ಫಹಲ್ಗಾಮ್ ಘಟನೆ||ಮಸ್ಕಿ ಮುಸ್ಲಿಂ ಬಾಂಧವರಿಂದ ಮೇಣದಬತ್ತಿ ಹಚ್ಚಿ ಮೌನಾಚರಣೆ

ಮಸ್ಕಿ,ಏ.26: ಕಾಶ್ಮೀರದ ಫಹಲ್ಗಾಮ್ ನಲ್ಲಿ ನಡೆದ 26 ಜನರ ನರಮೇದ ಖಂಡಿಸಿ ಪಟ್ಟಣದ  ಮುಸ್ಲಿಂ ಪಂಚ್ ಕಮಿಟಿ ಮತ್ತು ಸಮಸ್ತ ಮುಸ್ಲಿಂ ಬಾಂಧವರಿಂದ ಶನಿವಾರ ಜಾಮಿಯಾ ಮಸೀದಿಯಿಂದ  ಖಲೀಲ್ ವೃತ ಮತ್ತು ಪುರಸಭೆ  ಮುಖ್ಯರಸ್ತೆ ಮೂಲಕ  ಹಳೆ ಬಸ್ ನಿಲ್ದಾಣದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ  ಪ್ರತಿಮೆ  ವರೆಗೂ ರಸ್ತೆ ಉದ್ದಕ್ಕೂ ಶಾಂತಿಯುತವಾಗಿ  ಕ್ಯಾಂಡಲ್ ಮಾರ್ಚ್ ಮೂಲಕ  ತೆರಳಿ   ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ  ಮೌನಚರಣೆ ನಡೆಸಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೊರಲಾಯಿತು.

Apr 27, 2025 - 13:20
 0  28
ಫಹಲ್ಗಾಮ್ ಘಟನೆ||ಮಸ್ಕಿ ಮುಸ್ಲಿಂ ಬಾಂಧವರಿಂದ ಮೇಣದಬತ್ತಿ ಹಚ್ಚಿ ಮೌನಾಚರಣೆ
ಫಹಲ್ಗಾಮ್ ಘಟನೆ||ಮಸ್ಕಿ ಮುಸ್ಲಿಂ ಬಾಂಧವರಿಂದ ಮೇಣದಬತ್ತಿ ಹಚ್ಚಿ ಮೌನಾಚರಣೆ
ಫಹಲ್ಗಾಮ್ ಘಟನೆ||ಮಸ್ಕಿ ಮುಸ್ಲಿಂ ಬಾಂಧವರಿಂದ ಮೇಣದಬತ್ತಿ ಹಚ್ಚಿ ಮೌನಾಚರಣೆ

