ಈದ್ ಮಿಲಾದ್ | ಮೊಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನದ ಪ್ರಯುಕ್ತ ಮಸ್ಕಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ ಭವ್ಯ ಶಾಂತಿ ಯಾತ್ರೆ

ಮಸ್ಕಿ ಈದ್‌ ಮಿಲಾದ್ ಪ್ರಯುಕ್ತ ಮುಸ್ಲಿಂ ಮಸ್ಕಿ ಪಂಚ್ ಕಮಿಟಿ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಭವ್ಯ ಶಾಂತಿಯಾತ್ರೆ ನಡೆಯಿತು.

Sep 6, 2025 - 09:00
Sep 6, 2025 - 09:04
 0  72
ಈದ್ ಮಿಲಾದ್ | ಮೊಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನದ ಪ್ರಯುಕ್ತ ಮಸ್ಕಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ  ಭವ್ಯ ಶಾಂತಿ ಯಾತ್ರೆ
ಈದ್ ಮಿಲಾದ್ | ಮೊಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನದ ಪ್ರಯುಕ್ತ ಮಸ್ಕಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ  ಭವ್ಯ ಶಾಂತಿ ಯಾತ್ರೆ

ಮೊದಲಿಗೆ ಆಸಿಫ್ ಮೌಲಾನ ಕುರಾನ್ ಪಠಣದ ನೆರವೇರಿಸಿ 

ಶ್ರೀ ವರ ವೃದ್ರಮುನಿ ಗಚ್ಚಿನಮಠ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದದರು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಂದ ಮಮ್ಮದ್ ಪೈಗಂಬರ್ ರವರ ಜೀವನ ಚರಿತ್ರೆ ಗ್ರಂಥ ಬಿಡುಗಡೆ ಮಾಡಿಲಾಯಿತು.

ಖಲಿಲ್ ವೃತ್ತದಿಂದ ಆರಂಭವಾದ ಶಾಂತಿಯಾತ್ರೆ ಅಶೋಕ ಸರ್ಕಲ್, ಡಾ.ಅಂಬೇಡ್ಕರ್ ವೃತ್ತ ಕನಕ ವೃತ ದ ಮೂಲಕ ದೈವದ ಕಟ್ಟೆ ಮಾರ್ಗಗಳಲ್ಲಿ ಸಂಚರಿಸಿ ಜಾಮಿಯ ಮಸೀದಿ ತಲುಪಿ ಸಂಪನ್ನಗೊಂಡಿತು. ಯಾತ್ರೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿ. 'ನಾರಾಯೇ ತಕ್ಬೀರ್ ಅಲ್ಲಾಹು ಅಕ್ಟರ್...', 'ಯಾ ರಸೂಲ್ಲಾಹ...' ಎಂದು ಹೇಳುತ್ತಾ ಮೆರವಣಿಗೆಯಲ್ಲಿ ಯುವಜನರು ಹೆಜ್ಜೆ ಹಾಕಿದರು. ವಿವಿಧ ವರ್ಣದ ಮೆಕ್ಕಾ- ಮದೀನ ಸ್ತಬ್ಧ ಚಿತ್ರ ಇರುವ ಬೃಹತ್ ಬಾವುಟವನ್ನು ಹಾರಿಸಿದರು. ಪ್ರವಾದಿ ಅವರ ಚಿಂತನೆ ಸಾರುವ ನಾತ್ (ಪವಿತ್ರ ಗೀತೆಗಳು) ಹಾಗೂ ಕವ್ಹಾಲಿಗಳ ಅನುರುಣಿಸಿತು. ದಾರಿಯುದ್ದಕ್ಕೂ ಮೆಕ್ಕ - ಮದೀನ ಸ್ತಬ್ಧ ಚಿತ್ರ ಮೆರವಣಿಗೆಗೆ ಪುಷ್ಪಗಳ ಮೂಲಕ ಸ್ವಾಗತ ಕೋರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರಿಗೆ ತಂಪು ಪಾನೀಯ, ಶರಬತ್, ಕುಡಿಯುವ ನೀರು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚ್ ಕಮಿಟಿ ಹಿರಿಯ ಮುಖಂಡರು ಅಬ್ದುಲ್ ಅಜಿತ್, ರಿಯಾಜ್ ಖಾದಿ, ಜಿಲಾನಿ ಖಾಜಿ, ಸಮೀರ್ ಮೌಲಾನ, ಮಸೂದ್ ಪಾಷಾ, Raja RC nadaf, ಮುಖಂಡರಾದ ಶಫೀ ಶೆರು ಹಾಗು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಮಾಜಿ ಅಧ್ಯಕ್ಷ ಮುನೇಶ್ ಮುರಾರಿ, ಉಪಾಧ್ಯಕ್ಷ ಶ್ರೀಮತಿ ಗೀತಾ ಶಿವರಾಜ್, ಮುಖಂಡರಾದ ಬಹಾರಲಿ ಟೈಲರ್, ಹುಸೇನ್ ಶೇಡ್ಮಿ, ಇಮಾಂಸಾಬ್. ಕೆ., ಮೌಲಾನ ಜಾಫರ್, ಹಾಗೂ ಹನೀಫ್ ಮೌಲಾನ ಅನೇಕರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow