ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮೃತಪಟ್ಟವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಮಸ್ಕಿ ಬಿಜೆಪಿ ಮಂಡಲ ಮತ್ತು ಸಮಸ್ತ ಹಿಂದೂ ಬಾಂಧವರಿಂದ ಭಾವ ಪೂರ್ಣ ಶ್ರದ್ದಾಂಜಲಿ

Apr 26, 2025 - 06:00
Apr 26, 2025 - 06:05
 0  34

ಮಸ್ಕಿ ಪಟ್ಟಣದ ದೈವದ ಕಟ್ಟೆ ಮುಂಭಾಗದಲ್ಲಿ ಇತ್ತೀಚಿಗೆ ನಡೆದ ಜಮ್ಮು ಕಾಶ್ಮೀರದ ಪಹಲ್ಗಾಮ್ 

 28ಕ್ಕೂ ಹೆಚ್ಚು ಹಿಂದೂಗಳ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿ ಯಲ್ಲಿ ಮೃತಪಟ್ಟವರಿಗೆ ಮಸ್ಕಿ ಬಿಜೆಪಿ ಮಂಡಲ ಮತ್ತು ಸಮಸ್ತ ಹಿಂದೂ ಬಾಂಧವರಿಂದ ಭಾವ ಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಮೃತಪಟ್ಟವರಿಗೆ ದೀಪದಾನ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ನಂತರ ಮಾತ ನಾಡಿದ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್‌ ಮೃತರಿಗೆ ಮೊದಲಿಗೆ ಸಂತಾಪ ಸೂಚಿಸಿ ಮೃತ ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ, ಮನುಷ್ಯತ್ವ ಇರುವ ವ್ಯಕ್ತಿ ಇಂತಹ ಕ್ರೌರ್ಯ ಮಾಡುವುದಿಲ್ಲ, ಧರ್ಮ ಮತ್ತುಜಾತಿಯ ಹೆಸರಿನಲ್ಲಿ ಈ ರೀತಿ ಕಗ್ಗೋಲೆ ಮಾಡುವುದು ಅಕ್ಷಮ್ಯ ಅಪರಾಧ, ಇಂಥ ಉಗ್ರರಿಗೆ ಕಠಿಣ ಶಿಕ್ಷೆಗೆ ನಮ್ಮ ನೆಚ್ಚಿನ ಪ್ರಧಾನಿ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿ ಅವರು ಕೆಲವೇ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಕಠಿಣ ಶಿಕ್ಷೆಗೆ ಒಳಪಡಿಸುತ್ತಾರೆ ಎಂದು ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಹೇಳಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಯ್ಯಸ್ವಾಮಿ ಸೊಪ್ಪಿಮಠ, ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ಮುಖಂಡರಾದ ಶಿವ ಶಂಕ್ರಪ್ಪ ಹಳ್ಳಿ, ಡಾ.ಪಂಚಾಕ್ಷರಯ್ಯ ಸ್ವಾಮಿ, ಅಶೋಕ್ ಸಿಂಗ್ ಠಾರ್ಕೂ, ರವಿ ಗೌಡ ಪೊಲೀಸ್ ಪಾಟೀಲ್, ಶ್ರೀ ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್, ಸುರೇಶ್ ಅರರ್ಸು, ಹನುಮೇಶ್ ಕುಲಕರ್ಣಿ, ಸುಗಣ್ಣ ಬಾಳೆಕಾಯಿ, ಮೌನೇಶ್ ನಾಯಕ್, ವೆಂಕಟೇಶ್ ನಾಯಕ್, ಬಸವರಾಜ ಬುಕ್ಕಣ್ಣ, ಚಂದ್ರಶೇರ್ಖ ಹೂವಿನಬಾವಿ ಇನ್ನೂ ಅನೇಕ ಹಿಂದೂ ಬಾಂಧವರು ಭಾಗಿಯಾಗಿದ್ದರು.

What's Your Reaction?

like

dislike

love

funny

angry

sad

wow