ಪಟ್ಟಣದ  ಮುಸ್ಲಿಂ ಸಮಾಜದ ಧರ್ಮಗುರುಗಳಾದ  ಜಿಲಾನಿ ಖಾಜಿ  ಕ್ಯಾಂಡಿಲ್ ಮಾರ್ಚನಲ್ಲಿ ಭಾಗವಹಿಸಿ ಮಾತನಾಡಿ ಫಹಲ್ಗಾಮ್ ನಲ್ಲಿ ಉಗ್ರರು 26 ಜನರನ್ನು ಕೊಂದಿದ್ದು ಅಕ್ಷಮ್ಯ ಅಪರಾಧ ಇಂತವರನ್ನು ಸುಮ್ಮನೆ ಬಿಡಬಾರದು ಉಗ್ರಗ್ರಾಮಿಗಳು  ನಡೆಸಿದ ದಾಳಿ ಇಡೀ ಮನುಕುಲದ ಮೇಲೆ ಪರಿಣಾಮ ಬೀರಿದೆ ಅವರು ನಡೆಸಿದ ದಾಳಿಯಿಂದ ಪ್ರತಿ ಭಾರತೀಯರಿಗೂ ಗಾಯವಾಗಿದೆ ನಾವೆಲ್ಲ ಒಂದೇ ಭಾರತೀಯ ತಾಯಿಯ ಮಕ್ಕಳು ಇಂತಹ ಘಟನೆ ನಡೆಯಬಾರದಿತ್ತು ಇಂತಹ ದುಷ್ಟ ಉಗ್ರರನ್ನು ಎಲ್ಲಿ ಅಡಗಿರಲಿ ಅವರನ್ನು ಕೊಚ್ಚಿ ಹಾಕಬೇಕು ದುಷ್ಟ ಉಗ್ರಗಾಮಿಗಳಿಗೆ ಹೃದಯವೇ ಇಲ್ಲ ಅವರು ಯಾವ ಜಾತಿಗೂ ಸೇರಿದವರಲ್ಲ  ಅವರು ಮಾನವರೇ ಅಲ್ಲ ಎಂದರು ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಹೇಳಿದರು. ನಂತರ  ಅಬ್ದುಲ್ ಗನಿ ಸಾಬ್ ಮುಖಂಡರು ಮಾತಾಡಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪಕ್ಷದ ಏಜೆಂಟರು, ಬಕೀಟ್ ಮಾಧ್ಯಮ ಗಳು ಸತ್ಯಂಶ ವರದಿಗಳನ್ನ ತಿರುಚಿ  ದೇಶದಲ್ಲಿ ಶಾಂತಿ ಸೌಹಾರ್ದತೆ  ಹಾಳು ಮಾಡುತ್ತಿರುವುದಲ್ಲದೆ  ದ್ವೇಷ ಭಾಷಣಗಳಿಂದ  ಯುವಕರನ್ನು ದಾರಿ ತಪ್ಪಿಸುವ  ಹೊನ್ನಾರಗಳು  ಮಾಡುತ್ತಿರುವುದು  ಖಂಡನೀಯ  ಈ ಘಟನೆಯಲ್ಲಿ ಕಾಶ್ಮೀರಿ ಮುಸ್ಲಿಂಮರು ಸಹ  ತಮ್ಮ ಪ್ರಾಣ ಪಣಕಿಟ್ಟು ರಕ್ಷಣೆಯಲ್ಲಿ ತೊಡಗಿರುವುದು  ಜಗತ್ ಜಾಹಿರಾದೆ. ನಾವೆಂದಿಗೂ ದೇಶದಲ್ಲಿ ರಾಮ ರಹಿಮರಂತೆ ಅಣ್ಣ ತಮ್ಮಂದಿರಂತೆ ಇದ್ದೇವೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ 

ನ್ಯಾಯ ವಾದಿಗಳಾದ ನಬಿ ಶೇಡ್ಮಿ,

 ಪುರಸಭೆ ಸದಸ್ಯ  ಮಸೂದ್ ಪಾಷಾ, ಯುವ ಮುಖಂಡರಾದ ರಾಜಾ ನಧಾಫ್,ಶಫಿ ಶೇರು,ಹುಸೇನ್  ಶೇಡ್ಮಿ, ನಿಸಾರ್ ಅಹ್ಮದ್,

ಪುರಸಭೆ ಸದಸ್ಯ ಶಬ್ಬಿರ್ ಚೌದ್ರಿ, 

ಅಜ್ಜು ಮೆಕ್ಯಾನಿಕ, ಚಾಂದ್ ಶೇಡ್ಮಿ, ಹುಸೇನ್, ಖಲೀಲ್ ಶೇಡ್ಮಿ, ಮಹಿಬೂಬ್ ಕುಷ್ಟಗಿ,

 ರಿಯಾಜ್ ಖಾಜಿ, ಖದೀರ್ ಚೌದ್ರಿ, ನೂರ್ ಮೌಲಾನಾ, ಆದಮ್ ಹಾಜಿ, ನಬಿಸಾಬ್, ಬಾಹರ ಅಲಿ, ಖಾಜಾ ಶಿಕಾರಿ, ನಿಸಾರ ಅಹ್ಮದ್, ಇಮಾಮ್ ಕಾತರಕಿ ಸೀರೆಯಂತೆ ಅನೇಕ ಮುಸ್ಲಿಂ ಸಮುದಾಯದ ಯುವಕರು  ಮುಖಂಡರು ಇದ್ದರು. ಪಿ ಎಸ್ ಐ ಮುದ್ದು ರಂಗ ಸ್ವಾಮಿ ಸೂಕ್ತ ಬಂದೋಬಸ್ತ್ ಕೈ ಗೊಂಡಿದ್ದರು.

What's Your Reaction?

like

dislike

love

funny

angry

sad

wow