ಆಪರೇಷನ್ ಸಿಂಧೂರ್ ಬೆಂಬಲಿಸಿ ಮುಸ್ಲಿಂ ಬಾಂಧವರು ವಿಜಯೋತ್ಸವ
ಮೋದಿ ನಡೆಗೆ ಮೆಚ್ಚುಗೆ: ಮುಸ್ಲಿಂ ಸಮಾಜದ:

ಮಸ್ಕಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬೆಂಬಲಿಸಿ ಮಸ್ಕಿ ಮುಸ್ಲಿಂ ಬಾಂಧವರು ಸ್ಥಳೀಯ ಡಾ. ಖಲೀಲ್ ವೃತ್ತ ಬಳಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.
ಇಲ್ಲಿಯ ಜಾಮೀಯಾ ಮಸೀದಿಯಲ್ಲಿ ಶುಕ್ರವಾರ ಸಾಮೂಹಿಕ ನಮಾಜ್ ನಿರ್ವಹಿಸಿದ ಬಳಿಕ ಖಲೀಲ್ ವೃತ್ತ ಬಳಿ ಜಮಾಯಿಸಿದ ನೂರಾರು ಮುಸ್ಲಿಂ ಬಾಂಧವರು, ಭಾರತೀಯ ಸೇನೆ ಪರ ಘೋಷಣೆ ಕೂಗಿದರು.
ಮೋದಿ ನಡೆಗೆ ಮೆಚ್ಚುಗೆ: ಮುಸ್ಲಿಂ ಸಮಾಜದ
ಮುಖಂಡರಾದ ಅಬ್ದುಲ್ ಗನಿ, ಜಿಲಾನಿ ಖಾಜಿ, ಮಸೂದ್ ಪಾಶಾ ಮಾತನಾಡಿ, ಉಗ್ರರ ದಮನಕ್ಕೆ ಪ್ರಧಾನಿ ಮೋದಿ ಉಗ್ರ ಕ್ರಮ ಕೈ ಗೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನದಲ್ಲಿನ ಭಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದ ಪರಾಕ್ರಮ ಮೆರೆದಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಭಾರತೀಯ ಸೇನೆಯು ನಡೆಸಿರುವ 'ಆಪರೇಷನ್ ಸಿಂಧೂರ್ ' ಕಾರ್ಯಾಚರಣೆ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಭಯೋತ್ಪಾದನೆ ಮೂಲಕ ಭಾರತದ ಶಾಂತಿಗೆ ಧಕ್ಕೆ ತರಲು ಯತ್ನಿಸಿದರೆ ಉಳಿಗಾಲ ಇಲ್ಲ ಎಂಬ ಸಂದೇಶವನ್ನೂ ಪಾಕಿಸ್ತಾನಕ್ಕೆ ರವಾನಿಸಿದೆ.
ಶಾಂತಿಪ್ರಿಯ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಭಯೋತ್ಪಾದಕರನ್ನು ಹುಟ್ಟಡಗಿಸುವ ನಿಟ್ಟಿನಲ್ಲಿ ಕರ್ನಲ್ ಸೂಫಿಯ ಖುರೈಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ನೇತೃತ್ವದ ನೇತೃತ್ವದ ತಂಡದ ಕಾರ್ಯಾಚರಣೆ ಪಾಕಿಸ್ತಾನ ಕೆ ತಕ್ಕ ಪಾಠವಾಗಿದೆ.
ದೇಶದ ಸಾರ್ವಭೌಮತ ಕ್ಕೆ ಚ್ಯುತಿ ಉಂಟು ಮಾಡುವಂತಹ ಯಾವುದೇ ಶಕ್ತಿಯನ್ನು ಭಾರತೀಯರಾದ ನಾವು ಸಹಿಸುವುದಿಲ್ಲ. ನಿರಂತರ ಹೋರಾಟ ನಡೆಸುವ ಮೂಲಕ ಇಂತಹ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕಾದ ಅಗತ್ಯವಿದೆ.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಬೈಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಲಾಗಿದ್ದು, ಈ ಮೂಲಕ ನಮ್ಮ ಸೇನೆ ಅಮಾಯಕರ ಸಾವು ನೋವುಗಳನ್ನು ತಪ್ಪಿಸಿದ್ದಾರೆ. ಅತ್ಯಂತ ಚಾಣಾಕ್ಷ್ಯತನ ದಿಂದ ಈ ದಾಳಿಯನ್ನು ನಡೆಸಿರುವ ಪ್ರತಿಯೊಬ್ಬ ಸೈನಿಕನಿಗೂ ನಮ್ಮ ದೇಶದ ಪ್ರಜೆ ಅಭಿನಂದನೆ ಸಲ್ಲಿಸುತ್ತೇವೆ. ಭಾರತೀಯ ಸೇನೆ ದೇಶ ರಕ್ಷಣೆಗೆ ಕಂಕಣ ಬದ್ಧವಾಗಿ ನಿಂತಿದೆ. ಸೇನೆಯ ಮನೋಬಲ ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬ ಪ್ರಜೆ ಮಾಡಬೇಕು ಎಂದರು.
ಜನರಿಗೆ ಸಿಹಿ ವಿತರಣೆ: ಸಿಂಧೂರ್ ಕಾರ್ಯಾಚರಣೆ
ಯಶಸ್ವಿಯಾದ ಕಾರಣ ನೆರೆದ ಜನರಿಗೆ ಸಿಹಿ ವಿತರಿಸಲಾಯಿತು. ಪಂಚ್ ಕಮಿಟಿ ಅಧ್ಯಕ್ಷ ಕೆ. ಅಬ್ದುಲ್ ಅಜೀಜ್, ಮುಸ್ಲಿಂ ಧರ್ಮ ಗುರುಗಳು ಜಿಲಾನಿಖಾಜಿ,ಮೌಲಾನ ಸಮೀರ್, ಮೌಲಾನ ಆಶೀಫ್, ಪುರಸಭೆ ನಾಮ ನಿರ್ದೇಶನ ಸದಸ್ಯ ಶಬ್ಬಿರ್ ಚೌದ್ರಿ,ಮಸೂದ್ ಪಾಷ, ಮುಖಂಡರಾದ ಹುಸೇನ್ ಶೇಡ್ಮಿ, ಗೌಸ್ ಪಿಡಬ್ಲ್ಯುಡಿ ಕ್ಯಾಂಪ್, ಮೊಹ್ಮದ್ ಅಜ್ಮಿರ್ ಶೇಡ್ಮಿ, ನಬಿಸಾಬ್ ಮೆಕ್ಯಾನಿಕ್, ಆಬಿದ್ ಹುಸೇನ್, ಸಲ್ಮಾನ್ ಚಿಟಗುಪ್ಪಾ, ಸೇರಿದಂತೆ ಇತರರು ಇದ್ದರು.
What's Your Reaction?






