ನಾಳೆ ಮಸ್ಕಿಯ ಸರಕಾರಿ ಪದವಿ ಕಾಲೇಜಿನಲ್ಲಿ ಸಂಭ್ರಮದ ಜನಪದ ಉತ್ಸವ
ಜಾನಪದ ಉತ್ಸವ ನಮ್ಮ ನಾಡಿನ ಶ್ರೀಮಂತ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ.ಅದನ್ನು ಈಗಿನ ಯುವಪೀಳಿಗೆ ಅಳವಡಿಸಿಕೊಂಡು ಅನುಸರಿಸಿಕೊಂಡು ಹೋಗಿ ಮುಂದಿನ ಪೀಳಿಗೆಗೆಗೂ ಅದನ್ನು ತಲುಪಿಸಬೇಕಾದ ಗುರುತರ ಜವಬ್ದಾರಿ ಅವರ ಮೇಲಿದೆ. ಆ ಕಾರಣದಿಂದಲೇ ಕರ್ನಾಟಕ ಸರಕಾರದ ಆಶಯದಂತೆ ರಾಜ್ಯದ ಪದವಿಕಾಲೇಜುಗಳಲ್ಲಿ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಕೇಂದ್ರ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಆಂತರಿಕ ಗುಣಮಟ್ಟ ಬರವಸಾಕೋಶ ಹಾಗೂ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಪ್ರೀಲ್ 29 ಮಂಗಳವಾರ ಬೆಳಿಗ್ಗೆ ಜಾನಪದ ಉತ್ಸವವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ವಹಿಸಿಕೊಳ್ಳಲಿದ್ದಾರೆ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ತರು ಮತ್ತುಸಾಂಸ್ಕೃತಿಕ ಸಂಯೋಜಕರಾಗಿರುವ ಸಹಾಯಕ ಪ್ರಾಧ್ಯಾಪಕ ಇಮಾಮಸಾಬ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜಾನಪದ ಅಕ್ಯಾಡೆಮಿಯ ಸದಸ್ಯರಾಗಿರುವ ರಂಗಪ್ಪ ತಡಕಲ್,ಕಲ್ಯಾಣ ಕರ್ನಾಟಕ ಕಲಾವಿದರ ಬಳಗದ ರಾಯಚೂರು ಜಿಲ್ಲಾ ಸಂಚಾಲಕರಾದ ಬಸವನಗೌಡ ಪೂಜಾರಿ ಜಿನ್ನಾಪೂರು,ಆಗಮಿಸಲಿದ್ದಾರೆ. ಚಾನಪದ ಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಯಲ್ಲಮ್ಮರವರು ಸನ್ಮಾನಗೊಳ್ಳಲಿದ್ದಾರೆ. ಸಹ ಪ್ರಾಧ್ಯಪಕರಾಗಿರುವ ಡಾ,ರಾಮಣ್ಣ ಜುಮ್ಮಾ ಸಹಾಯಕ ಪ್ರಾಧ್ಯಾಪಕರಾಗಿರುವ ಕುಮಾರಿ ಕನ್ಯಾಕುಮಾರಿ ಶಿವಗ್ಯಾನೆಪ್ಪ ಲಕ್ಕುಂದಿ,ಶ್ರೀನಿವಾಸ ಯಾಳಗಿ,ಶ್ರೀಮತಿ ಆಶಾ,ಶ್ರೀಮತಿ ಡಾ.ರಾಜಿಯಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸುರೇಶ ಬಳಗಾನೂರು ಉಪಸ್ಥಿತರಿರಲಿದ್ದಾರೆ. ಕಾಲೇಜಿನ ಎಲ್ಲಾ ಸಹಾಯಕ ಉಪನ್ಯಾಸಕರು ಅತಿಥಿ ಉಪನ್ಯಾಸಕರು,ಸಿಬ್ಬಂದಿವರ್ಗ, ಸ್ನಾತಕ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜನಪದ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ವರದಿ,,,ಸುರೇಶ ಬಳಗಾನೂರು.
What's Your Reaction?






