೇವರಮನಿ ರೈತ ಮುಖಂಡ
ಬೀಡಾಡಿ ದನಗಳು ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೈತರ ಜಮೀನುಗಳ ಸಮೀಕ್ಷೆ ನಡೆಸಿ ಎಕರೆಗೆ 25 ಸಾವಿರ ಗಳಂತೆ ರೈತರಿಗೆ ಪರಿಹಾರ ನೀಡಬೇಕು ಹಾಗೂ 15 ದಿನಗಳ ಒಳಗಡೆ ಬಿಡಾಡಿ ದನಗಳನ್ನು ಬೇರೆ ಸಾಗಿಸಬೇಕು ಒಂದು ವೇಳೆ ನಿರ್ಲಕ್ಷ ತೋರಿದರೆ ರೈತ ಹಿತರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳಿಂದ ಅನಿರ್ದಿಷ್ಟ ಅವಧಿ ಧರಣಿಗೆ ಮುಂದಾಗುವುದು.
ಪ್ರತಿಕ್ರಿಯೆ...
ತಹಸಿಲ್ದಾರ್ ಮಂಜುನಾಥ್ ಭೋಗವತಿ
ಈ ಕೂಡಲೇ ರೈತರ ಬೆಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬೀಡಾಡಿ ದನಗಳನ್ನು ಕಡಿವಾಣ ಹಾಕಲು ಸೂಚಿಸಲಾಗುವುದು.
ಈ ಸಂದರ್ಭದಲ್ಲಿ ಬಸವರಾಜ್ ಏಳಿಗೆರ್, ನ್ಯಾಯವಾದಿ ಅನಿಲ್ ಕುಮಾರ್, ಬಸವರಾಜ್ ಹಳ್ಳಿ, ರಮೇಶ್, ಯಮನೂರಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
What's Your Reaction?



