ಮಳೆಯನ್ನು ಲೆಕ್ಕಿಸದೆ ಆರಾಧ್ಯ ದೈವ ಬೆಟ್ಟದ ಮಲ್ಲಿಕಾರ್ಜುನ ದರ್ಶನಕ್ಕೆ ಭಕ್ತಸಾಗರ
ಮಸ್ಕಿಯ ಬೆಟ್ಟದ ಮೇಲೆ ಶ್ರಾವಣಮಾಸದ ಕೊನೆಯ ಸೋಮವಾರ ಮಲ್ಲಿಕಾರ್ಜುನನ ದರ್ಶನಕ್ಕೆ ಸಾಲುಗಟ್ಟಿದ ಭಕ್ತರು
ಮಸ್ಕಿ: ಪಟ್ಟಣದ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನನ ದರ್ಶನಕ್ಕೆ ಶ್ರಾವಣಮಾಸದ ಕೊನೆಯ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರು.
ಬೆಳಿಗ್ಗೆ 3 ಗಂಟೆಯಿಂದಲೇ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಮಲ್ಲಿಕಾರ್ಜುನನ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.
ವಂಶ ಪಾರಂಪರಿಕ ಮಲ್ಲಿಕಾರ್ಜುನ ದೇವರ ಅರ್ಚಕರಾದ
ಸಿದ್ದಯ್ಯ ಹೆಸರೂರು ಹಿರೇಮಠ ರವರ ನೇತೃತ್ವದಲ್ಲಿ
ಮಲ್ಲಿಕಾರ್ಜುನ ದೇವರ
ಅಭಿಷೇಕ ಸೇರಿದಂತೆ ಮಲ್ಲಯ್ಯನ
ವಿಗ್ರಹಕ್ಕೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರಿಂದ ಪೊಲೀಸರು ಸ್ಥಳದಲ್ಲಿದ್ದು ಸಾಲಿನಲ್ಲಿ ತೆರಳುವಂತೆ ಭಕ್ತರಿಗೆ ಸೂಚಿಸುತ್ತಿದ್ದ ದೃಶ್ಯಕಂಡು ಬಂತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಯಿತು.
ಸಂಜೆ 6 ಗಂಟೆಗೆ ಬೆಟ್ಟದ ಮೇಲಿಂದ ಮಲ್ಲಿಕಾರ್ಜುನನ ದೇವರ
ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಪಟ್ಟಣಕ್ಕೆ ಕರೆದುಕೊಂಡು ಬರಲಾಯಿತು.
ಸಂಜೆ ವೇಳೆ ಪಟ್ಟಣದಲ್ಲಿರುವ ಮಲ್ಲಿಕಾರ್ಜುನನ ಉಚ್ಚಾಯ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ವರೆಗೆ
ಎಳೆಯುವ ಮೂಲಕ ಒಂದು ತಿಂಗಳ ಶ್ರಾವಣ ಮಾಸಕ್ಕೆ ವೈಭವದ ತೆರೆ ಎಳೆಯಲಾಯಿತು.
What's Your Reaction?






