ಮಸ್ಕಿ ನಾಲಾ ಡ್ಯಾಮಿನ ಜಲಾಶಯದಿಂದ ಹೆಚ್ಚಿನ ಪ್ರಮಾಣದ ಮಸ್ಕಿ ಹಳ್ಳಕ್ಕೆ ಯಾವುದೇ ಕ್ಷಣದಲ್ಲಿ ನೀರು ಹರಿ ಬಿಡಲಾಗುವುದು ಸಾರ್ವಜನಿಕರು ಹಳ್ಳದ ಕಡೆಗೆ ಹೋಗದಿರಲು ಎಚ್ಚರಿಕೆ..!

ಮಸ್ಕಿ ನಾಲಾ ಡ್ಯಾಮಿನ ಜಲಾನಯನ ಮೇಲ್ಭಾಗದ ಪ್ರದೇಶಗಳಾದ ಕುಷ್ಟಗಿ, ನಾಗಲಾಪುರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು ಜಲಾಶಯದ ಮೇಲ್ಭಾಗದಿಂದ ಹೆಚ್ಚಿನ ನೀರು ಹರಿದು ಬರುತ್ತಿದ್ದು ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಇದ್ದು , 200 ರಿಂದ 300 ಕ್ಯುಸೆಕ್ಸ್ ಹೆಚ್ಚುವರಿ ನೀರು ಹಳ್ಳಕ್ಕೆ ಹರಿ ಬಿಡಲಾಗುವುದು ಮಸ್ಕಿ ಹಳ್ಳದಲ್ಲಿ ಸಾರ್ವಜನಿಕರು ಹಾಗು ತಮ್ಮ ಸಾಕುಪ್ರಾಣಿಗಳು ಕುರಿ, ದನ ಮೇಯಿಸಲು ಮತ್ತು ಅನ್ಯ ದೈನಂದಿನ ಕೆಲಸಕ್ಕೆಂದು ಹಳ್ಳ ದಾಟುವ ಮೂಲಕ ಹೊಲಗದ್ದೆಗಳಿಗೆ ಹೋಗುವವರು ಹೋಗಬಾರದು ಮತ್ತು ಮಸ್ಕಿ ಹಳ್ಳಕ್ಕೆ ಬಿಡುವ ನೀರು ಮಸ್ಕಿ ಬಳಗಾನೂರು ಪೋತ್ನಾಳ್ ಮಾರ್ಗವಾಗಿ ರಾಯಚೂರು ಮಂತ್ರಾಲಯಕ್ಕೆ ಹೋಗುತ್ತದೆ ಆದಕಾರಣ ಪಕ್ಕದ ಹಳ್ಳಿ ಗ್ರಾಮಗಳು ಪಟ್ಟಣದ ಗ್ರಾಮಸ್ಥರು ಯಾರು ಹಳ್ಳ ದ ಕಡೆ ಹೋಗಬಾರದೆಂದು ಎಚ್ಚರಿಕೆ.! ಪೊಲೀಸ್ ಇಲಾಖೆಗೆ ಹಾಗೂ ಮಸ್ಕಿ ಪುರಸಭೆ ಬಳಗಾನೂರ ಪಟ್ಟಣ ಪಂಚಾಯಿತಿ ಮತ್ತು ಕೆಳಭಾಗದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಈ ವಿಷಯದ ಬಗ್ಗೆ ಸುದ್ದಿ ರವಾನಿಸಲಾಗಿದೆ ಎಂದು ಮಸ್ಕಿ ನಾಲಾ ಯೋಜನೆಯ ಮಸ್ಕಿ ಸಹಾಯಕ ಇಂಜಿನಿಯರ್ ರವರು ಪತ್ರಿಕೆ ಮಾಧ್ಯಮದವರಿಗೆ ಮಾಹಿತಿ ನೀದಿದ್ದಾರೆ.
What's Your Reaction?






