ರಾಸಾಯನಿಕ ದ್ರವ್ಯ ಸೋರಿಕೆ  ಅಗ್ನಿ ಶಾಮಕ ಸಿಬ್ಬಂದಿ ಸೇರಿ 20ಕ್ಕೂ ಹೆಚ್ಚು ಜನರು ಹಾಸ್ಪತ್ರೆಗೆ ದಾಖಲು

ವಿಜಯನಗರ ಜಿಲ್ಲೆ ಕೂಡ್ಲಿಗಿ : ಜು 30 ರ ಬೇಳಗಾ ಮುಂಜಾನೆ  2ಗಂಟೆ ಸಮಯದಲ್ಲಿ , ಕೂಡ್ಲಿಗಿ ಪಟ್ಟಣ ಪಂಚಾಯ್ತಿ ರಾಸಾಯನಿಕ ದ್ರವ್ಯ ಸೋರಿಕೆಯಗಿ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವುಸಿದೆ. 

Jul 30, 2025 - 15:51
 0  5
ರಾಸಾಯನಿಕ ದ್ರವ್ಯ ಸೋರಿಕೆ  ಅಗ್ನಿ ಶಾಮಕ ಸಿಬ್ಬಂದಿ ಸೇರಿ 20ಕ್ಕೂ ಹೆಚ್ಚು ಜನರು ಹಾಸ್ಪತ್ರೆಗೆ ದಾಖಲು
✍️ವರದಿ  ವಿ.ಜಿ.ವೃಷಭೇಂದ್ರ ಕೂಡ್ಲಿಗಿ

7ಜನ ಅಗ್ನಿ ಶಾಮಕ ದಳದ ಸಿಬ್ಬಂದಿಯವರು , ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ಸಾರ್ವಜನಿಕರು ತೀವ್ರ ಅಸ್ವಸ್ಥರಾಗಿರುವ ಘಟನೆ ಜರುಗಿದೆ. ಪಟ್ಟಣ ಪಂಚಾಯ್ತಿ ಕಚೇರಿಯ ತಳಪಾಯದಲ್ಲಿರುವ , ದಾಸ್ತಾನು ಮಳಿಗೆಯಲ್ಲಿ ರಾಸಾಯನಿಕ ದ್ರವ್ಯ ಸೋರಿಕೆ ಪರಿಣಾಮ. ಬೆಂಕಿ ಕಾಣಿಸಿಕೊಂಡಿದ್ದು ಸುದ್ದಿಯನ್ನು ಪಪಂ ಸಿಬ್ಬಂದಿಯವರು , ಅಗ್ನಿ ಶಾಮಕ ದಳದವರಿಗೆ ತಿಳಿಸಲಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು. ಅಗ್ನಿ ನಂದಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ , ದಾಸ್ತಾನು ಮಳಿಗೆಯಲ್ಲಿದ್ದ. ಸುಮಾರು 15ವರ್ಷಗಳಿಂದ ಇರಿಸಲಾಗಿದ್ದ , ಕ್ಲೋರಿನ್ ಹಾಗೂ ಆಕ್ಸೀಜನ್  ಸೋರಿಕೆಯಾಗಿದೆ. ಮತ್ತು ಹೊಂದಿಕೊಂಡಂತೆ ಇರಿಸಲಾಗಿದ್ದ ಬ್ಲೀಚಿಂಗ್ ಪೌಡರ್ ಮಿಶ್ರಣವಾಗಿ ಅವಘಡ ಸಂಭವಿಸಿದೆ ಎಂದು ಹೇಳ ಲಾಗುತ್ತಿದೆ. ರಾಸಾಯನಿಕ ದ್ರವ್ಯ ವು ಸುತ್ತ ಮುತ್ತಲ ವಾತಾವರಣವನ್ನು ರಬಸವಾಗಿ ಆವರಿಸಿದ್ದು , ಇಡೀ ಪಪಂ ಕಚೇರಿ ಆವರಣ ಸುತ್ತಲಿನ ಅವೆಣ ಕಲುಷಿತವಾಗಿದ್ದು ಅದು ಕೆಲವೇ ನಿಮಿಷದಲ್ಲಿ ನೆರೆದವರನ್ನು ಅಸ್ವಸ್ಥಗೊಳಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಸ್ಥಳದಲ್ಲಿದ್ದ 7ಜನ ಅಗ್ನಿ ಶಾಮಕ ದಳದ ಸಿಬ್ಬಂದಿ , ರಾಸಾಯನಿಕ ಗಾಳಿಯನ್ನು ಸೇವಿಸಿದ 15ಜನ ಸಾರ್ವಜನಿಜರು ತೀವ್ರ ಅಸ್ವಸ್ಥರಾಗಿದ್ದಾರೆಂದು ತಿಳಿದುಬಂದಿದೆ. ಅಸ್ವಸ್ಥಗೊಂಡಿರುವವರನ್ನು , ಕೂಡಲೇ ಕೂಡ್ಲಿಗಿ ಸಾರ್ಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು , ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಅವಘಡಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು , ಸಿಬ್ಬಂದಿಯವರನ್ನು ಕೆಲ ಜನಪ್ರತಿನಿಧಿಗಳನ್ನು ಸಂಪರ್ಕಿಸಲಾಗಿ. ಯಾವುದೇ ರೀತಿಯ ಸುಳಿವು ನೀಡುತ್ತಿಲ್ಲ , ಯಾವುದೂ ಏನೂ ಜರುಗಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದು . ಇದು ಸಾರ್ವಜನಿಕರಲ್ಲಿ ಹಾಗೂ ಪ್ರಜ್ಞಾವಂತರ ವಲಯದಲ್ಲಿ , ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. 

What's Your Reaction?

like

dislike

love

funny

angry

sad

wow