ಸಿಂದಗಿ | ಗಂಡನ ಸಂಬಂಧಿಕರಿಂದ ಹಲ್ಲೆ: ಸೂಕ್ತ ರಕ್ಷಣೆ ನೀಡಲು ಎಸ್.ಪಿಗೆ ಮನವಿ

ವಿಜಾಪುರ: ದೇವರ ಹಿಪ್ಪರಗಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಂದಗಿ ಪಟ್ಟಣದ ನಿವಾಸಿಯಾಗಿರುವ ಮಲ್ಲಮ್ಮಾ ಭೀಮಪ್ಪಾ ರೂಗಿ ಕುಟುಂಬದ ಮೇಲೆ ಗಂಡನ ಸಂಬಂಧಿಕರು ಹಲ್ಲೆ ನಡೆಸಿದವರಿಂದ ಜೀವ ಭಯ ಇದ್ದು ಸೂಕ್ತ ರಕ್ಷಣೆ ನೀಡಬೇಕೆಂದು ಹಲ್ಲೆಗೊಳಾದ ಮಲ್ಲಮ್ಮಾ ಭೀಮಪ್ಪಾ ರೂಗಿ ಸಿಂದಗಿ ಪಿಎಸ್ಐ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಮನವಿ ಮಾಡಿದ್ದಾರೆ.

Jul 30, 2025 - 09:03
 0  33
ಸಿಂದಗಿ | ಗಂಡನ ಸಂಬಂಧಿಕರಿಂದ ಹಲ್ಲೆ: ಸೂಕ್ತ ರಕ್ಷಣೆ ನೀಡಲು ಎಸ್.ಪಿಗೆ ಮನವಿ

4-5 ವರ್ಷಗಳಿಂದ ನನ್ನ ಗಂಡ ವೀಪರೀತ ಕುಡಿತದ ಚಟಕ್ಕೆ ಬಿದ್ದು ಮಹಾರಾಷ್ಟ್ರದ ರತ್ನಾಗಿರಿ ಕೆಲಸ ಮಾಡುತ್ತಾರೆ. ಎರಡೂ ಮಕ್ಕಳ ಶಿಕ್ಷಣಗೊಸ್ಕರ ಸಿಂದಗಿಯಲ್ಲಿ ನೆಲಸಿರುವ ನಾನು ಆಧಾರ್ ಕಾಡನಲ್ಲಿ ಮುಬೈಲ್ ನಂಬರ್ ಬದಲಾಯಿಸಲು ಕುಟುಂಬ ಸಮೆತ ತವರು ಮನೆ ಬೊಮ್ಮನ ಹೋಗಿಗೆ ಬಂದಿರುವುದಕ್ಕೆ ಗಂಡನ ಸಂಬಂಧಿಕರಾದ ಮನೋಹರ ತಂದೆ ಶರಣಪ್ಪ ರೂಗಿ, ಶಿವಾನಂದ ತಂದೆ ಧರ್ಮಣ್ಣ ರೂಗಿ, ಅಭಿಷೇಕ ತಂದೆ ಧರ್ಮಣ್ಣ ರೂಗಿ, ಹಣಮಂತ ತಂದೆ ಧರ್ಮಣ್ಣ ರೂಗಿ, ಬಸಪ್ಪ ತಂದೆ ಕಾಳಪ್ಪ ಮಾದರ, ಶರಣಪ್ಪ ಸಿದ್ದಪ್ಪ ರೂಗಿ, ಪರಹುರಾಮ ಶರಣಪ್ಪ ರೂಗಿ, ಶರಣಪ್ಪ ಮಲಕಪ್ಪ ರೂಗಿ ಇವರೆಲ್ಲರೂ ತಂದೆಯ ತೋಟದವಸ್ತಿಗೆ ಬಂದು ಹಲ್ಲೆಮಾಡಿ ನನ್ನ ಗಂಡನನ್ನು ಕರೆದುಕೊಂಡು ಹೂಗಿದ್ದು, ಜುಲೈ 25 ರಂದು ದೇವರ ಹಿಪ್ಪರಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಹಿನ್ನೆಲೆಯಲ್ಲಿ ನನ ಗಂಡನ ಸಂಬಂಧಿಕರಿಂದ ನನಗೆ ಮತ್ತು ಮಕ್ಕಳಿಗೆ ಜೀವ ಭಯ ಇದ್ದು, ನಮಗೆ ಏನೇ ಆದರೂ ಸಂಬಂಧಿಕರೆ ನೇರ ಕಾರಣ ಕರ್ತರುರಾಗಿದ್ದು, ಇವರಿಂದ ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿಜಯಪೂರ ಜಿಲ್ಲಾ ಪೋಲಿಸ ವರೀಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೋಲಿಸ ವರೀಷ್ಠಾಧಿಕಾರಿ, ಡಿ.ವೈ, ಎಸ್, ಪಿ ಹಾಗೂ ಸಿಂದಗಿ ಸಿಪಿಐ ಅವರಿಗೆ ದೂರು ನೀಡಿ ಮನವಿ ಮಾಡಿದ್ದಾರೆ.

What's Your Reaction?

like

dislike

love

funny

angry

sad

wow