ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ರಾಯಚೂರು ವಕೀಲರ ಸಂಘದಿಂದ ಸಂತಾಪ ಸಭೆ.
ರಾಯಚೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸೂಚನೆಯಂತೆ ಇತ್ತೀಚಿಗೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಮತ್ತು ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ರಾಯಚೂರು ನ್ಯಾಯವಾದಿಗಳ ಸಂಘದಿಂದ ಸಂತಾಪ ಸಭೆ ನಡೆಸಿ ಎರಡು ನಿಮಿಷಗಳ ಕಾಲ ಪದಾಧಿಕಾರಿಗಳು ಮೌನಚಾರಣೆಯನ್ನು ಮಾಡಿದರು.
ಜಮ್ಮು ಮತ್ತು ಕಾಶ್ಮಿರದ ಪಹಲ್ಗಾಮ್ ನಲ್ಲಿ ದಿನಾಂಕ 22-04-2025 ರಂದು ಸಂಭವಿಸಿದ ಭಯಾನಕ ಮತ್ತು ಮನುಷ್ಯ ವಿರೋಧಿ ಹೇಯ ಕೃತ್ಯವಾದ ಭಯೋತ್ಪದಕರ ದಾಳಿಯು ದೇಶದ ಜನತೆಯನ್ನು ತಲ್ಲಣಗೊಳಿಸಿದೆ. ಈ ದಾಳಿಯಲ್ಲಿ ಹಲವು ಪ್ರವಾಸಿಗರು ಮತ್ತು ಸಾಮಾನ್ಯ ನಾಗರೀಕರು ಪ್ರಾಣವನ್ನು ಕಳೆದುಕೊಂಡು ಅನೇಕರು ಗಾಯಗೊಂಡಿದ್ದಾರೆ ಇದು ಮಾನವೀಯತೆಯ ವಿರುದ್ಧದ ಕೃತ್ಯವಾಗಿದೆ. ಇದು ಅಕ್ಷಮ್ಯ ಮತ್ತು ಖಂಡನೀಯ ಕೂಡಲೇ ಕೇಂದ್ರ ಮತ್ತು ಸಂಬಂಧಿಸಿದ ರಾಜ್ಯ ಸರ್ಕಾರ ದಾಳಿಕೋರರನ್ನು ಬಂಧಿಸಿ ಅತ್ತ್ಯೂಗ್ರವಾದ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಜಮ್ಮು ಕಾಶ್ಮೀರದಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳ ಅಳವಡಿಕೆ ಮೂಲಕ ಕಾಶ್ಮೀರದ ಮತ್ತು ದೇಶದ ಜನತೆಯ ಸುರಕ್ಷತೆಯನ್ನು ಕಾಪಾಡಿ ದೇಶದಲ್ಲಿ ಇಂತಹ ಕೃತ್ಯಗಳು ಮರುಕಳಿಸದ ರೀತಿಯಲ್ಲಿ ಆಗತ್ಯ ಎಚ್ಚರಿಕೆಯನ್ನು ವಹಿಸಬೇಕು. ಹುತಾತ್ಮರಾದ ಪ್ರವಾಸಿಗರ ಕುಟುಂಬಗಳಿಗೆ ಸಂತ್ವಾನ ಮತ್ತು ಆಗತ್ಯ ನೆರವು ಒದಗಿಸಬೇಕೆಂದು ವಕೀಲರು ಆಗ್ರಹಿಸಿದರು.
ಸಭೆಯಲ್ಲಿ ಹಿರಿಯ ವಕೀಲರಾದ ರಾಜಾ ಪಾಂಡುರಂಗ ನಾಯಕ, ಕೆ. ನೀಲಕಂಠ ರಾವ್, ಮೊಹ್ಮದ್ ಸುಲ್ತಾನ್, ಶಿವಕುಮಾರ ಮ್ಯಾಗಳಮನಿ ಮತ್ತು ಇತರರು ಮಾತನಾಡಿದರು.
ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ನಜೀರ್ ಅಹ್ಮದ್ ಶೇರ್ ಅಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಜ್ ಪಾಷ, ಕಾರ್ಯಕಾರಣಿ ಸಮಿತಿ ಸದಸ್ಯರಾದ ರೇಣುಕಾ, ಇತರೆ ಕಾರ್ಯಕಾರಣಿ ಸಮಿತಿ ಸದಸ್ಯರು, ಹಿರಿಯ ಮತ್ತು ಕಿರಿಯ ಹಾಗೂ ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು.
What's Your Reaction?






