ಭಗವದ್ಗೀತೆಯಲ್ಲಿನ ಮೌಲ್ಯಗಳು ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜೀವನ ವಿಧಾನ.

ಭಾರತದ ಇತಿಹಾಸದಲ್ಲಿ ಡಾಕ್ಟರ್ ಬಿ,ಆರ್,ಅಂಬೇಡ್ಕರವರ ಹೆಸರು ಅಚ್ಚಳಿಯದೆ ಧ್ರುವ ನಕ್ಷತ್ರದಂತೆ ಸದಾಕಾಲ ಹೊಳೆಯುತ್ತಿದೆ. ಕಾರಣ ಇವರೊಬ್ಬ ಪ್ರಖ್ಯಾತ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನ ಶಿಲ್ಪಿ, ಅಪ್ರತಿಮ ಹೋರಾಟಗಾರ,ಮಹಾ ಮಾನವತಾವಾದಿ,ಪಾಂಡಿತ್ಯ ಮತ್ತು ಸಮಯ ಪ್ರಜ್ಞೆ,ಸೂಕ್ಷ್ಮ ಸಂವೇದನಾಶೀಲತೆ,ಶೀಘ್ರ ಮತ್ತು ಪರಿಣಾಮಕಾರಿ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಜನರ ಜೀವನವನ್ನು ಪಕ್ಕ ಲೆಕ್ಕ ಮಾಡಿ ಸಮಾನತೆಯನ್ನುವಂತಹ ಉತ್ತರ ಎಲ್ಲರ ಬಾಳಿನಲ್ಲಿ ಸಿಗುವಂತೆ ಮಾಡಿದಂತಹ ಮತ್ತು ಭಗವದ್ಗೀತೆಯಲ್ಲಿನ ಈ ಮೌಲ್ಯವನ್ನು ಅನುಷ್ಠಾನ ಮಾಡಲು ಮಾಡಿದಂತಹ ಹೋರಾಟಗಳಿಂದ ಇವರ ಜೀವನ ನಾಯಕ ಜೀವನವಾಗಿದೆ. ಇಂತಹ ವ್ಯಕ್ತಿಯ ಬಗ್ಗೆ ಅವರ ಜನ್ಮ ದಿನಾಚರಣೆ ಸಂದರ್ಭವಾಗಿ ಅವರು ಅಳವಡಿಸಿಕೊಂಡ ಮೌಲ್ಯಗಳನ್ನು ನೋಡಿದರೆ ಭಗವದ್ಗೀತೆಯಲ್ಲಿನ ಅತ್ಯದ್ಭುತ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು ಅವರ ಯಶಸ್ವಿಗೆ ಕಾರಣ ಎನಿಸುತ್ತದೆ ಅವು ಏನು ಅನ್ನುವುದನ್ನು ಈ ಕೆಳಗೆ ನೋಡೋಣ. 1) ಸಮಯ ಪ್ರಜ್ಞೆ:-ಭಗವದ್ಗೀತೆಯ ವಿಭೂತಿ ಯೋಗದಲ್ಲಿ ಲೆಕ್ಕಿಸುವವರಲ್ಲಿ ನಾನು ಸಮಯ ಆಗಿದ್ದೇನೆ ಎಂದು ಶ್ರೀ ಕೃಷ್ಣ ಹೇಳಿರುವುದನ್ನು ನೋಡಿದರೆ. ಅಂಬೇಡ್ಕರ್ ಅವರು ವಿದ್ಯಾರ್ಥಿಯಾಗಿದ್ದಾಗ ಸಮಯವನ್ನು ಲೆಕ್ಕಿಸಿ ಅತಿಹೆಚ್ಚಿನ ಸಮಯ ಅಧ್ಯಯನಕ್ಕಾಗಿ ಉಪಯೋಗಿಸುತ್ತಿದ್ದರು. ಸುಮಾರು 18 ಗಂಟೆಗಳ ಕಾಲ ಅಧ್ಯಾಯನ ಮಾಡಿರುವುದನ್ನು ನೋಡಿದರೆ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಭಗವದ್ಗೀತೆಯಲ್ಲಿ ಕೃಷ್ಣ “ಲೆಕ್ಕಿಸುವವರಲ್ಲಿ ಸಮಯ ”ನಾನಾಗಿದ್ದೇನೆ ಎಂದು ವಿಭೂತಿ ಯೋಗದಲ್ಲಿ ಹೇಳಿದ್ದು ನಿಜವಾಗಿಯೂ ಇಂದು ನಾವೆಲ್ಲರೂ ಅವರನ್ನು ನೆನೆಯುತ್ತಿರುವುದು ಈ ಸಮಯ ಪ್ರಜ್ಞೆಯಿಂದ,ವಿದ್ಯಾರ್ಥಿಯಾಗಿದ್ದಾಗಷ್ಟೇ ಅಲ್ಲದೆ ಆನಂತರ ಸೂಕ್ಷ್ಮ ಸಂವೇದನಾಶೀಲರಾಗಿ ಸಮಾಜದಲ್ಲಿ ಜನತೆಯ ನಡುವೆ ಇರುವ ಅಸಮಾನತೆಗಳನ್ನು ಗ್ರಹಿಸಿ “ಸರ್ವಭೂತಗಳಲ್ಲಿ ನನ್ನನ್ನು ನೋಡುವವರಿಗೆ ನಾನು ಕಾಣಿಸುತ್ತೇನೆ ಅವರು ನನಗೆ ಕಾಣಿಸುತ್ತಾರೆ ”ಎಂಬ ಗೀತೆಯ ಶ್ಲೋಕದಂತೆ ಅವರ ಕಾರ್ಯ ಸರ್ವಭೂತಗಳಲ್ಲಿ ಸಮಾನತೆಗಾಗಿ ಸಂದರ್ಭಾನುಸಾರ ಹೋರಾಡಿದ ವ್ಯಕ್ತಿ. ಅವರು ಸಂವಿಧಾನ ರಚನಾ ಕಾರ್ಯದಲ್ಲಿ ಎರಡು ವರ್ಷ 11 ತಿಂಗಳು 18 ದಿನಗಳು ಅತ್ಯಂತ ಪವಿತ್ರವಾಗಿ ಉಪಯೋಗಿಸಿಕೊಂಡು ಅತ್ಯಂತ ಮಿತವಾದ ಕಾಲದಲ್ಲಿ ಅತಿ ದೊಡ್ಡ ಸಂವಿಧಾನ ರಚನೆ ಮಾಡಿದ್ದು ನಿಜವಾಗಿಯೂ ಸಮಾನತೆಯ ಜೊತೆಯಲ್ಲಿ ಸಮಯದ ಲೆಕ್ಕ ಅವರು ಪಕ್ಕ ಮಾಡಿ ಕಾರ್ಯಗಳಲ್ಲಿ ಯಶಸ್ಸು ಕಂಡಿರುವುದು ಗಣಿತಶಾಸ್ತ್ರದ ದೃಷ್ಟಿಕೋನವನ್ನು ತಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡು ಅತ್ಯಂತ ವೈಜ್ಞಾನಿಕವಾಗಿ ಮಾಡಿರುವುದು ಪುರಾತನ ರಾಜಕೀಯ ಚಿಂತನೆಯಲ್ಲಿ ಈ ವೈಜ್ಞಾನಿಕತೆ ಇದ್ದು ಇದನ್ನು ಆಧುನಿಕ ಕಾಲದ ಭಾರತ ನಿರ್ಮಾಣ, ಸಂವಿಧಾನ ರಚನೆ ಮತ್ತು ಈ ತಮ್ಮ ಜೀವನದ ಎಲ್ಲಾ ಕೊಡುಗೆಗಳು ನೀಡುವಲ್ಲಿ ಅಳವಡಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. 2) ಆತ್ಮ ಸಂಯಮ ಯೋಗದಲ್ಲಿ “ಯುಕ್ತ ಆಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು ಯುಕ್ತ ಸ್ವಪ್ನವಬೋಧಸ್ಯ ಯೋಗೊಭವತಿ ದುಃಖ ಹಾ! ಇದರ ಅರ್ಥ ಯಥಾ ಯೋಗ್ಯ ಆಹಾರ ವಿಹಾರ ಮಾಡುವವರಿಗೆ ಒಳ್ಳೆಯ ಕರ್ಮಗಳಲ್ಲಿ ಯಥಾ ಯೋಗ್ಯ ವ್ಯವಹರಿಸುವವರಿಗೆ ನಿದ್ದೆ ಎಚ್ಚರ ಯಥಾ ಯೋಗ್ಯ ವಿರುವವರು ತಮ್ಮ ದುಃಖಗಳನ್ನು ನಾಶ ಮಾಡುವ ಯೋಗದಲ್ಲಿರುವವರು. ಇದು ಅಂಬೇಡ್ಕರ್ ಎಷ್ಟು ಆತ್ಮ ಸಂಯಮ ಹೊಂದಿದ್ದು ತಮ್ಮ ದುಃಖವಲ್ಲದೆ ಶೋಷಿತ ಜನರ ದುಃಖವನ್ನು ಹೋಗಲಾಡಿಸಿದರು ಎಂಬುದನ್ನು ಗೊತ್ತು ಪಡಿಸುತ್ತದೆ ಈ ವಿಷಯಗಳ ಲೆಕ್ಕ ಅವರಿಗೆ ಸರಿಯಾಗಿ ಗೊತ್ತಿದ್ದು ಅವರು ಎಷ್ಟೋ ಸಂದರ್ಭದಲ್ಲಿ ಒಂದು ಬ್ರೆಡ್ ಪೀಸ್ ತಿಂದು ವಿದ್ಯಾಭ್ಯಾಸ ಮಾಡಿದರು ಮತ್ತು ಆ ಸಂದರ್ಭದಲ್ಲಿ ಅವರು ನನಗೆ ಸರಿಯಾದ ಆಹಾರ ಇಲ್ಲ ಎಂದು ಕೊರಗಲಿಲ್ಲ. ಸಿಕ್ಕಿದ್ದು ಸ್ವೀಕರಿಸಿ ಸಂತೃಪ್ತವಾಗಿ ಸ್ವ ಅಧ್ಯಾಯದಲ್ಲಿ ತೊಡಗುತ್ತಿದ್ದರು. ಯೋಗ್ಯವಾದ ಆಹಾರವನ್ನು ಮಿತಿಯಲ್ಲಿ ಸ್ವೀಕರಿಸುತ್ತಿದ್ದರು. ಅವರು ಎಲ್ಲಿಗೆ ಹೋದರೂ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು. ಜೊತೆಗೆ ತಾವು ಕಲಿತ ವಿದ್ಯೆಯಿಂದ ಜನರ ಸಂಕಷ್ಟಗಳನ್ನು ಹೋಗಲಾಡಿಸುವ ಯುಕ್ತ ಯಥಾ ಯೋಗ್ಯ ಸತ್ಕರ್ಮಗಳನ್ನು ಮಾಡಲು ತಿರುಗಾಡುತ್ತಿದ್ದರು. ಮಿತವಾದ ನಿದ್ದೆ ಎಚ್ಚರಿಕೆಗಳು ಹೇಗಿದ್ದವು ಎಂಬುದು ಸಂವಿಧಾನ ರಚನಾ ಸಭೆಯಲ್ಲಿ ಪ್ರತಿ ವಿಷಯದ ಬಗ್ಗೆ ಎಷ್ಟು ಜಾಗೃತರಾಗಿದ್ದರೂ ಎಂಬುದು ಸಂವಿಧಾನ ರಚನಾ ಸಭೆಯಲ್ಲಿ ಅವರ ಉತ್ತರಗಳೇ ಹೆಚ್ಚು ಸಮಯವಿರುವುದು ನೋಡಿದರೆ ಗೊತ್ತಾಗುತ್ತದೆ. ಹೀಗೆ ಮೇಲಿನ ಭಗವದ್ಗೀತೆಯ ಶ್ಲೋಕ ಅವರ ಸಾಧನೆಗಳ ಹಿಂದೆ ಇರುವ ಭಗವದ್ಗೀತೆಯ ಮೌಲ್ಯ ಯುತ ಜೀವನ ವಿಧಾನವನ್ನು ಮತ್ತು ಇಂದು ಎಲ್ಲರ ನಾಲಿಗೆಯ ಮೇಲೆ ನಾಯಕನಾಗಿ ನೆಲೆಯುತ್ತಿರುವ ಹಿಂದಿರುವ ಧರ್ಮ ಸೂಕ್ಷ್ಮತೆ. 3) “ಭೂತನಾಮಸ್ಮಿ ಚೇತನ ”ಎಂದು ವಿಭೂತಿ ಯೋಗದಲ್ಲಿ ವಿಷಯವನ್ನು ನೋಡಿದರೆ ಪ್ರಾಣಿಗಳ ಚೈತನ್ಯ ಅಂದರೆ ಜೀವನ ಶಕ್ತಿಯು ನಾನಾಗಿದ್ದೇನೆ ಎಂದು ಹೇಳಿರುವುದು. ಸಂವಿಧಾನ ರಚನಾ ಸಭೆಯಲ್ಲಿ ಅವರ ಕಾರ್ಯನಿರ್ವಹಣೆ ,ಆ ನಂತರ ಇಲ್ಲಿಯವರೆಗೂ ಭಾರತದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲಿ ಅವರು ಬರೆದ ಸಂವಿಧಾನ ಚೈತನ್ಯ ತುಂಬುತ್ತಿರುವುದು. ಅವರ ಮರಣದ ನಂತರ ಅವರ ಸಮಾಧಿಗೆ ಚೈತ್ಯ ಭೂಮಿ ಎಂದು ಹೆಸರಿಡುವುದು.ರಾಜ್ಯಶಾಸ್ತ್ರದ ಪಿತಾಮಹ ಅರಿಸ್ಟಾಟಲ್ ಪ್ರಾಣಿ ಶಾಸ್ತ್ರದ ಪಿತಾಮಹಾ ಆಗಿರುವುದು. ಗೀತೆಯಲ್ಲಿ “ಭೂತನಾಮಸ್ಮಿ ಚೇತನ” ಎಂಬ ಶ್ರೀ ಕೃಷ್ಣನ ಮಾತು ಅಥವಾ ಗೀತೆಯ ಶ್ಲೋಕ ಅಂಬೇಡ್ಕರ್ ಜೀವನ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಭಗವದ್ಗೀತೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಇಲ್ಲಿನ ಸಾರ್ವತ್ರಿಕ ಜೀವನ ಮೌಲ್ಯಗಳನ್ನು ಸೂಕ್ಷ್ಮವಾಗಿ ಸಂಶೋಧನಾತ್ಮಕವಾಗಿ ನೋಡಿದರೆ ಎಲ್ಲರೂ ಆಶ್ಚರ್ಯ ಚಕಿತರಾಗುವುದು ಖಚಿತ. 4) ಅಂಬೇಡ್ಕರ್ ಅವರ ಪೂರ್ಣ ಹೆಸರಿನ ಮೌಲ್ಯ:-ಡಾಕ್ಟರ್ ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅಂಬೇಡ್ಕರರ ಪೂರ್ಣ ಹೆಸರು ಮಾತೃದೇವೋಭವ,ಪಿತೃದೇವೋಭವ, ಆಚಾರ್ಯ ದೇವೋಭವ, ಎನ್ನುವಂತೆ ತಮ್ಮ ಹೆಸರಿನಲ್ಲಿ ಮೂವರ ಹೆಸರು ಸಮನ್ವಯ ಆಗಿ ತಮ್ಮ ಹೆಸರೇ ಇಲ್ಲದಿರುವುದು ನಿಜಕ್ಕೂ ಪ್ರಾಚೀನ ಭಾರತದ ವೇದ ವಾಕ್ಯಗಳು ಅನುಷ್ಠಾನ ಗೊಂಡಿರುವುದು ಅಂಬೇಡ್ಕರ್ ಹೆಸರನ್ನು ಇನ್ನಷ್ಟು ಹೆಮ್ಮರವನ್ನಾಗಿಸಿವೆ. ಭಾರತದ ಇತಿಹಾಸದಲ್ಲಿ ಮಹಾಭಾರತ ಮತ್ತು ರಾಮಾಯಣ ಐತಿಹಾಸಿಕ ಮಹಾಕಾವ್ಯಗಳೆನಿಸಿಕೊಂಡು ಅವುಗಳಲ್ಲಿ ಭಗವದ್ಗೀತೆ ಸಂಕಷ್ಟ ಸಮಯದಲ್ಲಿ ಎಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಮತ್ತು ಹೇಗೆ ವರ್ತನೆ ಮಾಡಬೇಕು ಎನ್ನುವುದನ್ನು ಹೇಳಿಕೊಡುತ್ತದೆ. ಆಧುನಿಕ ರಾಜ್ಯಶಾಸ್ತ್ರದಲ್ಲಿ ತೀರ್ಮಾನ ತೆಗೆದುಕೊಳ್ಳುವ ದೃಷ್ಟಿಕೋನ ಮತ್ತು ವರ್ತನಾ ದೃಷ್ಟಿಕೋನವನ್ನು,ಗಣಿತಶಾಸ್ತ್ರೀಯ ದೃಷ್ಟಿಕೋನವನ್ನು ಇದು ಅಂದೆ ಹೇಳಿಕೊಟ್ಟಿತು. ಇವೆಲ್ಲವುಗಳನ್ನು ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅತಿ ಅದ್ಭುತವಾಗಿ ಅನ್ವಯಿಸಿಕೊಂಡಿದ್ದರಿಂದ “ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು”ಎಂಬ ಅವರ ವಾಕ್ಯ ಅವರ ಸಾಧನೆಗಳನ್ನು ಸೂಚಿಸುತ್ತದೆ. ಇಂತಹ ವ್ಯಕ್ತಿಗಳಿಗೆ ಜನ್ಮ ನೀಡಿದ ತಂದೆ ತಾಯಿ ಜನ್ಮಭೂಮಿ ಸಾರ್ಥಕವಾಯಿತು.ಪ್ರತಿಯೊಬ್ಬ ವಿದ್ಯಾರ್ಥಿಯು ಅವರಿಂದ ಸ್ಪೂರ್ತಿ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಿದರೆ ಎಲ್ಲರ ಜೀವನ ಸಾರ್ಥಕ. ಲೇಖಕರು:- ಶ್ರೀಮತಿ ಸಾವಿತ್ರಿ, ಕೆ ಸಹಾಯಕ ಪ್ರಾಧ್ಯಾಪಕರು ರಾಜ್ಯಶಾಸ್ತ್ರ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು

Apr 12, 2025 - 20:40
Apr 12, 2025 - 20:43
 0  34

What's Your Reaction?

like

dislike

love

funny

angry

sad

wow