ಬೀದಿ ನಾಯಿ ಕಡಿತ: ಗಾಯಾಳುಗಳಿಗೆ 5000 ರೂ. ಚೆಕ್ ಸಹಾಯಧನ

ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ  ಅವರ ಪ್ರತಿಕಿಯೇ ವೈದ್ಯಾಧಿಕಾರಿಗಳು ಬರೆದ ಪತ್ರದ ಮಾಹಿತಿ ಬಂದ ತಕ್ಷಣ ಸರ್ವೆ ನಡೆಸಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವವರಿಗೆ ದೃಢೀಕರಿಸಿ ಸೂಕ್ತ ಪರಿಹಾರ ಚೆಕ್ ನೀಡಲಾಗುವುದು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳ ಕಡಿವಾಣಕ್ಕೆ ಟೆಂಡರ್  ಕರೆಯಲಾಗಿದ್ದು  ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.

Jan 29, 2026 - 10:33
 0  24
ಬೀದಿ ನಾಯಿ ಕಡಿತ: ಗಾಯಾಳುಗಳಿಗೆ 5000 ರೂ. ಚೆಕ್ ಸಹಾಯಧನ
ವರದಿ : ✍️ಹುಚ್ಚೇಶ್ ನಾಗಲೀಕರ್

ಮಸ್ಕಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ದಿನಾಂಕ ಕಳೆದ ಎರಡು ದಿನಗಳ ಹಿಂದೆ ಬೀದಿ ನಾಯಿಗಳ ಹಾವಳಿಗೆ ಸಿಲುಕಿ ಗಾಯಗೊಂಡವರಿಗೆ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮದಡಿ ಸರ್ಕಾರದ ಆದೇಶ ಸಂಖ್ಯೆ ನಆಇ 159 ಜಿಇಎಲ್ 2023 ದಿನಾಂಕ 30/10/2023 ಸದರಿ ಆದೇಶದಂತೆ ಹೆಚ್ಚಿನ ಚಿಕಿತ್ಸೆಗಾಗಿ ಪರಿಹಾರ ಧನ ತಲಾ 5,000ರಂತೆ ಗಾಯಗೊಂಡವರಾದ 1.ಸಿಂಚನ 2.ವಂದನ 3.ಮುಸ್ಕಾನ್ 4.ಸಂಜೀವ 5.ಮುತ್ತುರಾಜ್ 6. ಅಮರಪ್ಪ 7.ಯಲ್ಲಮ್ಮ 8.ದಾವಲಸಾಬ್‌ 9.ಶಿವಮ್ಮ 10.ರಾಜಸಾಬ್ 11.ರಿಜ್ವಾನ್ ಇವರಿಗೆ ಬುಧವಾರದಂದು ಪುರಸಭೆ ಸುರೇಶ ಜಿ ಹರಸೂರು ನೇತ್ರತ್ವದಲ್ಲಿ ಮುಖ್ಯಾಧಿಕಾರಿ ನರಸರೆಡ್ಡಿ ಹಾಗೂ ನೈರ್ಮಲ್ಯ ಸಿಬ್ಬಂದಿಗಳಾದ ಸುನಿಲ್ ಕುಮಾರ್, ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಅಜರುದ್ದೀನ್ ಸ್ಯಾನಿಟರಿ ಸೂಪರ್ವೈಸರ್ ರವರು ಮನೆ ಮನೆಗಳಿಗೆ ಭೇಟಿ ನೀಡಿ ಚೆಕ್ ನೀಡುವ ಮೂಲಕ ಪರಿಹಾರ ಧನ ವಿತರಿಸಲಾಯಿತು.

What's Your Reaction?

like

dislike

love

funny

angry

sad

wow